ಶತಮಾನದಲ್ಲೇ ಕಾಫಿ ದಾಖಲೆ ಬೆಲೆ ಪ್ಲಾಂಟರ್ ಮುಖದಲ್ಲಿ ಮಂದಹಾಸ

News Desk

ಕಾಫಿ ನಾಡಿನಲ್ಲಿ  ಘಮ ಘಮಿಸುವ ಕಾಫಿ…
 ಶತಮಾನದಲ್ಲೇ ಕಾಫಿ ದಾಖಲೆ ಬೆಲೆ ಪ್ಲಾಂಟರ್ ಮುಖದಲ್ಲಿ ಮಂದಹಾಸ
ಚಂದ್ರವಳ್ಳಿ ನ್ಯೂಸ್
, ಚಿಕ್ಕಮಗಳೂರು:

 ಆಸ್ವಾದಕ್ಕೆ ಅವಿದ್ಯಕ್ಕೆ ಹೆಸರಾದ ಕಾಫಿ ಬಗೆಗೆ ತಿಳಿದ  ನಾವು ಜಗತ್ತಿನಾದ್ಯಂತ  ಜನಪ್ರಿಯವಾಗಿರುವ ಈ ಕಾಪಿ ಎಲ್ಲರಿಗೂ ಪ್ರಿಯವಾದ ಪಾನೀಯ. ಬೆಳಿಗ್ಗೆ ಎಚ್ಚರವಾದಾಗ ಅರ್ಧ ಕಾಫಿ, ತಿಂಡಿಯ ನಂತರ ಕಾಫಿ, ಕಾಫಿ ಇಲ್ಲದೆ ಸ್ಪೂರ್ತಿ ಇಲ್ಲ ಕಾಫಿಯಲ್ಲಿರುವ ಹಲವಾರು ಗುಣಗಳು ಮನುಷ್ಯ ಕೋಟಿಯನ್ನು ಕಾಫಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರಿಯವಾಗಿ ವೇದಕವಾಗಿ ಮಧುರವಾಗಿ ಹಬ್ಬಿ, ತಬ್ಬಿದೆ ಹಳ್ಳಿಯಿಂದ ದಿಲ್ಲಿಯವರೆಗೂ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಹಲವಾರು ದೇಶಗಳಲ್ಲಿ ಆಕರ್ಷಿಸಿದೆ. ಇದೀಗ ಈ ಕಾಫಿಗೆ ಶತಮಾನದಲ್ಲೇ ಕಂಡರಿಯದ ಕಾಫಿ ಬೆಲೆ ಬಂದಿದ್ದು ಪ್ಲಾಂಟರ್ ಮುಖದಲ್ಲಿ ಮಂದಹಾಸ ಬೀರಿದೆ. ಬನ್ನಿ ಹಾಗಾದ್ರೆ ಒಂದು ಕಪ್ ಕಾಫಿ ಕುಡಿದು ಕಾಫಿಯ ಇತಿಹಾಸವನ್ನು ಒಮ್ಮೆಮೆಲಕು ಹಾಕೋಣ.

   ಕರ್ನಾಟಕದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಒಂದು ವಿಶಿಷ್ಟವಾದ ಸ್ಥಾನಮಾನ ಇದೆ. ಇಲ್ಲಿನ ನೆಲ, ಜಲ, ಪ್ರಕೃತಿ ಸಂಪತ್ತು ಇಲ್ಲಿನ ಜನರ ಸೌಮ್ಯ ಗುಣ, ಸಜ್ಜನಿಕೆ ಎಲ್ಲೆಡೆ ಪ್ರಸಿದ್ಧಿಯಾಗಿದೆ.

    ಪ್ರಕೃತಿಯ ಮಡಿಲಲ್ಲಿ ರಮಣೀಯವಾದ ಸ್ಥಾನದಲ್ಲಿ ವೈವಿಧ್ಯತೆಗಳೊಡನೆ ಏಕತೆಯನ್ನು  ಸಾಧಿಸುತ್ತಾ ಬಂದಿರುವುದೇ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ .

   ಶತ ಶತಮಾನಗಳಿಂದ ಕಾಫಿ ಉದ್ಯಮವು ಕರ್ನಾಟಕದಲ್ಲಿ ವಿಶಿಷ್ಟ ಕೃಷಿ ಉದ್ಯಮವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿರುವ ಈ ಘಮ ಘಮಿಸುವ ಕಾಫಿ ಈಗ ವಿಶ್ವದಲ್ಲಿಯೇ ದಾಖಲೆ ಕಾಫಿಗೆ ಬೆಲೆ ಬಂದಿರುವುದು ನಮ್ಮ ಪ್ಲಾಂಟರ್ ಗಳ ಮುಖದಲ್ಲಿ ಮಂದಹಾಸ ಮೂಡಿದೆ.

     ಚಿಕ್ಕಮಗಳೂರು ಜಿಲ್ಲೆಯು ಬಹುಭಾಗ ದಟ್ಟ ಅರಣ್ಯ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ಮಲ್ನಾಡು ಪ್ರದೇಶ. ಉಳಿದ ಪ್ರದೇಶ ಪೂರ ಬಯಲುಸೀಮೆ. ಈ ಜಿಲ್ಲೆಯ ಪೂರ್ವಕ್ಕೆ ಹಾಸನ, ತುಮಕೂರು ಜಿಲ್ಲೆಗಳು ಬಂದರೆ…. ಪಶ್ಚಿಮಕ್ಕೆ ಉಡುಪಿ ಜಿಲ್ಲೆ ಕೂಡ ಬರುತ್ತದೆ. ಪಶ್ಚಿಮಘಟ್ಟ ಸಾಲಿನಲ್ಲಿ ಬರುವ ದಕ್ಷಿಣ ಕನ್ನಡ, ಉತ್ತರಕ್ಕೆ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳು ಕೂಡ ಇವೆ.

