Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಐಟಿ ಕಂಪನಿಗಳಿಗೆ ಬ್ಯಾಕ್ ಬಿಲ್ ವಸೂಲಿ ಇಲ್ಲ: ಬೆಸ್ಕಾಂ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್ 

ಐಟಿ ಕಂಪನಿಗಳಿಗೆ ಬ್ಯಾಕ್ ಬಿಲ್ ವಸೂಲಿ ಇಲ್ಲ: ಬೆಸ್ಕಾಂ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್ 
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಮಾಹಿತಿ ತಂತ್ರಜ್ಞಾನ (ಐಟಿ), ಜೈವಿಕ ತಂತ್ರಜ್ಞಾನ (ಬಿಟಿ), ಸಾಫ್ಟ್ವೇರ್ ಡೆವಲ್ಪಮೆಂಟ್ ಹಾಗೂ ಬಿಪಿಒ ಸಂಸ್ಥೆಗಳಿಗೆ ವಿದ್ಯುತ್ ಶುಲ್ಕದ ನಿಗದಿತ ಪ್ರಮಾಣಪತ್ರ ಒದಗಿಸಿಲ್ಲ ಎಂಬ ಕಾರಣಕ್ಕೆ ಎಸ್ಕಾಂಗಳು ಪೂರ್ವಾನ್ವಯವಾಗಿ ವಾಣಿಜ್ಯ ದರದಲ್ಲಿ ವಿದ್ಯುತ್ ಬಿಲ್ ವಸೂಲಿ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಐಟಿ ಕಂಪನಿಗಳಿಗೆ ವಾಣಿಜ್ಯ ದರದಲ್ಲಿ ವಿದ್ಯುತ್ ಬಿಲ್ ಪಾವತಿಸುವಂತೆ ಕೋರಿ ನೀಡಿದ್ದ ನೋಟಿಸ್ ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಬೆಸ್ಕಾಂ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಟಿ. ಅವರಿದ್ದ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಏಕಸಸ್ಯ ಪೀಠದ ಆದೇಶ ಎತ್ತಿಹಿಡಿದಿದೆ.
ಐಟಿ, ಬಿಟಿ ಹಾಗೂ ಸಾಫ್ಟ್ವೇರ್ ಸಂಸ್ಥೆಗಳ ಹಕ್ಕುದಾರಿಕೆ ಅವುಗಳು ನಡೆಸುವ ಅಧಿಕೃತ ಚಟುವಟಿಕೆಗಳ ಸ್ವರೂಪವನ್ನು ಅವಲಂಬಿಸಿರುತ್ತದೆಯೇ ವಿನಃ, ಕೇವಲ ಪ್ರಮಾಣಪತ್ರ ತಕ್ಷಣಕ್ಕೆ ಒದಗಿಸಿಲ್ಲ ಎಂಬ ತಾಂತ್ರಿಕ ಕಾರಣಕ್ಕೆ ರಿಯಾಯಿತಿ ದರವನ್ನು ನಿರಾಕರಿಸುವುದಕ್ಕೆ ಅವಕಾಶವಿಲ್ಲ.

Advertisement

ಸರ್ಕಾರದ ಮಿಲೇನಿಯಮ್ ಐಟಿ ಮತ್ತು ಬಿಪಿಒ ನೀತಿಗಳಡಿ ಈ ಸಂಸ್ಥೆಗಳಿಗೆ ಕೈಗಾರಿಕಾ ವಿದ್ಯುತ್ ದರ ಅನ್ವಯವಾಗಲಿದೆ ಎಂದು ತಿಳಿಸಿದೆ. ಜತೆಗೆ, ಅದರಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ( ಕೆಇಆರ್ಸಿ) ದರ ನಿಗದಿಪಡಿಸಿದೆ. ಹೀಗಾಗಿ ಮುಂಚಿನ ದಿನಗಳಿಗೂ ಅನ್ವಯವಾಗುವಂತೆ ವಾಣಿಜ್ಯ ದರ ವಿಧಿಸಿ ಹೆಚ್ಚುವರಿ ಶುಲ್ಕ ಕೇಳುವುದು ಕಾನೂನುಬಾಹಿರ ಎಂದು ಪೀಠ ಹೇಳಿದೆ.

