ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸೊಳ್ಳೆಗಳ ಹಾವಳಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆಯ ಕೊರತೆಯಿಂದ ಸೊಳ್ಳೆಗಳು ವಿಪರೀತವಾಗಿದ್ದು ಸಾಂಕ್ರಾಮಿಕ ರೋಗ ತಡೆಯುವ ಹಿನ್ನೆಲೆಯಲ್ಲಿ ಪರಿಸರ ಸ್ವಚ್ಚತೆ ಮಾಡಿ, ಔಷಧಿ ಸಿಂಪಡಿಸುವ ಮೂಲಕ ಆರೋಗ್ಯ ಕಾಪಾಡಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರಸಭೆ ಆಯುಕ್ತರಾದ ರೇಣುಕಾ ಅವರಿಗೆ ಮನವಿ ಮಾಡಿದ್ದಾರೆ.

 ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ವಕೀಲರು ಮತ್ತು ಒಂದೂವರೆ ಸಾವಿರಕ್ಕೂ ಅಧಿಕ ಸಾರ್ವಜನಿಕರು ಎಂದರೆ ವಯೋವೃದ್ಧರು, ಮಹಿಳೆಯರು, ಯುವಕರು ಪೋಷಕರೊಂದಿಗೆ ಪುಟಾಣಿ ಮಕ್ಕಳು ನ್ಯಾಯಾಲಯಕ್ಕೆ ಆಗಮಿಸುತ್ತಾರೆ. ಇತ್ತಿಚೆಗೆ ನ್ಯಾಯಾಲಯದ ಆವರಣದಲ್ಲಿ ಸ್ವಚ್ಚತೆ ಸಂಪೂರ್ಣ ಮರೀಚಿಕೆಯಾಗಿದ್ದು, ಸೊಳ್ಳೆಗಳ ಕಾಟ ವಿಪರೀತ ಹೆಚ್ಚಾಗಿದೆ.

 ಸೊಳ್ಳೆಗಳು ಕೇವಲ ಆವರಣದಲ್ಲಷ್ಟೇ ಅಲ್ಲದೆ ನ್ಯಾಯಾಲಯ ಒಳಗಡೆಯೂ ಕಾಟಕೊಡುತ್ತಿದ್ದು ಹಿರಿಯ ವಕೀಲರು ಸೇರಿಂದತೆ ಎಲ್ಲರೂ ರೋಸಿ ಹೋಗಿದ್ದಾರೆ. ಈ ಬಗ್ಗೆ ಚಿತ್ರದುರ್ಗ ಜಿಲ್ಲಾ ವಕೀಲರ ಸಂಘವು ತಮಗೆ ಅನೇಕ ಬಾರಿ ಮನವಿ ಮಾಡಿದ್ದು. ಇದೀಗ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಮನವಿ ಮಾಡುವುದೇನೆಂದರೆ, ಚಿತ್ರದುರ್ಗ ನಗರದ ಪೌರಸಿಬ್ಬಂದಿಗಳು ನಿತ್ಯ ನಗರದ ವಿವಿಧ ರಸ್ತೆ ಮತ್ತು ಚರಂಡಿ ಸ್ವಚ್ಚತೆ ಮಾಡುವಂತೆ ವಾರಕ್ಕೆ ಎರಡುದಿನ ಸೊಳ್ಳೆಗಳ ನಾಶಮಾಡಲು ಮತ್ತು ಸಾಂಕ್ರಾಮಿಕ ರೋಗ ತಡೆಯಲು ನ್ಯಾಯಾಲಯದ ಆವರಣದ ಪರಿಸರ ಸ್ವಚ್ಚತೆ ಮಾಡುವುದು ಅಗತ್ಯವಾಗಿದೆ.

 ನ್ಯಾಯಾಲಯಕ್ಕೆ ಬರುವ ನಾಗರೀಕರ ಹಿತದೃಷ್ಠಿಯಿಂದ ಆವರಣದೊಳಗಿನ ಸುತ್ತಮುತ್ತಲಿನ  ಪರಿಸರ ಸ್ವಚ್ಛತೆ ಮಾಡಿಸಬೇಕೆಂದು ಮತ್ತು ಔಷಧಿ ಸಿಂಪಡಿಸಿ ಸೊಳ್ಳೆಗಳ ನಾಶಪಡಿಸಬೇಕು. ಪ್ರಮುಖವಾಗಿ ಸ್ವಚ್ಛತೆಗಾಗಿ ಇಬ್ಬರು ಪೌರಕಾರ್ಮಿಕರನ್ನು ನಿಯೋಜಿಸುವ ಮೂಲಕ ವಕೀಲರ ಆರೋಗ್ಯ ಮತ್ತು ನಾಗರೀಕರ ಹಿತರಕ್ಷಣೆಯಲ್ಲಿ ಮುನ್ನೆಚ್ಚರಿಕೆ ವಹಿಸಬೇಕೆಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ  ರಾಜ್ಯ ಉಪಾಧ್ಯಕ್ಷರಾದ ಡಾ.ಎಂ.ಸಿ.ನರಹರಿ ಹಾಗೂ ಪ್ರಧಾನ ಕಾರ್ಯದರ್ಶಿ  ಮಾಲತೇಶ್ ಅರಸ್ ಮನವಿ ಮಾಡಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";