ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಸಂಬಂಧಿಸಿದ ಅವಧಿ ಮೀರಿದ ಗ್ರಾಹಕರ ವ್ಯಾಜ್ಯಗಳ Consumer Complaint – C.C) ಅಮಾಲ್ಜಾರಿ ಅರ್ಜಿಗಳ (Execution Application) ಹಾಗೂ ಸಂಕೀರ್ಣ ಅರ್ಜಿಗಳ (Miscellanceous Petitions) ಕಡತಗಳನ್ನು ನಿಯಮಾನುಸಾರ ನಾಶಗೊಳಿಸಲು ಕ್ರಮವಹಿಸಲಾಗಿದೆ.
ಈ ಆಯೋಗದಲ್ಲಿನ 2015ನೇ ಸಾಲಿನಿಂದ 2019ನೇ ಸಾಲಿನವರೆಗೆ ವಿವಿಧ ಕಡತಗಳನ್ನು ನಾಶಗೊಳಿಸಲು ಕ್ರಮ ಕೈಗೊಳ್ಳಬೇಕಾಗಿರುವುದರಿಂದ, ಈ ಕಡತಗಳಲ್ಲಿರುವ ಮೂಲ ದಾಖಲೆಗಳನ್ನು ಈ ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಎರಡು ತಿಂಗಳ ಅವಧಿಯೊಳಗೆ ಹಿಂಪಡೆದುಕೊಳ್ಳುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸಹಾಯಕ ರಿಜಿಸ್ಟಾçರ್ ಹಾಗೂ ಸಹಾಯಕ ಆಡಳಿತಾಧಿಕಾರಿ ಸಿ.ಎ.ರೇಷ್ಮಾಖಾನಮ್ ತಿಳಿಸಿದ್ದಾರೆ.