ವಾಹನ ಖರೀದಿಸಲು ಆರ್ಥಿಕ ನೆರವಿಗೆ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೀನುಗಾರಿಕೆ ಇಲಾಖೆಯಿಂದ 2025-26ನೇ ಸಾಲಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯ್ದ 3 ಜನ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರದ ವಾಹನ ಖರೀದಿಸಲು ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಯಡಿ ವಾಹನ ಖರೀದಿಯ ಶೇ.50 ರಷ್ಟು ಅಥವಾ ಗರಿಷ್ಠ 3 ಲಕ್ಷದ ವರೆಗೆ ಆರ್ಥಿಕ ನೆರವು ನೀಡಲಾಗುವುದು. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಸೆ.15 ರ ಒಳಗೆ ಆಯಾ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅರ್ಜಿ ಸಲ್ಲಿಸಬಹುದು.

- Advertisement - 

ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಮೊಳಕಾಲ್ಮೂರು ಸಹಾಯಕ ನಿರ್ದೇಶಕ ತುಳಿಸಿದಾಸ್ ಮೊಬೈಲ್ ಸಂಖ್ಯೆ 9342187356, ಚಳ್ಳಕೆರೆ ಮತ್ತು ಹಿರಿಯೂರು ಸಹಾಯಕ ನಿರ್ದೇಶಕಿ ದೀಪಾಲಿ ಮೊಬೈಲ್ ಸಂಖ್ಯೆ 9740900866 ಹಾಗೂ ಹೊಸದುರ್ಗ ಮತ್ತು ಹೊಳಲ್ಕೆರೆ ಸಹಾಯಕ ನಿರ್ದೇಶಕ ವೆಂಕಟೇಶ್ವರ ಮೊಬೈಲ್ ಸಂಖ್ಯೆ 9945004235 ಕರೆ ಮಾಡಬಹುದು.

 

- Advertisement - 

Share This Article
error: Content is protected !!
";