ಚಂದ್ರವಳ್ಳಿ ನ್ಯೂಸ್, ಚಿತ್ರದರ್ಗ:
ಚಿತ್ರದುರ್ಗ ಜಿಲ್ಲೆಯ ನಾಥಪಂಥ ಜೋಗಿ ಸಂಸ್ಥಾನ ಮಠದ ಪೂರ್ವಭಾವಿ ಸಭೆಯನ್ನು ನಗರದ ಐಶ್ವರ್ಯ ಫೋರ್ಟ್‌ನಲ್ಲಿ ಕರೆಯಲಾಗಿತ್ತು.
ಅಖಿಲ ಕರ್ನಾಟಕ ಜೋಗಿ ಮಹಾಮಂಡಳದ ರಾಜ್ಯಾಧ್ಯಕ್ಷ ಶಿವಾಜಿ ಮಧುಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಅನೇಕ ಮಠಗಳು ನಮ್ಮ ಕೈತಪ್ಪಿ ಹೋಗಿರುವುದರಿಂದ ಚಿತ್ರದುರ್ಗ ರಾಜ್ಯದ ಮಧ್ಯಭಾಗವಾಗಿರುತ್ತದೆ ಆದ್ದರಿಂದ ಇಲ್ಲಿ ನಾಥಪಂಥ ಜೋಗಿ ಸಂಸ್ಥಾನ ಮಠ ಸ್ಥಾಪನೆ ಮಾಡುವುದರಿಂದ ನಮ್ಮ ಸಮಾಜವನ್ನು ಸಂಘಟನೆಯ ಜೊತೆಗೆ ರಾಜಕೀಯ, ಶೈಕ್ಷಣಿಕವಾಗಿ ಮಕ್ಕಳನ್ನು ಮುಖ್ಯವಾಹಿನಿ ತರುವಲ್ಲಿ ಪಾತ್ರವಹಿಸಬಹುದು ಎಂದರು.
ಚಿತ್ರದುರ್ಗ ಜಿಲ್ಲೆಯ ಉಪ್ಪನಾಯಕನಹಳ್ಳಿ ಜೋಗಿ ಸಮಾಜದ ಮಕ್ಕಳು ಪಿಯುಸಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ, ಕುಸ್ತಿಪಟುವಿನಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಮಕ್ಕಳಿಗೆ ಪ್ರೋತ್ಸಾಹ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲು ಸಾಧ್ಯವಾಗುತ್ತದೆ ಎಂದರು.
ಶ್ರೀ ಮಠ ಸ್ಥಾಪನೆಯಿಂದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿರುವುದರಿಂದ ಸಮಾಜದ ಮಕ್ಕಳು ಐಎಎಸ್, ಕೆಎಎಸ್ ಅಧಿಕಾರಿಗಳು ಆಗಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಜೋಗಿ ಸಮಾಜದ 27 ಉಪಜಾತಿಗಳನ್ನು ಒಟ್ಟುಗೂಡಿಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಶ್ರೀಮಠವು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತದೆ ಎಂದು ಅವರು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಚಿತ್ರದುರ್ಗದಲ್ಲಿ ನಾಥ ಪರಂಪರೆಯ ಮಠ ಸ್ಥಾಪನೆಯಿಂದ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಠ ಸ್ಥಾಪನೆಯಾಗಲು ೧ ಎಕರೆ ಜಮೀನನ್ನು ನೀಡಲು ಸಮಾಜದ ಅಧ್ಯಕ್ಷರಾದ ಡಾ.ಜಗದೀಶ್ ಒಪ್ಪಿರುವುದನ್ನು ಸ್ವಾಗತಿಸಿದರು. ಸಮಾಜದ ಏಳಿಗೆಗೆ ಜಿಲ್ಲೆಯ ಎಲ್ಲ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಶ್ರಮಿಸಬೇಕೆಂದು ಕೋರಿದರು. ಜೋಗಿ ಜನಾಂಗದ ಅಧ್ಯಕ್ಷ ಡಾ.ಜಗದೀಶ್ ಮಾತನಾಡಿ ನಾನು ವಿದ್ಯಾರ್ಥಿಯಾದಂತಹ ಸಂದರ್ಭದಲ್ಲಿ ಪವರ್ಗ-೧ ಜೋಗಿ ಸಮಾಜದವನಾಗಿದರಿಂದ ನನಗೆ ವಿದ್ಯಾರ್ಥಿಭ್ಯಾಸಕ್ಕೆ ಅನುಕೂಲವಾಗುವುದರ ಜೊತೆಗೆ ಎಂ.ಬಿ.ಬಿ.ಎಸ್ ಸೀಟ್ ಸಹ ಸಿಕ್ಕಿರುವುದನ್ನು ಸ್ಮರಿಸಿದರು.
