ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ವಿಶ್ವ ಹಿಂದೂ ಪರಿಷತ್‌ಹಾಗೂ ಭಜರಂಗದಳದ ಆಶ್ರಯದಲ್ಲಿ ನಡೆದ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಭಕ್ತರಿಂದ 15 ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ.
ಕಳೆದ 18 ದಿನಗಳ ಕಾಲ ನಡೆದ ಈ ಮಹಾಗಣಪತಿ ಉತ್ಸವದಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಗಣಪನ ದರ್ಶನ ಪಡೆದಿದ್ದರು.
ಹಿಂದೂ ಮಹಾಗಣಪತಿ ಸಮಿತಿಯಿಂದ ಗಣೇಶೋತ್ಸವದಲ್ಲಿ ಸಂಗ್ರಹವಾದ ಕಾಣಿಕೆ ಹುಂಡಿಯ ಎಣಿಕೆ ಮಾಡಲಾಗಿದ್ದು ಹುಂಡಿಯಲ್ಲಿ 12.50 ಲಕ್ಷ ರೂ. ನೋಟುಗಳು ಹಾಗೂ 2.50 ಲಕ್ಷ ರೂ. ಚಿಲ್ಲರೆ ಹಣ ಸಂಗ್ರಹವಾಗಿದೆ ಎನ್ನಲಾಗಿದೆ.

