ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಮಹಾನಗರ ಜನತಾದಳ ಜಾತ್ಯತೀತ ಪಕ್ಷದ ಕಾರ್ಮಿಕ ವಿಭಾಗದ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಸಿ.ಬಿ., ಮಾಜಿ ಸಚಿವರಾದ ಲೀಲಾ ದೇವಿ. ಆರ್. ಪ್ರಸಾದ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಎಚ್ಎಂ ರಮೇಶ್ ಗೌಡ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾದ ಟಿ ಆರ್ ತುಳಸಿ ರಾಮ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷರಾದ ಎ ಎಂ ಪ್ರವೀಣ್ ಕುಮಾರ್, ಬೆಂಗಳೂರು ನಗರ ಕಾರ್ಯಧ್ಯಕ್ಷರಾದ ಕೆ ವಿ ನಾರಾಯಣಸ್ವಾಮಿ,
ಮಹಾಪ್ರಧಾನ ಕಾರ್ಯದರ್ಶಿ ಎಸ್ ರಮೇಶ, ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಜಿ ವೇಲು, ಯುವ ಘಟಕದ ಅಧ್ಯಕ್ಷರಾದ ಸಾಮೂಯಲ್, ಬೆಂಗಳೂರು ನಗರದ ಹಿರಿಯ ಉಪಾಧ್ಯಕ್ಷರಾದ ಎ ಎಸ್ ಗೋವಿಂದೇಗೌಡ, ರಾಜ್ಯ ವಕ್ತಾರರಾದ ಎಚ್ ಎನ್ ದೇವರಾಜು, ರಾಜ್ಯ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷರಾದ ಶೀಲಾ ನಾಯಕ್, ಬೆಂಗಳೂರು ನಗರ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಎಂ ಗೋಪಾಲ್ ಸೇರಿದಂತೆ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಕಾರ್ಮಿಕ ಮುಖಂಡರುಗಳಿಗೆ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರ ಹೆಸರಿನಲ್ಲಿ ಕಾರ್ಮಿಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಂತರ ಪಕ್ಷದ ಕಚೇರಿಯ ಸಿಬ್ಬಂದಿ ವರ್ಗದವರಿಗೆ ಸಮವಸ್ತ್ರವನ್ನು ವಿತರಿಸಿ ಅರ್ಥಪೂರ್ಣವಾಗಿ ಕಾರ್ಮಿಕರ ದಿನವನ್ಮು ಆಚರಿಸಲಾಯಿತು.