ಸ್ವಂತ ದುಡ್ಡು ನೀಡಿ ಕೊಟ್ಟ ಮಾತು ಉಳಿಸಿಕೊಂಡ ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಮಂಡ್ಯ:
ಮಂಡ್ಯ ನಗರದ ಐತಿಹಾಸಿಕ ಮೈಷುಗರ್ ಶಾಲೆಯ ಶಿಕ್ಷಕರು ಹಲವಾರು ತಿಂಗಳಿನಿಂದ ವೇತನವಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದರು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಶಿಕ್ಷಕರ ಬಾಕಿ ವೇತನಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದೆ. ಅದರಂತೆಯೇ ಸಂಸದನಾಗಿ ನನಗೆ ಸಿಗುವ ವೇತನವನ್ನೇ ಶಿಕ್ಷಕರಿಗೆ ವೇತನಕ್ಕಾಗಿ ನೀಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

- Advertisement - 

ಮುಂದಿನ ದಿನಗಳಲ್ಲಿ ಅತ್ಯುತ್ತಮ ದರ್ಜೆಯ ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು 19,94,200 ಮೊತ್ತದ ಚೆಕ್ ಅನ್ನು ಶಿಕ್ಷಕರುಗಳಿಗೆ ಹಸ್ತಾಂತರ ಮಾಡಿದರು.

- Advertisement - 

 

Share This Article
error: Content is protected !!
";