ಕನಕಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾದ ಪಿವಿ ಮಲ್ಲಿಕಾರ್ಜುನಯ್ಯ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಸರ ಪ್ರೇಮಿ ಪಿ.ವಿ.ಮಲ್ಲಿಕಾರ್ಜುನಯ್ಯನವರು ವೃತ್ತಿಯಲ್ಲಿ ಶಿಕ್ಷಕರು
, ನಿವೃತ್ತಿ ನಂತರ ಸಾವಿರಾರು ಗಿಡ ಮರಗಳನ್ನು ನೆಟ್ಟು ಪೋಷಿಸಿ ಪರಿಸರ ಪ್ರೇಮಿಗಳಾಗಿ ರೂಪುಗೊಂಡವರು.

ಇನ್ನೂ ನಿವೃತ್ತಿಗೆ ಮೂರು ವರ್ಷ ಮುಂಚೆಯೇ ಪುರಾತತ್ವ ಮತ್ತು ಪ್ರಾಚ್ಯವಸ್ತು ಸರ್ವೆಕ್ಷಣಾ ಇಲಾಖೆಯ ಅನುಮತಿಯೊಂದಿಗೆ ಚಿತ್ರದುರ್ಗದ ಕೋಟೆ ಆವರಣದಲ್ಲಿ ಇಲ್ಲಿಯವರೆಗೆ ನೀರು ನೈಸರ್ಗಿಕ ಗೊಬ್ಬರವನ್ನು ಹಾಕುತ್ತಾ ಸಾವಿರಾರು ಗಿಡ ಮರಗಳನ್ನು ಬೆಳೆಸುತ್ತಾ ಪೋಷಣೆ ಮಾಡುತ್ತಾ ಬರುತ್ತಿದ್ದಾರೆ.

ಇವರ ಸೇವೆ ಗುರುತಿಸಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ.

 ಅನೇಕ ಸಂಘ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಅವುಗಳಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ, ನಾಡಪ್ರಭು ಕೆಂಪೆಗೌಡ ರಾಜ್ಯ ಪ್ರಶಸ್ತಿ, ಪರಿಸರ ಪ್ರೇಮಿ ಪ್ರಶಸ್ತಿ, ವೃಕ್ಷಮಿತ್ರ ಪ್ರಶಸ್ತಿ, ವೃಕ್ಷ ರಕ್ಷಕ ಪ್ರಶಸ್ತಿ, ಸಹೃದಯ ಪರಿಸರ ಪ್ರೇಮಿ ಪ್ರಶಸ್ತಿ, ಸೌರಭ ರತ್ನ ಪ್ರಶಸ್ತಿ,

ಕನ್ನಡ ಗಡಿನಾಡ ರತ್ನ ಪ್ರಶಸ್ತಿ, ಇನ್ನೂ ಅನೇಕ ಪ್ರಶಸ್ತಿಗಳು ಲಭಿಸಿದ್ದು ಇದೀಗ ದಿ.೧೮-೧೧-೨೦೨೪ರಂದು ತ ರಾ ಸು ರಂಗಮಂದಿರದಲ್ಲಿ ನಡೆದ ಚಿತ್ರದುರ್ಗ ಜಿಲ್ಲಾ ಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಚಿತ್ರದುರ್ಗ,

ಜಿಲ್ಲಾ ಕುರುಬರ ಸಮಾಜ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ-೨೦೨೪ರ ಸಮಾರಂಭದಲ್ಲಿ ಪರಿಸರ ಪ್ರೇಮಿ ಪಿ.ವಿ.ಮಲ್ಲಿಕಾರ್ಜುನಯ್ಯ ನವರಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇಂತಹ ಹತ್ತು ಹಲವು ಪ್ರಶಸ್ತಿಗಳು ಇವರಿಗೆ ಲಭ್ಯವಾಗಿದ್ದರೂ ತನ್ನ ಕಾಯಕ ಕೈಬಿಟ್ಟಿಲ್ಲ. ಇಂದಿಗೂ ಗಿಡ ಮರಗಳ ನೆಟ್ಟು ಪೋಷಣೆ ಮಾಡುತ್ತಿರುವುದು ನೋಡಿದರೆ ಯುವಕರು ನಾಚುವಂತೆ ಆಗಿದೆ. ಇವರ ಸತ್ಕಾರ್ಯಕ್ಕೆ ಚಂದ್ರವಳ್ಳಿ ಪತ್ರಿಕೆಯು ಅಭಿನಂದನೆ ಸಲ್ಲಿಸುತ್ತದೆ.

 

- Advertisement -  - Advertisement -  - Advertisement - 
Share This Article
error: Content is protected !!
";