Ad imageAd image

ರೇಷ್ಮೆ ಬೆಳೆಗಾರರಿಗೆ ಸರ್ಕಾರದ ಹಲವು ಸೌಲಭ್ಯ: ಸಂಸದ ಈರಣ್ಣ ಕದಡಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತವು ಪ್ರಪಂಚದಲ್ಲೇ ರೇಷ್ಮೆ ಬೆಳೆ ಬೆಳೆಯುವಲ್ಲಿ ಎರಡನೇ ಸ್ಥಾನದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ರೇಷ್ಮೆ ಉಡುಪುಗಳಷ್ಟೇ ಅಲ್ಲದೆ, ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ. ರೇಷ್ಮೆ ಉದ್ಯಮಕ್ಕೂ ರೈತರಿಗೆ ನೀಡುವಂತೆ ಉಧ್ಯಮಿಗಳಿಗೂ  ಸರ್ಕಾರದ ಬೆಂಬಲ ಸೌಲಭ್ಯ ದೊರೆಯುತ್ತಿದೆ.

ಭಾರತದಲ್ಲಿ ತಯಾರಾಗುವ ರೇಷ್ಮೆ ಉಡುಪು ಹಾಗು ಅದರ ಉಪ ಉತ್ಪನ್ನಗಳಿಗೆ ಭಾರೀ ಬೇಡಿಕೆ ಉಂಟಾಗಿದ್ದು, ಯುವ ಬೆಳೆಗಾರರು ಮತ್ತು ಉಧ್ಯಮಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ಈರಣ್ಣ ಕದಡಿ ತಿಳಿಸಿದರು.

ಅತ್ಯಾಧುನಿಕ ತಂತ್ರಜ್ಙಾನ ಬಳಸಿದಲ್ಲಿ ಭಾರತ ಮೊದಲ ಸ್ಥಾನ:
ರೇಷ್ಮೇ ಉತ್ಪಾದನೆಯಲ್ಲಿ ಚೀನ 52 ಮೆಟ್ರಿಕ್‌ಟನ್‌ಉತ್ಪಾದನೆಯಲ್ಲಿ ಮಾಡುವ ಮೊದಲ ಸ್ಥಾನದಲ್ಲಿದ್ದರೆ ಭಾರತ 39 ಮೆಟ್ರಿಕ್‌ಟನ್‌ಉತ್ಪಾದನೆಯ ಮೂಲಕ ಎರಡನೇ ಸ್ಥಾನದಲ್ಲಿದೆ. ಚೀನ ಬಳಸುವಂತೆ ಭಾರತದಲ್ಲೂ ರೇಷ್ಮೇ ಕೃಷಿ ಮತ್ತು ಅದರ ಉತ್ಪನ್ನ ಗಳ ತಯಾರಿಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಕೊಂಡಲ್ಲಿ ಮೊದಲ ಸ್ಥಾನದಲ್ಲಿ ನಾವಿರಲಿದ್ದೇವೆ ಎಂದು ಸೆಂಟ್ರಲ್ ಸಿಲ್ಕ್ ಬೋರ್ಡ್‌ನ ಪ್ರಾದೇಶಿಕ ಸಹಾಯಕ ಕಾರ್ಯದರ್ಶಿ ಪ್ರಜಕ್ತಾ ಎಲ್. ವರ್ಮಾ ತಿಳಿಸಿದರು.

ನಗರದ ಜಿಕೆವಿಕೆ ಯ  ಸಮ್ಮೇಳನ ಸಭಾಂಗಣದಲ್ಲಿ  ನಡೆದ ಕೇಂದ್ರ ರೇಷ್ಮೆ ಮಂಡಳಿಯ (Seri-Stakeholders Meet) ಸೇರಿ-ಪಾಲುದಾರರ ಸಭೆಯನ್ನು ಉದ್ಘಾಟಿಸಿ ಅವರು ಈ ವಿಚಾರಗಳನ್ನು ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಪ್ರಜಕ್ತಾ ಎಲ್. ವರ್ಮಾ, ಜಂಟಿ ಕಾರ್ಯದರ್ಶಿ, ಬಟ್ಟೆ ಸಚಿವಾಲಯ, ಭಾರತ ಸರ್ಕಾರ, ಪಿ. ಶಿವಕುಮಾರ್, ಸದಸ್ಯ ಕಾರ್ಯದರ್ಶಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ರಚನಾ ಶಾ, ಕಾರ್ಯದರ್ಶಿ, ಬಟ್ಟೆ ಸಚಿವಾಲಯ, ನವದೆಹಲಿ, ಎ. ಜಿ. ಲಕ್ಷ್ಮೀನಾರಾಯಣ ವಾಲ್ಮೀಕಿ, ಸಂಸದ, ಅನಂತಪುರ ಕ್ಷೇತ್ರ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೇಷ್ಮೆ ಉಪ ಉತ್ಪನ್ನಗಳ ಪ್ರದರ್ಶನ ಸಹ ಆಯೋಜಿಸಲಾಗಿತ್ತು, ಇದರಿಂದ ರೇಷ್ಮೆ ಉದ್ಯಮದ ತಾಂತ್ರಿಕ ಸಾಧನೆಗಳು ಮತ್ತು ಭವಿಷ್ಯದ ವಿಸ್ತರಣೆಯ ಕುರಿತಾದ ಅರಿವು ಮೂಡಿಸಲಾಯಿತು.

 

- Advertisement -  - Advertisement - 
Share This Article
error: Content is protected !!
";