  ಜಿಲ್ಲೆಯಲ್ಲಿ 9 ತಾಲೂಕುಗಳನ್ನು ಹೊಂದಿರುವುದೇ ವಿಶೇಷ.  ಭೂಮಿ ನಂಬಿ, ಪ್ರಕೃತಿಯನ್ನು ಅವಲಂಬಿಸಿ ಬೆಳೆಯುವ ಬೆಳೆ ಯಾವುದಾದರು ಇದ್ದರೆ ಅದು ಕೃಷಿ ಅಲ್ಲವೇ ಎಂಬಂತೆ…

      ಮಲ್ನಾಡು ತಾಲೂಕುಗಳಾದ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಹೊಂದಿಕೊಂಡಂತೆ ಚಿಕ್ಕಮಗಳೂರು ತಾಲೂಕು ಹಾಗೂ ಮೂಡಿಗೆರೆ, ಶೃಂಗೇರಿ ಕೊಪ್ಪ ಮತ್ತು ನರಸಿಂಹರಾಜಪುರ ಕಳಸ ತಾಲೂಕುಗಳಲ್ಲಿ ದಟ್ಟ ಮರಗಳ ನಡುವೆ ಕಾಫಿ ಆ ಪ್ರಮುಖ ಬೆಳೆ ಇದರೊಂದಿಗೆ ಉಪ ಬೆಳೆಗಳಾದ ಅಡಿಕೆ, ಮೆಣಸು, ಏಲಕ್ಕಿ, ಜಾಯಿಕಾಯಿ, ಬಾಳೆ ಬೆಳೆಯುತ್ತಾರೆ.

     ಕರ್ನಾಟಕದಲ್ಲಿ ಸಾಂಬಾರು ಪದಾರ್ಥಗಳು ಕಾಫಿ ನಾಡಿನಲ್ಲಿ ಹೇರಳವಾಗಿ ದೊರೆಯುತ್ತದೆ. ಮತ್ತು ಸ್ಪೈಸಿ ಪದಾರ್ಥಗಳಿಗೆ ಖ್ಯಾತಿಗಳಿಸಿದೆ. ಇದರ ನಡುವೆ  150 ವರ್ಷಗಳ ಇತಿಹಾಸ ಹೊಂದಿರುವ ಕಾಫಿ ಈಗ ವಿಶ್ವದಾದ್ಯಂತ ಮುನ್ನಲೆಗೆ ಬಂದಿದೆ. ಕಾರಣ ಕಾಫಿ ಬೆಲೆ ಈಗ ಗಗನಕ್ಕೇರಿ ದಾಖಲೆಯನ್ನು ಸೃಷ್ಟಿಸುತ್ತಿದೆ.

     ಕಾಫಿ ಕೇವಲ ಬೆಳಗಿನ ಜಾವ ಹೀರುವ ಪೇಯವಲ್ಲ. ಕಾಫಿ ನಮ್ಮ ಸಂಸ್ಕೃತಿ, ಸಂಪ್ರದಾಯ ಸಂಕೇತ. ಕಾಫಿ ನಮ್ಮ ಜೀವನದ ಅವಿಭಾಜ್ಯ ಅಂಗ. ಕಾಫಿ ಸ್ಟೈಲಿನ ಐಕಾನ್, ಕಾಫಿ ತಲೆ ಸಿಡಿತ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಟಾನಿಕ್ ಎಂದು ಹೇಳಲಾಗುತ್ತದೆ.

    ಮನೆ, ಕಚೇರಿ ಅತಿಥಿಗಳು ಬಂದಾಗ ಕಪ್ಪು ಕಾಫಿ ಕುಡಿಯೋಣ ಎಂದು ಹೇಳುವುದು ನಮ್ಮ ನಾಡಿನ ಸಂಪ್ರದಾಯ, ಸಂಸ್ಕೃತಿ. ಮನೆಗೆ ಬಂದವರಿಗೆ ಕಾಫಿ ಕುಡಿಸದೆ ಕಳಿಸುವುದಿಲ್ಲ. ಕಚೇರಿ, ಸಭೆ, ಗೋಷ್ಠಿ ಸಮ್ಮೇಳನಗಳಿಗೆ ಕಾಫಿಗೆ ಬ್ರೇಕ್ ಇಲ್ಲದೆ ಒಂದು ಅರ್ಧ ಕಾಫಿಯನ್ನು ಕುಡಿಯದೆ ಮುಕ್ತವಾಗುವುದಿಲ್ಲ.

     ಇಷ್ಟೆಲ್ಲ ಮಹತ್ವ ಹೊಂದಿರುವ ಕಾಫಿಯ ಇತಿಹಾಸದ ಬಗ್ಗೆ ಅರ್ಧ ಕಾಫಿ  ಕುಡಿಯುತ್ತಾ ಒಂದಿಷ್ಟು ಮೆಲಕು ಹಾಕುತ್ತಾ  ಹೋಗೋಣ….

    ವಿಶ್ವದಲ್ಲಿ ಕಾಫಿ ತಯಾರಿಸಿದ್ದು ಕ್ರಿ.ಶ 1000 ವರ್ಷದಲ್ಲಂತೆ, ಕಾಫಿ ಈ ಹಿಂದೆ” ಕ್ವಾವಾ” ಎಂದು ಕರೆಯುತ್ತಿದ್ದರು. ಆನಂತರ ದಿನಗಳಲ್ಲಿ ಮನುಷ್ಯನ ಅವಿಷ್ಕಾರಗಳಿಂದ ಕಾಫಿ ಬೀಜ ಹುರಿದು ಪುಡಿಯನ್ನು ತಯಾರಿಸಿದರು. ಈಗಂತೂ ಕಾಫಿಯಲ್ಲಿ ಹಲವು ಬಗೆಯದ್ದು, ಕೋಲ್ಡ್ ಕಾಫಿ, ಬ್ಲಾಕ್ ಕಾಫಿ, ಫಿಲ್ಟರ್ ಕಾಫಿ, ಚಾಕಲೇಟ್ ಕಾಫಿ ಇತ್ಯಾದಿ, ಇತ್ಯಾದಿ ಗಟ್ಟಿ ಹಾಲಿನ ನೊರೆಯೊಂದಿಗೆ  ಬೆರಸಿ ರುಚಿಗೆ ತಕ್ಕಂತೆ ಸಕ್ಕರೆ ಬೆರೆಸಿ ಕಾಫಿ ಕುಡಿಯುವುದಂತೂ ಸ್ವರ್ಗವೇ ಧರೆಗಿಳಿದಂತೆ.