ಕಿರಣ್‌ಕುಮಾರ್, ವೇದಾವತಿ, ಶೋಭಾ ರವರು ರಾಜ್ಯಮಟ್ಟದಲ್ಲಿ ತನ್ನದೇ ಆದ ರೀತಿಯಲ್ಲಿ ಗುರುತಿಸಿಕೊಂಡರು ಸಹ ಸರ್ಕಾರದಿಂದಾಗಲಿ ಯಾವುದೇ ರೀತಿ ಉಪಯೋಗವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಾವು ಒಗ್ಗಟ್ಟಾಗಿದ್ದರೆ ರಾಜಕೀಯ ವ್ಯಕ್ತಿಗಳಾಗಲಿ, ಸರ್ಕಾರವಾಗಲಿ ನಮ್ಮ ಕಡೆ ಗಮನ ಹರಿಸುತ್ತದೆ. ನಾನು ೧ ಎಕರೆ ಜಮೀನನ್ನು ಶ್ರೀಮಠಕ್ಕೆ ಕೊಡಲು ಒಪ್ಪಿದ್ದು, ಕಾರಣ ನಮ್ಮ ಸಮಾಜದ ಮಕ್ಕಳು ರಾಜಕೀಯ, ಶೈಕ್ಷಣಕವಾಗಿ ಮುಂದುವರೆಯಲಿ ಎಂದು ಆಶಾಮನೋಭಾವದಿಂದ ನೀಡುತ್ತೇನೆ. ಸಮಾಜ ಕಟ್ಟುವಲ್ಲಿ ಹಗಲಿರುಳು ಶ್ರಮಿಸಿರುತ್ತೇನೆ ಎಂದು ಭರವಸೆ ನೀಡಿದರು.
ಪ್ರೊ.ಚಂದ್ರಪ್ಪ ಮಾತನಾಡಿ ಈ ಐತಿಹಾಸಿಕ ದಿನವಾಗಿದ್ದು, ನಾನು ಸಹ ಪ್ರಾಧ್ಯಾಪಕರಾದ ಸಂದರ್ಭದಲ್ಲಿ ಎಷ್ಟೋ ಜೋಗಿ ಸಮಾಜದ ಮಕ್ಕಳಿಗೆ ಶುಲ್ಕ ಕಟ್ಟಲು ಅಥವಾ ವಸತಿ ಇಲ್ಲದೆ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಜೋಗಿ ಸಮಾಜದ ಮಕ್ಕಳಿಗೆ ಶ್ರೀಮಠ ಅವಶ್ಯಕತೆ ಎಂದು ತಿಳಿಸಿದರು.
ವಕೀಲ ಪ್ರತಾಪ್ ಜೋಗಿ ಮಾತನಾಡಿ ಜೋಗಿ ಸಮಾಜ ಆರ್ಥಿಕವಾಗಿ ಹಿಂದುಳಿದ್ದು, ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಅನೇಕ ಬಾರಿ ನಮ್ಮ ಸಮಾಜಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಮನವಿ ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲ. ಪ್ರಸ್ತುತ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಶ್ರೀಮಠಕ್ಕೆ ಜಮೀನು ಕಲ್ಪಿಸಿಕೊಡಲಿ ಎಂದು ಕೇಳಿಕೊಂಡಾಗ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್ ರವರು ಸಕರಾತ್ಮಕಾವಾಗಿ ಒಪ್ಪಿಕೊಂಡಿರುವುದರಿಂದ ಜಿಲ್ಲಾಡಳಿತವನ್ನು ಶ್ಲಾಘಿಸಿದರು.
ಶ್ರೀಮಠದಿಂದ ಎಷ್ಟೋ ಕುಟುಂಬಗಳಿಗೆ ಉನ್ನತ ಶಿಕ್ಷಣ, ವಿವಾಹವಾಗಲು ಸಮಾಜದ ಸಮಸ್ಯೆಗಳನ್ನು ಆಲಿಸಲು ಮತ್ತು ರಾಜಕೀಯವಾಗಿ ಪ್ರಾತಿನಿದ್ಯ ಸಿಗಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕುಂದಾಪುರ ರಮೇಶ್, ತುಮಕೂರಿನ ಶಿವುಕುಮಾರ್, ತೋಟಪ್ಪ, ಹೊನ್ನಪ್ಪ, ಮಂಜುನಾಥ್, ಯರ್ರಿಸ್ವಾಮಿ, ರಾಮು ಹಾವೇರಿ, ಚಂದ್ರು ದಾವಣಗೆರೆ, ಮಂಜುನಾಥ್ ನೆರ್‍ಲಗಿ, ಮಂಜುನಾಥ್ ಶಿವಪುರ, ಸಿದ್ದರಾಜು ಜೋಗಿ, ಶಿವುಕುಮಾರ್, ಗುರುಸ್ವಾಮಿ, ಯೋಗಿಶ್, ಕೃಷ್ಣಮೂರ್ತಿ, ರವಿಕಿರಣ್, ಶೋಭಾ, ವೇದಾವತಿ, ಕವಿತಾ, ಬಸವರಾಜ್ ಭಂಡಾರಿ, ನಾಗರಾಜು, ರವಿ, ತ್ಯಾಗರಾಜು, ಪ್ರಖ್ಯಾತ್‌ಜೋಗಿ, ವಿಜಯ್‌ಕುಮಾರ್ ಬೆಂಗಳೂರು ಇನ್ನಿತರರು ಇದ್ದರು.