ಮಕ್ಕಳಿಗೆ ಮಾನಸಿಕವಾಗಿ ಧೈರ್ಯ ತುಂಬಲು ಬೇಸಿಗೆ ಶಿಬಿರಗಳು ಅತ್ಯಗತ್ಯ: ಡಾ.ಐಶ್ವರ್ಯ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಮಾನಸಾಧಾರ ಟ್ರಸ್ಟ್, ಮನಃಸ್ಫೂರ್ತಿ ಮಕ್ಕಳ ಕಲಿಕಾ ಕೇಂದ್ರ ಹಾಗೂ ನಮ್ಮ ಹಳ್ಳಿ ಥಿಯೇಟರ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮನಃಸ್ಫೂರ್ತಿ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಪಾಸಿಟಿವ್ ಮೈಂಡ್ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಡಾ.ಐಶ್ವರ್ಯ ರವರು “ಮಕ್ಕಳಿಗೆ ಪ್ರಸ್ತುತ ಒತ್ತಡದ ಬದುಕಿದೆ. ಅದನ್ನು ದೂರಗೊಳಿಸಲು ಬೇಸಿಗೆ ಶಿಬಿರಗಳ ಪಾತ್ರ ಬಹಳ ಮುಖ್ಯ.

ಪೋಷಕರು ಇದನ್ನು ಮನಗಂಡು ಇಂತಹ ಶಿಬಿರಗಳಿಗೆ ಮಕ್ಕಳನ್ನು ಸೇರಿಸಬೇಕು, ಹಾಗೆಯೇ ಶಿಬಿರಗಳು ಮಕ್ಕಳಿಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ಮಾನಸಿಕವಾಗಿ ಧೈರ್ಯವನ್ನು ತುಂಬುತ್ತದೆ ಮತ್ತು ಅವರನ್ನು ಮೊಬೈಲ್ ನಿಂದ ದೂರವಿಡುವುದಕ್ಕೆ ಸಹಕಾರಿಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಈ ಶಿಬಿರ ಬಹಳ ಉಪಯುಕ್ತವಾಗಿದೆ” ಎಂದರು.

- Advertisement - 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನಸ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಜನಿ.ಎ.ಪೈ ರವರು ಮಾತನಾಡಿ “ಮನಃಸ್ಫೂರ್ತಿ ಬೇಸಿಗೆ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಇದು ಒಂಬತ್ತನೇ ವರ್ಷದ ಶಿಬಿರವಾಗಿದೆ. ಮುಖ್ಯವಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಈ ಶಿಬಿರವು ರೂಪುಗೊಂಡಿದ್ದು ನಾಟಕ, ಚಿತ್ರಕಲೆ, ಹಾಡು, ಕ್ರಾಫ್ಟ್, ಪರಿಸರದ ಅರಿವು…. ಹೀಗೆ ಇತ್ಯಾದಿ ವಿಷಯಗಳನ್ನು ಇಂದಿನಿಂದ ಹೇಳಿಕೊಡಲಾಗುತ್ತದೆ” ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ಮಂಜುನಾಥ ಸ್ವಾಮಿ, ಶಿಬಿರದ ಸಂಚಾಲಕಿ ರಂಗನಾಯಕಿ, ಜ್ಯೋತಿ ಅರುಣ್ ಕುಮಾರ್, ಪ್ರತೀಕ್.ಸಿ.ಎಂ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಾದ ಸ್ಫೂರ್ತಿ.ವೈ.ಹೆಚ್, ಮಂಜುಳ, ಜ್ಯೋತಿ, ರಾಹುಲ್, ಶಶಾಂಕ್, ಮಂಜು.ಆರ್.ಪಿ, ನಮ್ಮ ಹಳ್ಳಿ ಥಿಯೇಟರ್ ನ ಸದಸ್ಯರು, ಮನಃಸ್ಫೂರ್ತಿ ಮಕ್ಕಳ ಕಲಿಕಾ ಕೇಂದ್ರದ ಶಿಕ್ಷಕರು ಉಪಸ್ಥಿತರಿದ್ದರು.

- Advertisement - 

 

Share This Article
error: Content is protected !!
";