    ಕಾಫಿ ಪ್ರಪಂಚದ ಅತ್ಯಂತ ಜನಪ್ರಿಯ ಪಾನೀಯ, ಕಾಫಿ ಪ್ರಪಂಚದ ಅತ್ಯಂತ 6 ನೇ ಅತಿ ಹೆಚ್ಚು ರಫ್ತು ಮಾಡುವ ದೇಶ ಭಾರತ, ಕಾಫಿ ಚರಿತ್ರೆ ಶತ ಶತಮಾನಗಳದ್ದು ಎಂಬುದು ವಾಸ್ತವಿಕ.

    ಇತಿಯೋಫಿಯದಲ್ಲಿ ಮೊದಲು ಬೆಳಕಿಗೆ ಬಂದ “ಕಾಪಿ” ಈಜಿಪ್ಟ್ ಮತ್ತು ಯುರೋಪ್ ಗಳ ಮುಖಾಂತರ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಹಬ್ಬಿತು.   ಕಾಫಿ ಎಂಬ ಪದ ಇತೋಪಿಯನ್ನರ “ಕಾಪಾ” ಎಂಬ ಹೆಸರಿನಿಂದ ಉತ್ಪನ್ನವಾದದ್ದು ಎಂದು ನಂಬಲಾಗಿದೆ.

   ಕಾಫಿ ಉದ್ಯಮ ಕರ್ನಾಟಕದಲ್ಲಿ ಒಂದು ವಿಶಿಷ್ಟ ಉದ್ಯಮವಾಗಿದೆ. ಅನೇಕ ಶತಮಾನಗಳನ್ನು ಹೊಂದಿದೆ.  ಕ್ರಿ.ಶ.1600 ರಲ್ಲಿ ಕಾಫಿಯನ್ನು ಬೆಳೆಯಲಾಯಿತು ಎನ್ನಲಾಗಿದೆ. 18ನೇ ಶತಮಾನದಲ್ಲಿ ಬ್ರಿಟಿಷ್ ಉದ್ಯಮಗಳು ಕಾಫಿ ತೋಟಗಳಲ್ಲಿ ಬಂಡವಾಳ ಹೂಡಿ ಕಾಫಿ ತೋಟಗಳನ್ನು ವಾಣಿಜ್ಯಕವಾಗಿ ನಡೆಸಲು ಆರಂಭಿಸಿದರು.

   19ನೇ ಶತಮಾನದಲ್ಲಿ ಭಾರತೀಯ ವಾಣಿಜ್ಯೋದ್ಯಮಿಗಳು ಕಾಫಿ ತೋಟಗಳನ್ನು ಹೊಂದಲು ಆರಂಭಿಸಿದರು, ಕಾಫಿಯನ್ನು ಲಂಡನ್ ಮೂಲಕ ಯುರೋಪ್ ಮಾರುಕಟ್ಟೆಗೆ ರಫ್ತು ಮಾಡಲು ಪ್ರಾರಂಭಿಸಲಾಯಿತು.

   ಕಾಫಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸರಕು, ವಿದೇಶ ವಿನಿಮಯ ಮತ್ತು ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಆರಂಭಿಸಲಾಯಿತು. 150 ವರ್ಷಗಳಿಂದ ಕಾಫಿ ಬೆಳೆಯಲು ಒಂದು ಪ್ರಮುಖ ಸ್ಥಾನ ಪಡೆದು ಸಾಂಪ್ರದಾಯಕವಾಗಿ ಬೆಳೆಯಲಾಗುತ್ತಿದೆ.

   ಒಂದು ಶತಮಾನಕ್ಕೂ ಹೆಚ್ಚು ಮತ್ತು ತಲೆತಲಾಂತರಗಳಿಂದಲೂ ತಮ್ಮ ಪೂರ್ವಜರು ಕಾಫಿ ತೋಟಗಳನ್ನು ಮಾಡಿಕೊಂಡು ಕಾಫಿ ಬೆಳೆಗಾರರು ಅನುವಂಶೀಯವಾಗಿ ಅನುಭವಿಸುತ್ತಾ, ಕೆಲವರು ಬ್ರಿಟಿಷರ ಮಾಲೀಕರಿಂದ ತೋಟಗಳನ್ನು ಖರೀದಿಸಿ ಈ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಕಾಫಿಯು ಪ್ರಮುಖ ರಫ್ತು ಸರಕುಗಳಲ್ಲಿ ಒಂದಾಗಿದೆ ಮತ್ತು ಸಾವಿರಾರು ಕೋಟಿ ವಿದೇಶ ವಿನಿಮಯವನ್ನು ಗಳಿಸುತ್ತಿದೆ.

   17ನೇ ಶತಮಾನದಲ್ಲಿ ಯುರೋಪಿನಲ್ಲಿ ಜನಪ್ರಿಯವಾದ ಕಾಫಿಯನ್ನು ಮೊದಲ ಬಾರಿಗೆ ” ಡಚ್ ” ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಆರಂಭಿಸಿದರು ಇಂಗ್ಲೆಂಡಿನಲ್ಲಿ ಕಾಫಿ ಮನೆಗಳು ಜನಪ್ರಿಯ, ಸುಮಾರು 3000ಕ್ಕೂ ಅಧಿಕ ಕಾಪಿ ಕೇಂದ್ರಗಳು ಅಲ್ಲಿವೆ.

