ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಥ ಸಪ್ತಮಿ ಹಿನ್ನೆಲೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದ ಸುಭಾಷ್ ನಗರದಲ್ಲಿರುವ ಪತಂಜಲಿ ಯೋಗ ಶಿಕ್ಷಣ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿತ್ತು.

ಯೋಗ ಗುರುಗಳಾದ ಮಂಜುನಾಥ್ ರವರ ಮಾರ್ಗ ದರ್ಶನದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಜೊತೆಗೆ ಅಗ್ನಿಹೋತ್ರ ಹೋಮ ನಡೆಸಿ ರಥ ಸಪ್ತಮಿ ಆಚರಣೆ ಮಾಡಲಾಯಿತು. ನೂರ ಒಂದು ಬಾರಿ ಯೋಗ ಮಾಡುವ ಮೂಲಕ ಸೂರ್ಯ ನಮಸ್ಕಾರ ಮಾಡಲಾಯಿತು.

ರಥಸಪ್ತಮಿ ಯಂದು ಸೂರ್ಯ ನಮಸ್ಕಾರ ಮಾಡಿದರೆ ಸಾಕಷ್ಟು ನಕಾರಾತ್ಮಕ ಶಕ್ತಿಗಳು ತೊಲಗಿ ಆರೋಗ್ಯ ಲಭಿಸುತ್ತದೆ ಎನ್ನುವ ಪ್ರತೀತಿ ಹಿನ್ನೆಲೆ ನೂರಾರು ಮಂದಿ ಯೋಗ ಪಟುಗಳು ಭಾಗಿಯಾಗಿ ಸೂರ್ಯ ನಮಸ್ಕಾರ ಮಾಡಿದರು.

ಸೂರ್ಯ ದೇವನ ಜನ್ಮ ದಿನಾಚರಣೆಯು ಸಹ ರಥ ಸಪ್ತಮಿಯಂದೆ ಇದೆ. ಈ ಹಿನ್ನೆಲೆ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.

Share This Article
error: Content is protected !!
";