ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಯೋಗ್ಯರು ಹೆಸರನ್ನಷ್ಟೇ ಬದಲಿಸಬಲ್ಲರು, ಮೇರು ನಾಯಕರು ಇತಿಹಾಸವನ್ನು ಸೃಷ್ಟಿಸಿರುತ್ತಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಅಂದು ಬೃಹತ್‌ಬೆಂಗಳೂರು ಮಹಾನಗರ ಪಾಲಿಕೆ(BBMP) ಮಾಡಿದ್ದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು.
ರಾಮನಗರ ಜಿಲ್ಲೆ ಮಾಡಿದ್ದು – ಹೆಚ್.ಡಿ. ಕುಮಾರಸ್ವಾಮಿ ಅವರು ದ್ವೇಷ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ಡಿಕೆ ಶಿವಕುಮಾರ್ ಅಭಿವೃದ್ಧಿ ಬಿಟ್ಟು ಮಾಡುತ್ತಿರುವುದು ಬರೀ ಹೆಸರು ಬದಲಾವಣೆ ಎಂದು ಜೆಡಿಎಸ್ ಹರಿಹಾಯ್ದಿದೆ.
ಅಭಿವೃದ್ಧಿಯಲ್ಲಿ ಹಿಂದೆ ಹಿಂದೆ, ಹೆಸರು ಬದಲಿಸುವುದರಲ್ಲಿ ಮುಂದೆ ಮುಂದೆ ಇದ್ದಾರೆ ಡಿಕೆಶಿ.
“ಬೆಂಗಳೂರು” ಹೆಸರನ್ನೇ ಬಂಡವಾಳ ಮಾಡಿಕೊಂಡಿರುವ ಡಿಕೆಶಿ ತನ್ನ ಆಸ್ತಿಯನ್ನು ದಿನೇ ದಿನೇ ದುಪ್ಪಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.