  ಅಂತರಾಷ್ಟ್ರೀಯ ಮಟ್ಟದಲ್ಲಿ-
   1953/ 195455 ಇಸ್ವಿಯಲ್ಲಿ ಕಾಫಿ ಬೆಳೆಯುವ ದೇಶದಿಂದ ಪ್ರಪಂಚದ ರಫ್ತು ವ್ಯಾಪಾರದಲ್ಲಿ ಹಸಿರು ಕಾಪಿ “( green coffee ) ಮೊದಲ ಸ್ಥಾನವನ್ನು ಪೆಟ್ರೋಲಿಯಂ ಉತ್ಪನ್ನ ವಸ್ತುಗಳು  ಹೊಂದಿದ್ದರೆ  ಎರಡನೇ ಸ್ಥಾನವನ್ನು ಕಾಫಿ ಅಂತರಾಷ್ಟ್ರೀಯ ಮುಖ್ಯಸ್ಥಾನ ಪಡೆಯಿತು. ವಿಶ್ವದಲ್ಲೇ  120ಕ್ಕೂ ಅಧಿಕ ದೇಶಗಳು ಕಾಫಿಯನ್ನು ಸೇವಿಸುತ್ತಿದ್ದಾರೆ.

    ಕಾಫಿ ಬೆಳೆಯುವ ರಾಷ್ಟ್ರಗಳಲ್ಲಿ ಭಾರತವು 6ನೇ ಸ್ಥಾನ. ಜಾಗತಿಕ ಉತ್ಪಾದನೆಗೆ ಶೇಕಡ 4.5 ರಷ್ಟು ಪಾಲು ನೀಡುತ್ತಿದ್ದಾರೆ. ಭಾರತದ ಒಟ್ಟು ಉತ್ಪಾದನೆಯ ಶೇಕಡ 80ರಷ್ಟು ಕಾಫಿಯನ್ನು ಇಟಲಿ, ರಷ್ಯಾ ಮತ್ತು ಜರ್ಮನಿಗೆ ರಫ್ತು ಮಾಡಲಾಗುತ್ತದೆ.

    258 ಮಿಲಿಯನ್ ಡಾಲರ್ ವಿದೇಶ ವಿನಿಮಯ ಆಗುತ್ತಿದೆ ಭಾರತದಲ್ಲಿ ಸುಮಾರು 250 ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಆಗುತ್ತಿದ್ದರೆ 3.55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ.

   ಭಾರತದ ಕಾಫಿ  1980ರಲ್ಲಿ ಯುರೋಪ್ ದೇಶಗಳಿಗೆ ರಫ್ತಾಗಲು ಆರಂಭಿಸಲಾಯಿತು. ಮೊದಲು ಯುರೋಪ್ ದೇಶಗಳಿಗೆ ಆರಂಭಗೊಂಡು ನಂತರ ಫ್ರಾನ್ಸ್, ಯು.ಕೆ. ರಫ್ತು ಮಾಡುತ್ತಾ.. ಫ್ರಾನ್ಸ್ ನಲ್ಲಿ ಕಾಫಿಗೆ ದೊಡ್ಡ ಮಾರುಕಟ್ಟೆ ಇದೆ.

   ಕಾಫಿ ಮಂಡಳಿಯ ಅಂಕಿ, ಅಂಶ ಪ್ರಕಾರ 20 ವರ್ಷದ ಹಿಂದೆ ಭಾರತದ ಕಾಫಿ ರಫ್ತಿನಲ್ಲಿ ಶೇಕಡ 42ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ.

  ಭಾರತದ ಖಜಾನೆಗೆ ಕಾಫಿ ಉದ್ಯಮದಿಂದ 1045 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 8000 ಕೋಟಿ ಎಂದು ಅಂದಾಜಿಸಲಾಗಿದೆ. ಕಾಫಿ ಅಂತರಾಷ್ಟ್ರೀಯ ಮಟ್ಟದಲ್ಲಿ  ಪ್ರಮುಖ ಸರಕು ವಿದೇಶ ವಿನಿಮಯ ಮತ್ತು ದೇಶದ ಆರ್ಥಿಕತೆಗೆ ಕೊಡುಗೆ  ನೀಡಲು ಆರಂಭಿಸಿತು. ಕಾಫಿಯು ಪ್ರಮುಖ ರಫ್ತು ಸರಕುಗಳಲ್ಲಿ ಒಂದಾಗಿದೆ ಮತ್ತು ಉತ್ತಮ ವಿದೇಶಿ ವಿನಿಮಯವನ್ನು ಗಳಿಸುತ್ತಿದೆ.   ಕರ್ನಾಟಕದಲ್ಲಿ ಪ್ರಮುಖ ಕಾಫಿ ಬೆಳೆಯುವ ಜಿಲ್ಲೆಗಳು-

  ಕರ್ನಾಟಕದಲ್ಲಿ ಹಾಸನ, ಕೊಡಗು, ಚಿಕ್ಕಮಗಳೂರು ಮೂರು ಜಿಲ್ಲೆಗಳು ಅಧಿಕವಾಗಿ ಕಾಫಿ ಬೆಳೆಯುವ ಪ್ರದೇಶವಾಗಿದೆ.