ಕಂಪನಿಯ ಹೆಸರಿನಲ್ಲಿ ಬದಲಾವಣೆಯಾಗಿದ್ದರೂ ಅಥವಾ ನೋಂದಾಯಿತ ಕಚೇರಿಗಳ ದಾಖಲೆಗಳಲ್ಲಿ ಮರು ಪರಿಶೀಲನೆಯಾಗಿದ್ದರೂ, ಅದು ಸಂಸ್ಥೆಯ ಮೂಲ ಸ್ವರೂಪವನ್ನು ಬದಲಿಸುವುದಿಲ್ಲ ಆದ್ದರಿಂದ ಹಳೆಯ ವಿದ್ಯುತ್ ದರ ಬದಲಾವಣೆಯಾಗುವುದಿಲ್ಲ. ಐಟಿ/ಬಿಟಿ ಇಲಾಖೆಯಿಂದ ಪ್ರಮಾಣಪತ್ರ ಪಡೆದುಕೊಳ್ಳುವಂತೆ ಸೂಚಿಸುವ ಸುತ್ತೋಲೆಗಳು ಮುಂದಿನ ದಿನಗಳಿಗೆ ಮಾತ್ರ ಅನ್ವಯವಾಗುತ್ತವೆ ಹೊರತು, ಹಿಂದಿನ ವರ್ಷಗಳ ವ್ಯವಹಾರಗಳಿಗೆ ಅದನ್ನು ಹಿಮ್ಮುಖವಾಗಿ ಬಳಸುವಂತಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರದ ‘ಮಿಲೇನಿಯಂ ಐಟಿ ನೀತಿ, 2000’ರ ಪ್ರಕಾರ, ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನ ಕಂಪನಿಗಳನ್ನು ‘ವಾಣಿಜ್ಯ ಗ್ರಾಹಕರು’ ಎಂದು ಪರಿಗಣಿಸುವ ಬದಲಿಗೆ ‘ಕೈಗಾರಿಕಾ ಗ್ರಾಹಕರು’ ಎಂದು ಪರಿಗಣಿಸಿ ಕೈಗಾರಿಕಾ ವಿದ್ಯುತ್ ದರ ಅನ್ವಯಿಸಬೇಕು ಎಂದು ತಿಳಿಸಲಾಗಿತ್ತು. ಈ ನೀತಿಯ ಆಧಾರದ ಮೇಲೆಯೇ ಕೆಇಆರ್ಸಿ ಕೂಡ ದರ ನಿಗದಿಪಡಿಸಿತ್ತು ಮತ್ತು ಕಂಪನಿಗಳು ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದವು.

ಆದರೆ, ಜನವರಿ 10, 2002 ರಂದು ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದರ ಪ್ರಕಾರ, ಐಟಿ-ಬಿಟಿ ವಲಯದ ಎಲ್ಲಾ ಸಂಸ್ಥೆಗಳು ಐಟಿ-ಬಿಟಿ ಇಲಾಖೆಯ ನಿರ್ದೇಶಕರಿಂದ ಹೊಸದಾಗಿ ನೋಂದಣಿ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಹೊಸ ಪ್ರಮಾಣಪತ್ರ ಇಲ್ಲ ಎಂಬ ಕಾರಣ ನೀಡಿ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು), ಹಳೆಯ ಐಟಿ-ಬಿಟಿ ಸಂಸ್ಥೆಗಳನ್ನು ವಾಣಿಜ್ಯ ಗ್ರಾಹಕರೆಂದು ವರ್ಗೀಕರಿಸಿ, ಲಕ್ಷಾಂತರ ರೂಪಾಯಿಗಳ ಹಿಂಬಾಕಿ (ಬ್ಯಾಕ್ ಬಿಲ್) ಪಾವತಿಸುವಂತೆ ನೋಟಿಸ್ ನೀಡಿದ್ದವು. 

ಇದನ್ನು ಪ್ರಶ್ನಿಸಿ ಕಂಪನಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಂಪೆನಿಗಳು ಕೈಗಾರಿಕಾ ದರದ ಸೌಲಭ್ಯ ಪಡೆಯುತ್ತಿರುವ ಹಳೆಯ ಸಂಸ್ಥೆಗಳಾಗಿವೆ. ಆಡಳಿತಾತ್ಮಕವಾಗಿ ಹೊಸದಾಗಿ ಸುತ್ತೋಲೆ ಹೊರಡಿಸುವ ಮೂಲಕ ಈ ಹಕ್ಕು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿ, ಎಸ್ಕಾಂಗಳು ಜಾರಿ ಮಾಡಿದ್ದ ನೋಟಿಸ್ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಎಸ್ಕಾಂಗಳು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದವು.

ವಿಚಾರಣೆ ವೇಳೆ ಬೆಸ್ಕಾಂ ಪರ ವಕೀಲರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ಸಾಫ್ಟ್‌ ವೇರ್‌ ಅಭಿವೃದ್ದಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ರಿಯಾಯಿತಿ ಕೈಗಾರಿಕಾ ಸುಂಕದ ಪ್ರಯೋಜನ ವಿಸ್ತರಿಸಬೇಕು ಎಂಬದು ಕಡ್ಡಾಯವಲ್ಲ. ಅಲ್ಲದೇ, ಸರ್ಕಾರದ ಎಲ್ಲ ಷರತ್ತುಗಳನ್ನು ಪಾಲಿಸಿದಲ್ಲಿ ಮಾತ್ರ ಈ ಪ್ರಯೋಜನವನ್ನು ವಿಸ್ತರಿಸಬೇಕಾಗುತ್ತದೆ.

