ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆಯ ಶೇಕಡ 5ರ ರಿಯಾಯಿತಿ ಅವಧಿಯನ್ನು 2025ರ ಜೂನ್ 30 ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಚಿತ್ರದುರ್ಗ ನಗರದ ಆಸ್ತಿ ಮಾಲೀಕರು ತಮ್ಮ ಮನೆ, ನಿವೇಶನಗಳಿಗೆ ಸಕಾಲದಲ್ಲಿ ತೆರಿಗೆಯನ್ನು ಪಾವತಿಸಿ, ಶೇಕಡ 5ರ ರಿಯಾಯಿತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಕೋರಿದ್ದಾರೆ.