    ಕರ್ನಾಟಕದಲ್ಲಿ 2016-17ರಲ್ಲಿ ಗರಿಷ್ಠ 2,29,345 ಟನ್ ಉತ್ಪಾದನೆ ಗುರಿ ಹೊಂದಿತ್ತು, ಇದೀಗ 4 ಲಕ್ಷ ಅಧಿಕ ಹೆಕ್ಟೇರ್ ಗಳಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ಭಾರತದಲ್ಲಿ 3 ಲಕ್ಷ ಟನ್ ಕಾಫಿ ಉತ್ಪಾದನೆ ಮಾಡಲಾಗುತ್ತಿದೆ. ಬಹುತೇಕ ಕರ್ನಾಟಕದಲ್ಲಿ ಮೂರು ಜಿಲ್ಲೆಗಳು ಕಾಫಿ ಬೆಳಗೆ ಖ್ಯಾತಿಗಳಿಸಿದೆ. ಅದರಲ್ಲೂ ಕರ್ನಾಟಕ ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಪ್ರದೇಶವಾಗಿದೆ.

  1942 ರಲ್ಲಿ ನಿಯಂತ್ರಣ ಮಂಡಳಿ-
ಅಂದು ಕಾಫಿ ಬೆಳೆದರೂ ಮುಕ್ತವಾಗಿ ಮಾರಾಟ ಮಾಡುವ ಹಾಗಿರಲಿಲ್ಲ 1942 ರಲ್ಲಿ ಕಾಫಿ ನಿಯಂತ್ರಣ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಅದು ಕಾಫಿ ಬೆಳೆಯುವವರು ಬೆಳೆದ ಕಾಫಿಯನ್ನು ಯಾರಿಗೆ ಎಂದು ಅವರಿಗೆ  ಮಾರುವಂತೆ ಇರಲಿಲ್ಲ, ಕಾಫಿಯನ್ನು ಕಾಫಿ ಬೋರ್ಡ್ ಗೆ ಮಾರಬೇಕು ಸ್ವಂತಕ್ಕೆ ನೂರು ಕೆಜಿ ಸುಂಕ ನೀಡಿದರೆ ಇಟ್ಟುಕೊಳ್ಳಬಹುದಿತ್ತು.

    ನಂತರ 199198 ರಲ್ಲಿ ಕಾಫಿಗೆ ಮುಕ್ತ ಮಾರುಕಟ್ಟೆಯಾಗಿ ಪರಿವರ್ತನೆ ಆಯಿತು. ಮುಕ್ತ ಮಾರುಕಟ್ಟೆ ಇಂದ ಬೆಳೆದವರಿಗೆ ಕಾಫಿ ಅಧಿಕ ಬೆಲೆ ಸಿಕ್ಕರು ಅನುಕೂಲವಾದರೂ ಮುಕ್ತ ಮಾರುಕಟ್ಟೆಯಿಂದ ಕಾಫಿಗಿದ್ದ ಪ್ರಾಮುಖ್ಯತೆ ಕಡಿಮೆ ಆಯಿತು ಭಾರತದಲ್ಲಿ ಬೆಳೆದ ಕಾಫಿ ಶೇಕಡ 80 ರಷ್ಟು ರಪ್ತಾಗುತ್ತದೆ. 

ಕರ್ನಾಟಕದಲ್ಲಿ ಕಾಫಿಯ ಪ್ರಮುಖ ಪಾತ್ರ-
 ಕರ್ನಾಟಕವು ಭಾರತದ ಕಾಫಿ ನಕ್ಷೆಯಲ್ಲಿ ಮಹತ್ವದ ಪಾತ್ರ ವಹಿಸಿ ಕಾಫಿಯನ್ನು ಬೆಳೆದು ಸಾವಿರಾರು ಕೋಟಿ ವಿದೇಶಿ ವಿನಿಮಯ ಸರ್ಕಾರಕ್ಕೆ ಹಲವಾರು ತೆರಿಗೆಗಳನ್ನು ತುಂಬಲಾಗುತ್ತಿದೆ.

  ಒಂದು ಶತಮಾನಕ್ಕೂ ಹೆಚ್ಚು ಮತ್ತು  ತಲೆತಲಾಂತರ ಗಳಿಂದರೂ ಪೂರ್ವಜರ ಕಾಲದಿಂದಲೂ ಕಾಫಿ ತೋಟಗಳನ್ನು  ಬೆಳೆಗಾರರು ಅನುವಂಶಿಕವಾಗಿ ಅನುಭವಿಸುತ್ತಾ ಬರುತ್ತಿದ್ದಾರೆ. ಬ್ರಿಟಿಷರ ಮಾಲೀಕರಿಂದ ಕಾಫಿ ತೋಟಗಳನ್ನು ಖರೀದಿಸುತ್ತಾ ಕೃಷಿ ಮಾಡುತ್ತಿದ್ದರು. ಬ್ರಿಟಿಷ್ ಕಾಲದಲ್ಲಿ ಕಾಫಿಗೆ ಹೆಚ್ಚು ಪ್ರೋತ್ಸಾಹವಿತ್ತು.

 ಕಾಫಿಯ ಪ್ರಭೇದಗಳು –
ಕಾಫಿಯಲ್ಲಿ ಎರಡು ಪ್ರಭೇದಗಳಿದ್ದು ಅರಬಿಕಾ ಹಾಗೂ ರೋಬಸ್ಟಾ ತಳಿಗಳಿದ್ದು, ಅರಬಿಕಾ ತಳಿಯು ” ಇಥಿಯೋಪಿ “ಯಾದಲ್ಲಿ ಉಗಮಗೊಂಡರೆ, ರೋಬೊಸ್ಟ್ ತಳಿಯು ಇಂದಿನ ” ಉಗಾಂಡ “ದೇಶದಲ್ಲಿ ಉಗಮ ಆಯಿತು ಎನ್ನಲಾಗಿದೆ. ಇದು ಹೆಚ್ಚು ಕಹಿ ಯಾಗಿರುತ್ತದೆ, ಆದರೆ ಇವುಗಳನ್ನು ಕುಡಿಯುವಾಗ ಬರುವ ಪರಿಮಳ ಸುತ್ತಲೂ ಸುಹಾಸಿನಿ ಬೀರುತ್ತದೆ ಅರಬಿಕಾ ತಳಿಯ ಕಾಫಿ ಹೆಚ್ಚು ಜನಪ್ರಿಯವಾಗಿದೆ.

