ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಯುವಕರಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸುವ ನಿಟ್ಟಿನಲ್ಲಿ  “ಕಿಟ್ಟಿ ಕಪ್ ” ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡುವ ಮೂಲಕ  ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯ  ಟಿ ಎನ್ ಕೃಷ್ಣಪ್ಪ(ಕಿಟ್ಟಿ) ಆಚರಿಸಿಕೊಂಡಿದ್ದಾರೆ.

- Advertisement - 

 ಹುಟ್ಟುಹಬ್ಬದ ಶುಭಾಶಯ ಕೋರಿದ ನಂತರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪಿಳ್ಳ ಮುನಿಶಾಮಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಥಳೀಯವಾಗಿ ಬಿಜೆಪಿ ಪಕ್ಷವನ್ನು ಸಂಘಟಿಸಲು  ನಿರಂತರ ಶ್ರಮಿಸುತ್ತಿರುವ ಕೃಷ್ಣಪ್ಪ (ಕಿಟ್ಟಿ ) ಸಮಾಜದ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುವದಷ್ಟೇ ಅಲ್ಲದೇ ಅವರ ಸಮಸ್ಯೆಗಳ ಪರಿಹಾರಕ್ಕೆ ಸದಾ ಮುಂದಿದ್ದು, ಮುಂದಾಳತ್ವ ವಹಿಸಿ ಪರಿಹಾರ ಕಲ್ಪಿಸುವುದು ಶ್ಲಾಘನೀಯ ವಿಷಯವಾಗಿದೆ, ಅವರ ಸೇವಾ ಕರೆಗಳು ಹೀಗೆ ಮುಂದುವರೆಯಲಿ ಎಂದರು.

- Advertisement - 

 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯಗಳ ಕಡೆಗೆ ಗಮನ ಕೊಡುವ ಕೃಷ್ಣಪ್ಪ(ಕಿಟ್ಟಿ)ರವರು  ಗ್ರಾಮದ ಸಮಸ್ಯೆಗಳನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಿಗೆ ತಲುಪಿಸುವ ಪರಿ  ಮೆಚ್ಚುವಂಥದ್ದು , ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ಸಂಸದರ ಗಮನಕ್ಕೆ ತರುವ ಮೂಲಕ ಹಲವು ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯಾಗಿದ್ದಾರೆ ಎಂದರು.

 ಗ್ರಾಮ ಪಂಚಾಯತಿ ಸದಸ್ಯ  ಕೃಷ್ಣಪ್ಪ (ಕಿಟ್ಟಿ) ಮಾತನಾಡಿ  ಈ ಹಿಂದೆ ಬಿಜೆಪಿ ಪಕ್ಷದ ಸಿದ್ಧಾಂತವನ್ನು ಒಪ್ಪಿ  ಬಿಜೆಪಿ ನಾಯಕರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಆದ ಪಿಳ್ಳ ಮುನಿಶಾಮಪ್ಪ ರವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದೆವು.

- Advertisement - 

ಅಂದಿನಿಂದ ಇಂದಿನವರೆಗೂ  ಪಕ್ಷ ಸಿದ್ದಂತವನ್ನು ಬಿಟ್ಟುಕೊಡದೆ ಸರ್ಕಾರದ ಯೋಜನೆಗಳನ್ನು ಗ್ರಾಮಸ್ಥರಿಗೆ ತಲುಪಿಸುವುದು ಅವರಿಗೆ ಅನ್ಯಾಯವಾದಾಗ  ನ್ಯಾಯಪರ ಹೋರಾಟಗಳನ್ನು ಮಾಡುವ ಮೂಲಕ ಸದಾ ಅವರ ಬೆಂಬಲವಾಗಿ ನಿಂತಿದ್ದೇನೆ , ಜೊತೆಗೆ ನಿರಂತರ ನಮ್ಮ ಕೈಲಾದಷ್ಟು ಸೇವೆ ಮಾಡಿಕೊಳ್ಳುತ್ತಾ ಬರುತ್ತಿದ್ದೇವೆ, ಮುಂದೆಯೂ ಸಹ  ನಮ್ಮ ಜನರ ಧ್ವನಿಯಾಗಿ  ಅನ್ಯಾಯದ ವಿರುದ್ಧವಾಗಿ ಹೋರಾಟಗಳನ್ನು ನಡೆಸುತ್ತಾ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ನನ್ನ ಕೈಲಾದ ಸೇವೆಯನ್ನು  ಸದಾ ಮಾಡುತ್ತೇನೆ ಎಂದರು.

 ಈ ಸಲದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ  ನಾರಾಯಣಪ್ಪ,ಆರ್ ಪ್ರತಾಪ್, ತೂಬಗೆರೆ ಬಿಜೆಪಿ ಅಧ್ಯಕ್ಷ  ವಾಸು, ಗ್ರಾಮ ಪಂಚಾಯತ್ ಸದಸ್ಯರಾದ ಪುಟ್ಟರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ  ಗಂಗಾಧರ್, ರಂಗರಾಜು, ಸುರೇಶ್, ಮುನೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

Share This Article
error: Content is protected !!
";