ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಈಗ ಭೋವಿ ಅಭಿವೃದ್ಧಿ ನಿಗಮದಲ್ಲಿಯೂ ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿದೆ ಎಂದು ಜೆಡಿಎಸ್ ಆರೋಪ ಮಾಡಿದೆ.
ಪರ್ಸಂಟೇಜ್‌ಕಾಂಗ್ರೆಸ್‌ಸರ್ಕಾರದಲ್ಲಿ ಪರ್ಸಂಟೇಜ್‌ಕೊಡದಿದ್ರೆ ಭೂ ಯೋಜನೆಯಡಿ ಒಂದಿಂಚು ಭೂಮಿಯೂ ಸಿಗುವುದಿಲ್ಲ. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಬ್ರೋಕರ್‌ಗಳನ್ನು ಇಟ್ಕೊಂಡು ಕೋಟ್ಯಂತರ ರೂ. ಕಮಿಷನ್‌ದಂಧೆ ನಡೆಸುತ್ತಾ ಫಲಾನುಭವಿಗಳ ರಕ್ತ ಹೀರುತ್ತಿದ್ದಾನೆ.
ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ನಿಮ್ಮ ಪಾಲು ಎಷ್ಟು ? ಸಚಿವರ ಪಾಲು ಎಷ್ಟು ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

