ಕಾಮಗಾರಿಗಳನ್ನೇ ಮಾಡದೆ ನಕಲಿ ಬಿಲ್‌ಸೃಷ್ಟಿಸಿ 12.50 ಕೋಟಿ ಹಣ ಗುಳಂ ಮಾಡಿದ ಶಾಸಕರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕಾಂಗ್ರೆಸ್‌ಸರ್ಕಾರದಲ್ಲಿ ಲೂಟಿ ಹೊಡೆಯುವುದಕ್ಕೆ ಕಾಮಗಾರಿ ಎಂಬುದು ಒಂದು ನೆಪವಷ್ಟೆ. ರಾಮನಗರದಲ್ಲಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗಾಗಿ
12.50 ಕೋಟಿ ವೆಚ್ಚದ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದರೂ ಕಾಮಗಾರಿ ಮುಕ್ತಾಯವಾಗಿಲ್ಲ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ಜೆಡಿಎಸ್ ಗಂಭೀರ ಆರೋಪ ಮಾಡಿದೆ. 

ಆದರೆ ಎರಡು ತಿಂಗಳಾದರೂ ನಗರಸಭೆ ವ್ಯಾಪ್ತಿಯಲ್ಲಿ ಕಾಮಗಾರಿ ಎಲ್ಲಿ ನಡೆಯುತ್ತಿದೆ? ಯಾರು ಮಾಡುತ್ತಿದ್ದಾರೆ? ಎಂಬ ಸಣ್ಣ ಮಾಹಿತಿಯೂ ನಗರಸಭೆ ಅಧಿಕಾರಿಗಳಿಗೆ ಗೊತ್ತಿಲ್ಲ.

ಆರ್‌ಟಿಐ ಅಡಿ ಮಾಹಿತಿ ಕೇಳಿದ ಅರ್ಜಿಗೆ “ಕಾಮಗಾರಿ ಪಟ್ಟಿಗೆ ಮಂಜೂರು ನೀಡಿಲ್ಲ” ಎಂಬ ಉತ್ತರ ನೀಡಲಾಗಿದೆ. ಶಾಸಕ ಇಕ್ಬಾಲ್‌ಹುಸೇನ್‌ಅವರಿಂದಲೂ “ಕಾಮಗಾರಿ ಪಟ್ಟಿಗೆ ಮಂಜೂರಾತಿ ನೀಡಿಲ್ಲ” ಎಂಬ ಉತ್ತರವೇ ಬಂದಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶ ನಗರಸಭೆ ಆಯುಕ್ತರಿಗೆ ಕಾಮಗಾರಿಯ ಸಂಪೂರ್ಣ ಮಾಹಿತಿ ಕೇಳಿ ಪತ್ರ ಬರೆದಿದ್ದರೂ ಅಧಿಕಾರಿಗಳು ಮಾಹಿತಿ ಒದಗಿಸದೆ ಗೌಪ್ಯವಾಗಿಟ್ಟಿದ್ದಾರೆ.

ಇದನ್ನೆಲ್ಲ ಗಮನಿಸಿದರೆ, ಕಾಮಗಾರಿಗಳನ್ನೇ ಮಾಡದೆ ನಕಲಿ ಬಿಲ್‌ಸೃಷ್ಟಿಸಿ 12.50 ಕೋಟಿ ಹಣವನ್ನು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್‌ಹುಸೇನ್‌ಕಬಳಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

 

- Advertisement -  - Advertisement - 
Share This Article
error: Content is protected !!
";