ಕೆಪಿಎಸ್‍ಸಿ: ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ವಯೋಮಿತಿ ಸಡಿಲಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗವು 2023-24ನೇ ಸಾಲಿನಲ್ಲಿ ವಿವಿಧ ಇಲಾಖೆಗಳಲ್ಲಿನ ಗ್ರೂಪ್ ಸಿವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಹುದ್ದೆಗಳ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಅಧಿಸೂಚನೆ ಸಂಖ್ಯೆ. ಪಿ.ಎಸ್.ಸಿ.503ಆರ್.ಟಿ.ಬಿ.-2/2023-24/3494 ದಿನಾಂಕ:15-03-2024 ಒಟ್ಟು ಹುದ್ದೆಗಳ ಸಂಖ್ಯೆ 313 (.ಮೂ.ವೃ), ಪಿ.ಎಸ್.ಸಿ.506 ಆರ್.ಟಿ.ಬಿ.-2/2023-24/3497 ದಿನಾಂಕ:    15-03-2024 ಒಟ್ಟು ಹುದ್ದೆಗಳ ಸಂಖ್ಯೆ 60 (.ಮೂ.ವೃ), ಪಿ.ಎಸ್.ಸಿ.505 ಆರ್ಟಿಬಿ2/2023-24/3496 ದಿನಾಂಕ: 15-03-2024 ಒಟ್ಟು ಹುದ್ದೆಗಳ ಸಂಖ್ಯೆ 16 (ಹೈ.), ಪಿ.ಎಸ್.ಸಿ.504 ಆರ್ಟಿಬಿ2/2023-24/3495 ದಿನಾಂಕ:15-03-2024 ಒಟ್ಟು ಹುದ್ದೆಗಳ ಸಂಖ್ಯೆ 97 (ಹೈ.) ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು.

ಪ್ರಸ್ತುತ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 166 ಸೆನನಿ 2024, ದಿನಾಂಕ:10.09.2024ರಲ್ಲಿ ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿರುವ ಹಿನ್ನೆಲೆಯಲ್ಲಿ

ಅಧಿಸೂಚನೆಗಳಲ್ಲಿನ ವಿವಿಧ ಗ್ರೂಪ್ಸಿ ವೃಂದದ ಹುದ್ದೆಗಳಿಗೆ ಸಾಮಾನ್ಯ ಅರ್ಹತೆ38 ವರ್ಷಗಳು, ಪ್ರವರ್ಗ 2, 2ಜಿ, 3 ಮತ್ತು 3ಬಿ41 ವರ್ಷಗಳು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ1- 43 ವರ್ಷಗಳುಎಂಬುದಾಗಿ ಒಂದು ಬಾರಿಗೆ ಅನ್ವಯವಾಗುವಂತೆ (one time measure) ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿ ತಿದ್ದುಪಡಿ ಅಧಿಸೂಚನೆಯನ್ನು ಅಕ್ಟೋಬರ್ 14 ರಂದು ಹೊರಡಿಸಲಾಗಿರುತ್ತದೆ.

 ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 15 ರಿಂದ 30 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶವನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಯೋಗದ ವೆಬ್ಸೈಟ್ http://kpsc.kar.nic.in/Lists ರಡಿಯಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

- Advertisement -  - Advertisement - 
Share This Article
error: Content is protected !!
";