ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು, ತೂಬಗೆರೆ ಹೋಬಳಿ ಘಾಟಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಸೇರಿದ ಒಟ್ಟು ಎಂಟು ಅಂಗಡಿಗಳ ಗುತ್ತಿಗೆ ಅವಧಿ ಮುಕ್ತಾಯಗೊಂಡಿರುವುದರಿಂದ ಅನಧಿಕೃತ ಬಾಡಿಗೆದಾರನ್ನು ಖುಲಾಸೆಪಡಿಸಲು ಪಿಪಿಎ ಪ್ರಾಧಿಕಾರ ಅಧಿಕಾರಿಯು ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಆದೇಶದ ಮೆರೆಗೆ ತೆರವು ಕಾರ್ಯ ಮಾಡಲಾಯಿತು.
ಆಯುಕ್ತರ ಆದೇಶದನ್ವಯ ದಿನಾಂಕ 25-10-2024 ರಂದು ದೇವಾಲಯದ ಮುಂದೆ ಎಡ ಮತ್ತು ಬಲ ಬಾಗದ ಎಂಟು ಅಂಗಡಿಗಳನ್ನು ಖುಲ್ಲಾ ಪಡಿಸಿ ದೇವಾಲಯದ ವಶಕ್ಕೆ ಪಡೆದು ಬೀಗ ಹಾಕಿ ಮುದ್ರೆ ಹಾಕಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ. ನಾರಾಯಣಸ್ವಾಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಜರಾಯಿ ತಹಶೀಲ್ದಾರ್ ಜೆ.ಜೆ.ಹೇಮಾವತಿ ಘಾಟಿ ದೇವಾಲಯದ ಗ್ರಾಮಾಂತರ ಉಪ ಠಾಣೆಯ ಪೊಲೀಸ್ ಸಿಬ್ಬಂದಿ ದಪೇದಾರ್ ರಂಗನಾಥ್ ಪೊಲೀಸ್ ಸಿಬ್ಬಂದಿ ಹಾಗು ದೇವಾಲಯದ ಸಿಬ್ಬಂದಿ ಹಾಜರಿದ್ದರು.