ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಸಿಎಂ ಸಿದ್ದರಾಮಯ್ಯ ಅವರು ಬೆಂಬಲಿಗರ ಮೂಲಕ ತಮ್ಮ ಕುರ್ಚಿಯ ನಟ್ಟು-ಬೋಲ್ಟು ಟೈಟ್‌ಮಾಡುತ್ತಿದ್ದಾರೆ. ಮುಂದಿನ ಬಾರಿಯೂ ತಾವೇ ಬಜೆಟ್ ಬಜೆಟ್ ಮಂಡಿಸುತ್ತೇನೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಈಗ ರಾಜಕೀಯದಲ್ಲಿ ನಿರ್ಣಾಯಕ ಯುದ್ದವಾಗಿದೆ. ಒಪ್ಪಂದದ ಪ್ರಕಾರ ಅಕ್ಟೋಬರ್ ವೇಳೆಗೆ ಅಧಿಕಾರ ಹಸ್ತಾಂತರವಾದರೆ ಮಾತ್ರ ಸಿಎಂ ಹುದ್ದೆ, ಇಲ್ಲದಿದ್ದರೆ ರಾಜಕೀಯ ಸನ್ಯಾಸತ್ವ ಸ್ವೀಕರಿಸುವ ಸನ್ನಿವೇಶ ಬರಲಿದೆ ಎಂದು ಬಿಜೆಪಿ ಭವಿಷ್ಯ ನುಡಿದಿದೆ.
ಸಿದ್ದರಾಮಯ್ಯ ಅವರ ಆಟದ ಮುಂದೆ ಈಗ ಡಿಕೆಶಿ ನಿಸ್ತೇಜರಾಗಿದ್ದಾರೆ. ಡಿಕೆಶಿಗೆ ಸಿಎಂ ಸ್ಥಾನ ಮರೀಚಿಕೆಯಾಗಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಂತರಿಕ ಕಲಹಗಳು ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಉಂಟು ಮಾಡುತ್ತಿವೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.