ಸರ್ಕಾರಿ ನೌಕರರಿಗೆ ವೇತನವಿಲ್ಲ ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಂಡಲ್‌ ಬಡಾಯಿ ಕರ್ನಾಟಕ ಕಾಂಗ್ರೆಸ್
ಸರ್ಕಾರದ ಬಂಡವಾಳ ಬಯಲಾಗಿದೆ ! ಎಂದು ಜೆಡಿಎಸ್ ದೂರಿದೆ.

 ಕಾಂಗ್ರೆಸ್‌ ಸರ್ಕಾರದ ಬೊಕ್ಕಸ ಬರಿದಾಗಿರುವ ಪರಿಣಾಮ ಕಳೆದ 3 ತಿಂಗಳಿಂದ ಸರ್ಕಾರಿ ನೌಕರರಿಗೆ ವೇತನ ಪಾವತಿಸಿಲ್ಲ.

- Advertisement - 

ರಾಜ್ಯದ  2025ರ ಏಪ್ರಿಲ್‌- ಜೂನ್ ವರೆಗೆ 1 ಲಕ್ಷದ  17 ಸಾವಿರ 884 ಸರ್ಕಾರಿ ನೌಕರರಿಗೆ ಸಂಬಳ ನೀಡದೆ ಸತಾಯಿಸುತ್ತಿದ್ದು, ಅವರ ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಜೆಡಿಎಸ್ ಆರೋಪಿಸಿದೆ.

ಸಿಎಂ ಸಿದ್ದರಾಮಯ್ಯ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ 1,686 ನೌಕರರಿಗೆ ಕಳೆದ ಮೂರು ತಿಂಗಳಿನಿಂದ 15.70 ಕೋಟಿ ವೇತನ ಬಾಕಿ ಇದ್ದರೆ

- Advertisement - 

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಚಿವರಾಗಿರುವ ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆಯ 2,555 ನೌಕರರಿಗೆ 17.17 ಕೋಟಿ ಮೊತ್ತದಷ್ಟು ವೇತನ ಬಾಕಿ ಇದೆ ಎಂದು ಜೆಡಿಎಸ್ ತರಾಟೆ ತೆಗೆದುಕೊಂಡಿದೆ.

ಕಾಂಗ್ರೆಸ್‌ ಆಡಳಿತವಿರುವ ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಅವೈಜ್ಞಾನಿಕ ಗ್ಯಾರಂಟಿಯಿಂದಾಗಿ ಸರ್ಕಾರಿ ವೇತನಕ್ಕಾಗಿ ಸಾಲ ಪಡೆಯುವ ದುಸ್ಥಿತಿ ಇದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಸರ್ಕಾರಿ ನೌಕರರಿಗೆ 3 ತಿಂಗಳಿಂದಲೂ 834.89 ಕೋಟಿ ಮೊತ್ತದಷ್ಟು ವೇತನ ಪಾವತಿಸಿಲ್ಲ ಎಂದು ಜೆಡಿಎಸ್ ದೂರಿದೆ.

 

 

Share This Article
error: Content is protected !!
";