ಹಿರಿಯೂರು ನಗರಸಭೆ: ಡಿ.02ರಂದು ಆಯ-ವ್ಯಯ ತಯಾರಿಗೆ ಸಾರ್ವಜನಿಕ ಸಲಹಾ ಸಭೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭೆಯ 2026-27ನೇ ಸಾಲಿನ ಆಯ-ವ್ಯಯ ತಯಾರಿ ಬಗ್ಗೆ ಸಾರ್ವಜನಿಕ ಸಲಹಾ ಸೂಚನಾ ಸಭೆಯನ್ನು ನಗರಸಭೆ ಆಡಳಿತಾಧಿಕಾರಿಗಳು, ಪೌರಾಯುಕ್ತರು ಅಧ್ಯಕ್ಷತೆಯಲ್ಲಿ ಡಿ.02ರಂದು ಬೆಳಿಗ್ಗೆ 11.30ಕ್ಕೆ ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.  

ನಗರದ ಗಣ್ಯ ವ್ಯಕ್ತಿಗಳು, ವರ್ತಕರು, ಹಿರಿಯ ನಾಗರೀಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಿವೃತ್ತ ಅಧಿಕಾರಿ, ನೌಕರರು, ಪತ್ರಕರ್ತರು, ಸಾರ್ವಜನಿಕರು ತಮ್ಮ ಸಲಹೆ ಸೂಚನೆಗಳನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಹಿರಿಯೂರು ನಗರಸಭೆ ಪೌರಾಯುಕ್ತ ಎ.ವಾಸೀಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - 

 

 

- Advertisement - 

Share This Article
error: Content is protected !!
";