ಹೊಸ ಕಟ್ಟಡಕ್ಕೆ ಡಿಸಿ ಕಚೇರಿ ಸ್ಥಳಾಂತರ ಆಗಲಿ ಎನ್ನುವ ಆಸೆ ಇದೆ- ಸಚಿವ ಕೃಷ್ಣಭೈರೇಗೌಡ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಕುಂಚಿಗನಾಳ್ ಕಣಿವೆಯಲ್ಲಿ ನಿರ್ಮಿಸಿರುವ ನೂತನ ಜಿಲ್ಲಾಧಿಕಾರಿಗಳ ಕಟ್ಟಡದಲ್ಲೇ ಡಿಸಿ ಕಚೇರಿ ನಡೆಯಬೇಕು ಎನ್ನುವ ಅಭಿಪ್ರಾಯ ನನಗೂ ಇದೆ. ಆದರೆ ಅಂತಿಮ ತೀರ್ಮಾನ ಮಾತ್ರ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀರ್ಮಾನವೇ ಅಂತಿಮ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದರು.
ಚಿತ್ರದುರ್ಗದ ಹೊಸ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಸಂದರ್ಭದಲ್ಲಿ ಸಾಕಷ್ಟು ತಪ್ಪುಗಳನ್ನ ಮಾಡಿದ್ದರು. ಆದರೆ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಇರುವ ಅನುದಾನವನ್ನು ಬಿಡುಗಡೆ ಮಾಡಿ
, ರಸ್ತೆ ಮತ್ತು ನೀರಿನ ಸೌಲಭ್ಯ ಒದಗಿಸಲಾಗಿದೆ. ತ್ರಿಶಂಕು ಸ್ಥಿತಿಯಲ್ಲಿ ಇದ್ದ ಕಟ್ಟಡಕ್ಕೆ ಕಾರ್ಯರೂಪಕ್ಕೆ ತರುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.

- Advertisement - 

ನಾವು ಸಾಕಷ್ಟು ಶ್ರಮವಹಿಸಿ ನೂತನ ಕಟ್ಟಡ ಕಟ್ಟಿದ್ದೇವೆ. ಅಲ್ಲಿಗೆ ಶಿಫ್ಟ್ ಮಾಡುವುದು ಒಳ್ಳೆಯ ಆಲೋಚನೆ ಇದ್ದರೂ, ನಾನು ವೈಯಕ್ತಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿ ಅಲ್ಲಿಗೆ ಶಿಫ್ಟ್ ಆಗಬೇಕು ಎನ್ನುವಾಗಿದೆ. ನನಗೂ ಹೊಸ ಕಟ್ಟಡದಲ್ಲೇ ಡಿಸಿ ಕಚೇರಿ ನಡೆಯಬೇಕು ಎನ್ನುವುದು ವೈಯಕ್ತಿಕವಾದ ಆಸೆ. ಆದರೆ ಸಾರ್ವಜನಿಕರು ಮತ್ತು ಜಿಲ್ಲಾ ಸಚಿವರು, ಶಾಸಕರು ಒಗ್ಗೂಡಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ತೀರ್ಮಾನ ಆದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವರು ಅಸಹಾಯಕತೆ ತೋರಿದರು.

ನಾನು ಕಂದಾಯ ಇಲಾಖೆ ವಹಿಸಿಕೊಂಡ ಮೇಲೆ ಸಾಕಷ್ಟು ಸಮಸ್ಯೆ ಇತ್ತು. ಆದರೆ ಸಕಾಲದಲ್ಲಿ ತೆಗೆದುಕೊಂಡು ತೀರ್ಮಾನದಿಂದಾಗಿ ಇಡೀ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆದರೆ ಹೊಸ ಕಚೇರಿಯು ನಗರದಿಂದ ದೂರವಿರುವ ಕಾರಣ ಸ್ಥಳಾಂತರದ ಬಗ್ಗೆ ಸಾರ್ವಜನಿಕರಲ್ಲಿ ಕೇಳಿಬರುತ್ತಿರುವ ಅಸಮಾಧಾನ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಹೊಸ ಕಟ್ಟಡ ಹಾಗೂ ಸ್ಥ್ಥಳವನ್ನು ಚಿತ್ರದುರ್ಗ ಮೆಡಿಕಲ್ ಕಾಲೇಜಿಗೆ ನೀಡಲು ಚಿಂತನೆ ನಡೆಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುವರು ಎಂದು ಸಚಿವ ಕೃಷ್ಣ ಭೈರೇಗೌಡ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.