 ಭೌಗೋಳಿಕವಾಗಿ-
 ಭೌಗೋಳಿಕವಾಗಿ ಮಲ್ನಾಡು ಮತ್ತು ಬಯಸಿಮೆ ಎರಡನ್ನು ಹೊಂದಿರುವ ಜಿಲ್ಲೆ ಚಿಕ್ಕಮಗಳೂರು ಕೃಷಿ ಮತ್ತು ಬೆಳೆಗಳ ವಿಷಯದಲ್ಲಿ ಜಿಲ್ಲೆ ವೈವಿಧ್ಯಮಯ ಕಾಫಿ ಹೆಚ್ಚು ಬ್ರಿಟಿಷರ ಕಾಲದಲ್ಲಿ ವಿಸ್ತಾರವಾಯಿತು ಎನ್ನಲಾಗಿದೆ.

  ಚಿಕ್ಕಮಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಕಾಫಿ ಆರಂಭವಾಯಿತು ಎಂದು ಊಹಿಸಲಾಗಿದೆ ಅಲ್ಲದೆ ಇಂಡಿಯಾದಲ್ಲಿ ಪ್ಲಾಂಟೇಶನ್ ಇಂಡಸ್ಟ್ರಿ ಕಾಫಿಯಿಂದಲೇ ಆರಂಭವಾಯಿತು ಎಂದು ಹೇಳಬಹುದು.

 ಶತಮಾನದಲ್ಲಿ ಕಾಫಿ ದಾಖಲೆ ಬೆಲೆ-
ಹವಾಮಾನ ವೈಪರೀತ್ಯದಿಂದ ಬ್ರೆಜಿಲ್ ಹಾಗೂ ವಿಯೆಟ್ನಾಮಿನಲ್ಲಿ ಕಾಫಿ ಬೆಳೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿದ್ದು ಹಾಗೂ ಅಧಿಕ ಕಾಫಿ ಬೆಳೆಯುವ ಪ್ರದೇಶದಲ್ಲಿ ಕಾಫಿ ಬದಲಿಗೆ ಪರ್ಯಾಯ ಬೆಳೆಯನ್ನು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಕೊರತೆ ಉಂಟಾಗಿದ್ದು, ದೇಶದಲ್ಲಿ ಶತಮಾನಗಳಿಂದ ಇಲ್ಲದ ಕಾಫಿಗೆ ಅಧಿಕ ದರ ಬಂದಿದ್ದು ಕಾಫಿ ನಾಡಿನಲ್ಲಿ ಕಾಫಿ ಪ್ಲಾಂಟರ್ ಗಳ ಮುಖದಲ್ಲಿ ಮಂದಹಾಸ ಬೀರಿದೆ.

   ಅದರಲ್ಲೂ ಕಾಫಿ ನಾಡು ಚಿಕ್ಕಮಗಳೂರು, ಹಾಸನ, ಮಡಿಕೇರಿ ಜಿಲ್ಲೆಗಳಲ್ಲಿ ಇಲ್ಲಿನ ಹವಾಮಾನಕ್ಕೆ ಹೊಂದಿಕೊಂಡಂತೆ ನೆರಳಿನಲ್ಲಿ ಕಾಫಿಯನ್ನು ಬೆಳೆಯಲಾಗುತ್ತಿದ್ದು ಅದರ ಗುಣಮಟ್ಟ ಹೆಚ್ಚಾಗಿರುತ್ತದೆ, ಹಾಗಾಗಿ ಭಾರತೀಯ ಕಾಫಿಗೆ ಬಹಳ ಬೇಡಿಕೆ ಇದೆ.

   ಕಾಫಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖವಾಗಿ ವೇದಕವಾಗಿ ಮಧುರವಾಗಿ ಹಬ್ಬಿ ತಬ್ಬಿದೆ, ಹಳ್ಳಿಯಿಂದ ದಿಲ್ಲಿವರೆಗೂ, ದೇಶ ವಿದೇಶಗಳಿಗೂ ವಿಸ್ತಾರವಾಗಿದೆ. ಇಂದು ಮಾನವ ಯತ್ರಕ್ಕೆ ಅತ್ಯುತ್ತಮವಾದ ಕೀಲಣ್ಣೇ ಕಾಫಿ.

   ಕಾಫಿಯಲ್ಲಿರುವ ಹಲವಾರು ಗುಣಗಳನ್ನು ಮನುಷ್ಯ ಕೋಟೆಯನ್ನು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಹಲವಾರು ದೇಶಗಳಲ್ಲಿ ಬಹಳಷ್ಟು ಆಕರ್ಷಿಸಿದೆ ಬಹಳ ಹಿಂದಿನಿಂದಲೂ ಕಾಪಿ ಜನಪ್ರಿಯ ಪಾನೀಯ.

    ಕಾಫಿ ಎಲ್ಲರಿಗೂ ಅತಿ ಪ್ರಿಯವಾದ ಪಾನೀಯ ಬೆಳಗ್ಗೆ ಎಚ್ಚರವಾದಾಗ ಅರ್ಧ ಕಾಫಿ  ಕುಡಿಯದಿದ್ದರೆ ಕೆಲವರಿಗೆ ಸ್ಪೂರ್ತಿಯ ಇಲ್ಲವೆನ್ನುವ ತಾಗುತ್ತದೆ.

   ಪ್ರಪಂಚದಲ್ಲಿ ಸಸ್ಯ ಸೃಷ್ಟಿ ಆದಾಗ ಕಾಪಿ ಸೃಷ್ಟಿಯಾಗಿರಬೇಕು, ಅದು ಕೊಟ್ಟ ಫಲವನ್ನು ಪಕ್ಷಿಗಳು ಮನುಷ್ಯರುಗಳು ಬಹಳ ವರ್ಷಗಳ ಹಿಂದೆಯೇ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ.

