ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕವು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಮಾರ್ಪಟ್ಟಿದೆ ಎಂದು ಜೆಡಿಎಸ್ ಆರೋಪಿಸಿದೆ.
ವಾಲ್ಮೀಕಿ ಹಗರಣ, ಮುಡಾ ಹಗರಣ, ಇಂಧನ ಇಲಾಖೆ ಸ್ಮಾರ್ಟ್‌ಮೀಟರ್‌ಹಗರಣ, ಕಾರ್ಮಿಕ ಇಲಾಖೆ ಕಿಟ್‌ಹಗರಣ, ರಸ್ತೆ ಗುಂಡಿ ಮುಚ್ಚುವುದರಲ್ಲಿ ಕಮಿಷನ್, ಅಬಕಾರಿ ವರ್ಗಾವಣೆ ದಂಧೆ, ವಸತಿ ಇಲಾಖೆಯಲ್ಲಿ ಮನೆಗಾಗಿ ಕಮಿಷನ್, ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಕಮಿಷನ್, ಅಗತ್ಯ ವಸ್ತುಗಳ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಸೇರಿದಂತೆ ಎಲ್ಲ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಹೀಗೆ ರಾಜ್ಯದ ಜನಸಾಮಾನ್ಯರ ಸುಲಿಗೆ ಮಾಡಿ, ಲೂಟಿ ಮಾಡಿರುವ ಹಣವನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಸಮರ್ಪಣೆ ಮಾಡಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.

