ಚಂದ್ರವಳ್ಳಿ ನ್ಯೂಸ್, ಹೊಸಪೇಟೆ (ವಿಜಯನಗರ ಜಿಲ್ಲೆ):
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಜಮೀರ್ ಅಹಮದ್ ಖಾನ್ ಜಿಲ್ಲಾ ಉಸ್ತುವಾರಿ ಸಚಿವರಿಂದ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಸಂಜನಾ ಬಾಯಿ 600ಕ್ಕೆ 597ಅಂಕ ಪಡೆದಿದ್ದು , ಹಾಗೂ ನಿರ್ಮಲ 600ಕ್ಕೆ 596, 597ಅಂಕ ಪಡೆದಿದ್ದು, ವಿದ್ಯಾರ್ಥಿ ನಿಯರಿಗೆ ಬಹುಮಾನವಾಗಿ ತಲಾ 5ಲಕ್ಷ ರೂ. ಗಳ ಚೆಕ್, ಹಾಗೂ ಆಕ್ಟಿವಾ ಹೊಂಡ ಸ್ಕೂಟಿ ಬೈಕ್ ಯನ್ನು ನೀಡಿ ಸನ್ಮಾನಿಸಿದರು. 18 ವರ್ಷ ಒಳಗಿನವರಾಗಿರುವುದರಿಂದ ಮೋಟಾರ್ ಸೈಕಲ್ ನೋಂದಣಿಯನ್ನು ತಮ್ಮ ಮನೆಯ ಹಿರಿಯರ ಹೆಸರಿಗೆ ನೊಂದಣಿ ಮಾಡಲು ಸೂಚಿಸಿದರು.
590 ಅಂಕ ಗಳಿಸಿದ ಮತ್ತಿಬ್ಬರು ಯಲ್ಲಮ್ಮ ಶಿವಪುರ ಗ್ರಾಮ, ದ್ವಿತೀಯ ಪಿಯುಸಿ,ಕಲಾವಿಭಾಗದಲ್ಲಿ 590 ಅಂಕ ಪಡೆದಿದ್ದು . ನಾಗಲಕ್ಷ್ಮಿ ಒಡೆಯರ್ ಹ್ಯಾಳ್ಯ ಗ್ರಾಮ, ದ್ವಿತೀಯ ಪಿಯುಸಿ, ಕಲಾವಿಭಾಗದಲ್ಲಿ 590 ಅಂಕಗಳನ್ನು ಪಡೆದಿದ್ದು. ನಾವು 590ಅಂಕ ಪಡೆದಿದ್ದೇವೆ ನಮಗೆ ಲ್ಯಾಪ್ ಟಾಪ್ ಬೇಕೆಂದು ಅರ್ಜಿ ಸಲ್ಲಿಸಲು ಸಾಲಿನಲ್ಲಿ ನಿಂತಿದ್ದರು. ವರನ್ನು ಕೆರೆಯಿಸಿ ತಲಾ ಒಂದು ಲಕ್ಷ ನಗದು ಹಣ ನೀಡಿ ಗೌರವಿಸಿದರು. ನಂತರ ಸಚಿವರು ಸ್ವತಹ ಬೈಕ್ ಏರಿ ವಿದ್ಯಾರ್ಥಿನಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಚಾಲನೆ ಮಾಡಿದರು.
13ನೇ ತಾರೀಕಿನಂದು ಎಸ್ ಎಸ್ ಎಲ್ ಸಿ ಯಲ್ಲಿ625ಕ್ಕೆ 621ಅಂಕ ಪಡೆದ ಶೇ.99ಕ್ಕೂ ಹೆಚ್ಚು ಅಂಕ ಪಡೆದು ಪಾಸ್ ಆಗಿರುವಂತ ಜಿಲ್ಲೆಯ ಆರು ವಿದ್ಯಾರ್ಥಿಗಳಿಗೆ ಹಾಗೂ ತಲಾ ಒಂದು ಬೈಕ್ ಅನ್ನು, ಮತ್ತು ಅಭಿಷೇಕ ಶೇ.99.9 ಪಡೆದಿರುವುದರಿಂದ ಈತನಿಗೆ ಬೈಕ್ ಜೊತೆ 1 ಲಕ್ಷ ರೂ.ನಗದು ಬಹುಮಾನ ಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಈ ತುಕಾರಾಂ ಸಂಸದರು, ಎಸ್ ಟಿ ಶ್ರೀನಿವಾಸ್ ಶಾಸಕರು ಕೂಡ್ಲಿಗಿ , ಹೆಚ್.ಎನ್.ಎಫ್. ಇಮಾಮ್ ನಿಯಾಜಿ ಹೂಡಾ ಅಧ್ಯಕ್ಷರು, ಶಿರಾಜ್ ಶೇಖ್ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ, ಕುರಿಶಿವಮೂರ್ತಿ ಪಂಚ ಯೋಜನೆಗಳ ಜಿಲ್ಲಾಧ್ಯಕ್ಷ, ಎಂ. ಎಸ್.ದಿವಾಕರ್ ಜಿಲ್ಲಾಧಿಕಾರಿಗಳು,
ಕಾರ್ಯ ನಿರ್ವಾಹಕ ಅಧಿಕಾರಿ ನಾಂಗ್‌ಜೈ ಮೊಹಮ್ಮದ್ ಅಲಿ ಅಕ್ರಮ್ ಶಾ, ಬಿ.ಎಲ್. ಶ್ರೀಹರಿ ಬಾಬು ಪೊಲೀಸ್ ಅಧಿಕ್ಷಕರು ವಿಜಯನಗರ ಜಿಲ್ಲೆ, ಎಮ್. ಶೃತಿ ಮಳ್ಳಪ್ಪ ಗೌಡ್ರ ತಹಶೀಲ್ದಾರ್ ಹೊಸಪೇಟೆ ಇತರರಿದ್ದರು.