  ನಮ್ಮಲ್ಲಿ ಸಹ ಹಾಲು ಸಕ್ಕರೆ ಹಾಕಿದ ಕಾಫಿಯನ್ನು ಕುಡಿದರೆ, ಫ್ರಾನ್ಸ್ ನಲ್ಲಿ ಸಕ್ಕರೆ ಹಾಕದೆ ಕರಿ ಕಾಫಿ ಕುಡಿಯುತ್ತಾರೆ. ಅಮೆರಿಕದಲ್ಲಿ ಕಾಫಿಗೆ ಹಿಮಗಡ್ಡೆ ಹಾಕಿ ಕಿಮತಣ್ಣೀರಿನ ಕಾಫಿ ಕುಡಿಯುತ್ತಾರೆ, ಆದರೆ ನಮಗೆ ಅದು ಸದಾ ಬಿಸಿ ಬಿಸಿ ಕಾಫಿ ಆಗಿರಬೇಕು.

   ಕಾಫಿಗೆ ರೋಗನಿರೋಧಕ ಗುಣವಿದ್ದು ಮೆದುಳಿಗೆ ಸಮಾಧಾನವನ್ನು ಹಾಗೂ ತಲೆನೋವು ,ಸೋಮಾರಿತನ ಮತ್ತು ಕೆಮ್ಮುಗಳನ್ನು ನಿವಾರಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕಾಫಿಯನ್ನು ವಿಶ್ವದಲ್ಲಿಯೇ 120 ದೇಶಗಳಲ್ಲಿ ಯಥೇಚ್ಛವಾಗಿ ಕಾಫಿಯನ್ನು ಕುಡಿಯುತ್ತಾರೆ.

 ಶತಮಾನದ  ಕಾಫಿ ದರ ದಾಖಲೆ-
    ಇಂಡಿಯನ್ ಕಾಫಿಯು ಗುಣಮಟ್ಟದಲ್ಲಿ ಪ್ರಪಂಚದ ಮಾರುಕಟ್ಟೆಯಲ್ಲಿ ಅದ್ವಿತೀಯ ಸಂಕೇತ ಎನಿಸಿತು. 1820ರ ಅತ್ಯಂತ. ನಂತರ ವಾಣಿಜ್ಯ ತೋಟಗಳನ್ನು ದಕ್ಷಿಣ ಭಾರತದಲ್ಲಿ ಬ್ರಿಟಿಷರ ಮೇಲ್ವಿಚಾರಣೆ ಮತ್ತು ಬಂಡವಾಳದಲ್ಲಿ ಪ್ರಾರಂಭವಾಯಿತು.

  ಕರ್ನಾಟಕ ಕಾಫಿ ನಾಡಿನ ಕಾಫಿಗೆ ರುಚಿ ಹಾಗೂ ಪರಿಮಳವನ್ನು ನಿರ್ಧರಿಸುವ ಅಂಶಗಳು ಅನೇಕ ಸಸ್ಯದ ಅನುವಂಶಿಕ ಲಕ್ಷಣ, ಬೆಳೆಯುವ ಮಣ್ಣಿನ ಗುಣ ವಾಯುಗುಣ ಏರಿಳಿತಗಳನ್ನು ಅವುಗಳಲ್ಲಿ ಪ್ರಮುಖವಾದದ್ದು ನಿರ್ಧರಿಸುವ ಅಂಶಗಳು ಅನೇಕ ಸಮುದ್ರಮಟ್ಟದ ಎತ್ತರ ಗಾಳಿ ಬೀಸುವಿಕೆ  ಏರಿಳಿತ ಮೊದಲಾದವುಗಳು ಕಾಫಿ ಗುಣಮಟ್ಟವನ್ನು ಕಾಪಾಡುತ್ತದೆ.

   ಕಾಫಿ ಎಲ್ಲರಿಗು ಅಪ್ಪಯ್ಯಮಾನವಾದ ಪಾನೀಯ ಬೆಳಿಗ್ಗೆ ಎಚ್ಚರವಾದಾಗ ಅರ್ಧ ಕಾಫಿ, ತಿಂಡಿಯ ನಂತರ ಕಾಫಿ ಕುಡಿಯದಿದ್ದರೆ ಸ್ಪೂರ್ತಿ ಇಲ್ಲ. ಕಾಫಿಯಲ್ಲಿರುವ ಹಲವಾರು ಗುಣಗಳನ್ನು ಮನುಷ್ಯ ಕೋಟೆಯನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ಹಲವಾರು ದೇಶಗಳಲ್ಲಿ ಆಕರ್ಷಿಸಿದೆ, ಹಾಗಾಗಿ ಈ ಬಾರಿ ಕಾಫಿ ಬೆಳೆಯ ದೇಶಗಳಲ್ಲಿ ಭಾರತ ಕಾಫಿಗೆ  ಡಿಮ್ಯಾಂಡ್ ಆಗಿ ಕಾಫಿ ಬೆಲೆ ಹೊಸ ಇತಿಹಾಸ ಬರೆದಿದೆ.

  ಭಾರತೀಯ ಕಾಫಿಗೆ ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸಿಕ್ಕ ಪರಿಣಾಮ ಬೆಲೆ ಗಣನೀಯವಾಗಿ ಏರಿಕೆಯಾಗಲು ಆರಂಭಿಸಿದೆ. ಎಂದು ಸಿಗದ ಕಾಫಿಯ ದರ ಬೆಳೆಗಾರರ ಕೈ ಸೇರುತ್ತಿದ್ದು ಕಾಫಿ ಪ್ಲಾಂಟರ್ ಗಳು ದಿಲ್ ಖುಷ್ ಆಗಿದ್ದಾರೆ. 

