ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿಯ ಲಕ್ಷ್ಮೀ ಸಿದ್ದೇಶ್ವರ ಸ್ವಾಮಿಯ ನೂತನ ದೇವಾಲಯ ನಿರ್ಮಾಣ ಹಂತದಲ್ಲಿದ್ದು ವಿಗ್ರಹ ಪ್ರತಿಷ್ಠಾಪನೆ ಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ಜೂಗಾನಹಳ್ಳಿ ಚಿಕ್ಕಣ್ಣ ವಿಗ್ರಹ ಪ್ರತಿಷ್ಠಾಪನೆಯ ಜವಾಬ್ದಾರಿ ವಹಿಸಿಕೊಂಡು ದೇವಾಲಯದ ಜೀರ್ಣೋದ್ಧಾರಕ್ಕೆ ಐವತ್ತು ಸಾವಿರ ರೂಗಳು ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ಜೂಗಾನಹಳ್ಳಿ ಚಿಕ್ಕಣ್ಣ, ಕಾಂಗ್ರೆಸ್ ಮುಖಂಡ ಶೆಟ್ಟಪ್ಪ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯೆ ಸವಿತಾ ಹಾಗು ಹಾಡೋನಹಳ್ಳಿ ಮುಖಂಡರಾದ ತಮ್ಮಣ್ಣ ಗೌಡ, ಮಲ್ಲೇಶ, ಹಾಗು ಹಿರಿಯ ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.