ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮಿಳುನಾಡಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ ! ಕಮಿಷನ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಅನ್ಯಾಯ ಆಗುತ್ತಿದ್ದರೂ ಕಣ್ಮುಚ್ಚಿ ಕುಳಿತಿದೆ ಎಂದು ಜೆಡಿಎಸ್ ಆರೋಪಿಸಿದೆ.
“ರಿಪಬ್ಲಿಕ್‌ಆಫ್‌ಕನಕಪುರ”ದಲ್ಲಿ ಡಿಕೆ ಬ್ರದರ್ಸ್ಡಿ.ಕೆ ಶಿವಕುಮಾರ್, ಡಿಕೆ ಸುರೇಶ್ ತಮಿಳುನಾಡು ರೈತರಿಗೆ ಮಣೆ ಹಾಕಿ, ರಾಜ್ಯದ ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಕನಕಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಧಿಕಾರಿಗಳು ಮತ್ತು ದಲ್ಲಾಳಿಗಳ ಕಮಿಷನ್ ಹಾವಳಿ ರಾಜ್ಯದ “ರಾಗಿ ಬೆಳಗಾರರಿಗೆ” ಶಾಪವಾಗಿ ಪರಿಣಮಿಸಿದೆ. ಖರೀದಿ ಕೇಂದ್ರದಲ್ಲಿ ಕಮಿಷನ್ ಆಸೆಗೆ ಡಿಕೆ ಬ್ರದರ್ಸ್‌ಮತ್ತು ಅಧಿಕಾರಿಗಳು ತಮಿಳುನಾಡಿನ ಸಾವಿರಾರು ಕ್ವಿಂಟಾಲ್ ರಾಗಿಯನ್ನು ಅಕ್ರಮವಾಗಿ ಖರೀದಿಸುತ್ತಿದ್ದಾರೆ.
ಎಪಿಎಂಸಿಗಳು ರೈತರು-ಗ್ರಾಹಕರ ಮಧ್ಯೆ ದಲ್ಲಾಳಿ ಕಾಟ ತಪ್ಪಿಸಿ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಬೇಕಾದ ಕಾಂಗ್ರೆಸ್‌ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರೇ, ನಿಮ್ಮ ಇಂಡಿ ಕೂಟದ ಸ್ಟಾಲಿನ್ ಸರ್ಕಾರವನ್ನು ಮೆಚ್ಚಿಸಲು ಅಂದು ಕದ್ದುಮುಚ್ಚಿ ಕಾವೇರಿ ನೀರು ಬಿಟ್ಟಾಯ್ತು, ಈಗ ತಮಿಳುನಾಡಿನ ರಾಗಿ ಖರೀದಿಸಿ, ನಮ್ಮ ರಾಜ್ಯದ ರೈತರ ಬಾಯಿಗೆ ಮಣ್ಣು ಹಾಕಬೇಡಿ ಎಂದು ಜೆಡಿಎಸ್ ಆಗ್ರಹ ಮಾಡಿದೆ.