 50 ಕೆಜಿ ಕಾಫಿಗೆ ರೂ . 30,000-
ಈ ಹಿಂದೆ ಕಾಫಿ ಆಯಾ ವರ್ಷದಲ್ಲಿ ಏರುಪೇರು ಕಂಡುಬರುತ್ತಿತ್ತು ಅಂದಾಜು 30 ವರ್ಷಗಳನ್ನು ಕಾಫಿ ಬೆಲೆ ತುಲನೆ ಮಾಡಿದರೆ ಅಧಿಕ ದರ ಎಂದರೆ 12,000 ಒಮ್ಮೆ ಮಾತ್ರ 1997ರಲ್ಲಿ ನಂತರದಲ್ಲಿ ಒಮ್ಮೆ ಕೂಡ ಈ ರೀತಿ ಬೆಲೆ  ಬಂದಿರಲಿಲ್ಲ. ಅದು ಹೊರತುಪಡಿಸಿದರೆ ಅರಬಿಕಾ ಚರಿ ಕಾಫಿಯ ಐವತ್ತು ಕೆಜಿಗೆ 800900 ಇದ್ದಿದ್ದು, ಇದೀಗ 2025 ರಲ್ಲಿ ಇದೇ ಚರಿಗೆ 14000 ಬೆಲೆ ಕಂಡಿದೆ.

ಅರಬಿಕಾ ಫಾರ್ಚುಮೆಂಟಿಗೆ 1900 ರಿಂದ 8000 ವರೆಗೂ ಮಾತ್ರ ಬೆಳೆಗಾರರು ಬೆಲೆ ಕಂಡಿದ್ದರು. ಇದೀಗ ಈ ಬಾರಿ ಇದೇ ಪಾರ್ಚಮೆಂಟಿಗೆ 30,000 ಬೆಲೆ ಬಂದಿರುವುದು ಬೆಳಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಇದು ಶತಮಾನಗಳ ದಾಖಲೆಯನ್ನು ಮುರಿದಿದೆ.

 ಕಾಫಿ ಮತ್ತೊಂದು ವಿಧವಾದ ರೋಬಸ್ಟ ಅದು ಕೂಡ 30 ವರ್ಷಗಳ ಹಿಂದಿನ ಬೆಲೆಯಲ್ಲಿ ಕೇವಲ 600 ರಿಂದ 2200 ಮಾತ್ರ ಬೆಲೆ ಕಂಡಿತ್ತು. ಇದೀಗ ಮಾರುಕಟ್ಟೆಯಲ್ಲಿ ರೋಬಸ್ಟ ಕಾಫಿ ಚರಿಗೆ 10 ರಿಂದ 14 ಸಾವಿರ ಇದ್ದರೆ,  ರೋಬೋಸ್ಟ ಪಾರ್ಸಿಮೆಂಟಿಗೆ ಅಂದು ಹೆಚ್ಚೆಂದರೆ 1000 ಇಂದ 4000 ಇತ್ತು, ಆದರೆ ಈಗ ಈ ಬಾರಿ 20,000 ಗಡಿ ದಾಟಿ 30 000  ಕಾಫಿ ದರ ಬಂದಿರುವುದು ವಿಶೇಷವಾಗಿದೆ.

ವಿದೇಶದಲ್ಲಿ ಕಾಫಿ ಬೆಳೆ ಹಾನಿಯಾಗಿರುವುದರಿಂದ ಭಾರತದ ಕಾಫಿಗೆ ಎಲ್ಲಿಲ್ಲದ ಡಿಮ್ಯಾಂಡು ಬಂದಿದೆ. ದಿನದಿಂದ ದಿನಕ್ಕೆ ಕಾಫಿ ದರ ಅಧಿಕವಾಗುತ್ತಾ ಬರುತ್ತಿದ್ದು ಶತಮಾನದಲ್ಲಿ ಕಾಫಿಗೆ ಈ ರೀತಿ ಬೆಲೆ ಬಂದಿರುವುದಿಲ್ಲ. 

     ಒಟ್ಟಾರೆ  ಇಂದು ಕಾಫಿ ತೋಟಗಳಿಗೆ ಡಿಮ್ಯಾಂಡು.. ಡಿಮ್ಯಾಂಡು ಕಾಫಿ ತೋಟ ಎಕರೆಗೆ ಅಂದು ಐದರಿಂದ ಹತ್ತು ಲಕ್ಷ ಇದ್ದರೆ ಇಂದು ಕೆಲವು ಕಡೆ 50 ಲಕ್ಷ 75 ಲಕ್ಷ ವರೆಗೂ ಮಾರಾಟವಾಗುತ್ತಿದೆ. ನೂರಾರು ವರ್ಷಗಳಿಂದ ಕಾಫಿ ಕೃಷಿಯನ್ನು ಮಾಡಿಕೊಂಡು ಬರುತ್ತಿರುವ ಬೆಳಗಾರರಿಗೆ ಇಂದು ಬಂಪರ್ ಲಾಟರಿ ಹೊಡೆದಿದೆ.

ಮುಂದಿನ ದಿನಗಳಲ್ಲಿ ಘಮ ಘಮಿಸುವ ಕಾಫಿ ಗ್ರಾಹಕರ ಬಾಯಿ ಸುಡುವ ರೀತಿಯಲ್ಲಿ ಹೋಟೆಲ್ ಹಾಗೂ ಕಾಫಿ ಕೇಂದ್ರಗಳಲ್ಲಿ ಕಾಫಿಯ ದರ ಬಿಸಿ ಬಿಸಿಯಾಗಿ ಬಾಯಿ ಸುಡುವುದು ಖಂಡಿತ.
ಲೇಖನ-ಜಿ.ಎಂ.ರಾಜಶೇಖರ್, ಚಿಕ್ಕಮಗಳೂರು.
Rajashekar.ckm@gmail.com/9448364949

 

 

Share This Article
error: Content is protected !!
";