ಡಿಪ್ಲೋಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಜಿಲ್ಲೆಯ ಹೆಸರಾಂತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಕಡೂರಿನ ಜಿ.ಟಿ.ಟಿ.ಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ) ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ವಿಶಿಷ್ಟ ಉದಯೋನ್ಮುಖ ಡಿಪ್ಲೊಮಾ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದ್ದು ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. (ಪಾಸ್/ಫೇಲ್) ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಾಚಾರ್ಯರು ತಿಳಿಸಿದ್ದಾರೆ.

- Advertisement - 

ಶೇ.೧೦೦ರಷ್ಟು ಉದ್ಯೋಗಾವಕಾಶ ಕಲ್ಪಿಸುತ್ತಿರುವುದು ಹಾಗೂ ಯುವಕ/ ಯುವತಿಯರಿಗೆ ಭವಿಷ್ಯ ರೂಪಿಸುವಲ್ಲಿ ಜಿಲ್ಲೆಯಲ್ಲೇ ಹೆಗ್ಗಳಿಕೆ ಪಡೆದಿರುವ ಸಂಸ್ಥೆಯಾಗಿದೆ. ಪ್ರವೇಶ ಪಡೆಯಲು ಇಚ್ಚಿಸುವ  ವಿದ್ಯಾರ್ಥಿಗಳು ಖುದ್ದಾಗಿ ಕೆಳಗೆ ತಿಳಿಸಿರುವ ವಿಳಾಸದಲ್ಲಿ ಸಂಪರ್ಕಕಿಸಲು ಈ ಮೂಲಕ ಕೋರಲಾಗಿದೆ. ಮೊದಲ ಹಂತದ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಮೇ ೧೫ ಕೊನೆಯ ದಿನವಾಗಿದೆ.

- Advertisement - 

ಕೋರ್ಸ್‌ಗಳ ವಿವರ
ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್, ಡಿಪ್ಲೊಮಾ ಇನ್ ಆಟೋಮೇಷನ್ ಮತ್ತು ರೊಬೊಟಿಕ್ಸ್, ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್. ಹೆಚ್ಚಿನ ಮಾಹಿತಿಗೆ ಕಡೂರು ಬಿ.ಹೆಚ್.ರಸ್ತೆಯಲ್ಲಿನ ವೇದಾ ಪಂಪ್ ಹೌಸ್ ಹತ್ತಿರದ ಜಿ.ಟಿ.ಟಿ.ಸಿ ಕಾಲೇಜನ್ನು (ದೂರವಾಣಿ: ೯೯೦೨೨೩೨೮೩೯, ೯೯೧೬೧೨೦೮೭೨, ೭೬೭೬೭೬೬೨೬೧, ೯೭೪೩೮೭೧೬೪೫, ೯೪೮೧೮೩೮೪೦೩,   ೯೧೪೧೬೩೦೩೨೦) ಸಂಪರ್ಕಿಸಬಹುದು.

 

- Advertisement - 

Share This Article
error: Content is protected !!
";