- Advertisement - 

ಚಿತ್ರದುರ್ಗ ಸಮೀಪದ ಕುಂಚಿಗನಾಳ್ ಕಣಿವೆಯ ಸುಮಾರು 40 ಎಕರೆ ಜಾಗದಲ್ಲಿ 47 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ಜಿಲ್ಲಾಧಿಕಾರಿಗಳ ಕಟ್ಟಡ ಸಂಪೂರ್ಣಗೊಂಡಿದ್ದು ಇದೇ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಚಂದ್ರವಳ್ಳಿ ದಿನ ಪತ್ರಿಕೆ ಗಮನ ಸೆಳೆಯುವ ಲೇಖನ ಪ್ರಕಟಿಸಿತ್ತು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಇದು ಒಳ್ಳೆಯದು. ಕಂದಾಯ ಸಚಿವ  ಕೃಷ್ಣಭೈರೇಗೌಡರಿಗೆ ಇರುವ ದೂರದೃಷ್ಠಿ ಜಿಲ್ಲೆಯ ಜನಪ್ರತಿನಿಧಿಗಳಿಗೆ  ದೂರದೃಷ್ಠಿ ಇದ್ದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಹದಾರಿಯಾಗಲಿ.
ರಾಜ್ಯದ ಹಾವೇರಿ
, ದಾವಣಗೆರೆ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನಗರದ ಹೊರ ಭಾಗದಲ್ಲೇ ಇದ್ದು ಆ ಜಿಲ್ಲೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ.

60 ವರ್ಷಗಳಿಂದ ಹೆಮ್ಮರವಾಗಿ ಬೆಳೆದು ನಿಂತು ಫಲ ನೀಡುತ್ತಿರುವ ತೋಟಗಾರಿಕೆ ಜಾಗವನ್ನ ವಶ ಪಡಿಸಿಕೊಳ್ಳದೇ ಈಗಾಗಲೇ ಪೂರ್ಣಗೊಂಡಿರುವ ಕುಂಚಿಗನಾಳ್ ಕಣಿವೆಯಲ್ಲೇ ಡಿಸಿ ಕಚೇರಿ ಸ್ಥಳಾಂತರ ಆಗಲಿ ಎನ್ನುವುದು ಮುಖ್ಯ. ಆದಾದಗಿದ್ದರೆ ತೋಟಗಾರಿಕೆ ಪಕ್ಕದಲ್ಲೇ 8 ಎಕರೆ ಜಾಗ ಇದ್ದು ಆ ಜಾಗದಲ್ಲಿ ನೂತನ ಜಿಲ್ಲಾಧಿಕಾರಿಗಳ ಕಟ್ಟಡ ನಿರ್ಮಿಸಿದರೆ ಸರ್ವರಿಗೂ ಅನುಕೂಲ ಆಗಲಿದೆ. ಆ ಜಾಗದ ಸುತ್ತ ಮುತ್ತ ವಿಶಾಲವಾದ ರಸ್ತೆಗಳಿವೆ. ಯಾವುದೇ ವಸತಿ ಪ್ರದೇಶ ಅಲ್ಲಿ ತಲೆ ಎತ್ತಿಲ್ಲ. ಇದರ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರುಗಳು ಗಂಭೀರ ತೀರ್ಮಾನ ಮಾಡುವ ಅಗತ್ಯವಿದೆ.

Share This Article
error: Content is protected !!
";