ಅದರಂತೆ, ರಾಜ್ಯ ಸಲ್ಲಿರುವ ಐಟಿ ಕಂಪೆನಿಗಳು ತಮ್ಮ ಉದ್ದೇಶಿದ ಚಟುವಟಿಕೆಗಳಲ್ಲಿ ತೊಂಡಗಿಸಿಕೊಂಡಿವಿದ್ದು, ಸರ್ಕಾರದ ಷರತ್ತುಗಳನ್ನು ಅನುಸರಿಸುತ್ತಿವೆ ಎಂಬುದನ್ನು ಪರಿಶೀಲಿಸುವುದಕ್ಕಾಗಿ 2022ರ ಜನವರಿ 10ರಂದು ಮಾಹಿತಿ ತಂತ್ರಜ್ಞಾನ ಇಲಾಖೆ ನೀಡಲಾದ ನಿಗದಿತ ಪ್ರಮಾಣಪತ್ರವನ್ನು ಪಡೆದುಕೊಂದು ಬೆಸ್ಕಾಂಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಈ ಷರತ್ತನ್ನು ಪಾಲಿಸದ ಕಂಪನಿಗಳು ರಿಯಾಯಿತಿ ವಿದ್ಯುತ್‌ ಬಿಲ್‌ ಸೌಲಭ್ಯ ಲಭ್ಯವಾಗಿರುವುದಿಲ್ಲ. ಆದ್ದರಿಂದ ಏಕಸದಸ್ಯಪೀಠ ಆದೇಶವನ್ನು ರದ್ದುಪಡಿಸಬೇಕು ಎಂದು ಪೀಠಕ್ಕೆ ಕೋರಿದರು.

ಇದಕ್ಕೆ ಆಕ್ಷೇಪಿಸಿದ್ದ ಐಟಿ ಕಂಪೆನಿಗಳ ಪರ ವಕೀಲರು, ಏಕಸದಸ್ಯ ಪೀಠದಲ್ಲಿ ಅರ್ಜಿದಾರರಾಗಿರುವವರು ಎಲ್ಲರೂ ಐಟಿ ಕಂಪನಿಗಳೇ ಆಗಿವೆ. ಈ ಕಂಪೆನಿಗಳನ್ನು ಐಟಿ ನೀತಿಯ ಪ್ರಕಾರ ಕೈಗಾರಿಕೆಗಳು ಎಂದು ಪರಿಗಣಿಸಬೇಕು. ಆದರೆ, ವಾಣಿಜ್ಯ ಗ್ರಾಹಕರು ಎಂದು ಪರಿಗಣಿಸುವುದಕ್ಕೆ ಅವಕಾಶವಿಲ್ಲ. ಜೊತೆಗೆ ಈ ಎಲ್ಲ ಕಂಪೆನಿಗಳಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋವೂ ಕೂಡ ಖಚಿತಪಡಿಸಿದೆ. 

ಹೀಗಿರುವಾಗ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂಗಳು ಹೊಸ ಮಾದರಿಯ ನೋಂದಣಿ ಪತ್ರ ಇಲ್ಲ ಎಂಬ ಕಾರಣಕ್ಕೆ, ಹಳೆಯ ದಿನಾಂಕಗಳಿಂದಲೇ ಪೂರ್ವಾನ್ವಯವಾಗುವಂತೆ ವಾಣಿಜ್ಯ ದರದದಲ್ಲಿ ವಿದ್ಯುತ್ ಬಿಲ್ ನೀಡುತ್ತಿರುವುದು ಕಾನೂನು ಬಾಹಿರ ಎಂದು ಪೀಠಕ್ಕೆ ತಿಳಿಸಿದ್ದರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಮಂತ್ರಿಯವರ ತಾಂತ್ರಿಕ ಸಲಹೆಗಾರರಾಗಿ ನಿವೃತ್ತ ಕಾರ್ಯದರ್ಶಿ ಡಾ. ಕೆ. ಜೈಪ್ರಕಾಶ್ ನೇಮಕಜೆಎನ್‌ಯು ಪ್ರೊಫೆಸರ್ ಹಾಗೂ ಕಾಂಗ್ರೆಸ್ ಸಂಸದರಿಂದ ಲೈಂಗಿಕ ಕಿರುಕುಳ ಆರೋಪ, ಸೇವೆಯಿಂದ ವಜಾಆರ್‌ಬಿಐ ಬಿಗ್ ಶಾಕ್: ರೆಪೋ ದರ ಏರಿಕೆಯಿಂದ ಸಾಲಗಾರರಿಗೆ ಹೆಚ್ಚಳವಾದ ಇಎಂಐ ಬರೆ!ಎಸ್‌ಐಆರ್ ರದ್ದುಪಡಿಸುವಂತೆ ಜನತಾ ನ್ಯಾಯಾಲಯ ಸಮಾವೇಶ: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ10 ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಸುಪಾರಿ - ಶಾಸಕ ಗಣಿಗ ರವಿ ಸ್ಫೋಟಕ ಪೆನ್‌ಡ್ರೈವ್ ಬಾಂಬ್!ಸಚಿವರಿಗೆ ಬಲೆ ಬೀಳಿಸಲು ಯತ್ನ: ಸಿಎಂ ಎಚ್ಚರಿಕೆ ನೀಡಿದ್ದಾರೆ ಎಂದ ಸತೀಶ್ ಜಾರಕಿಹೊಳಿಕೇಂದ್ರದೊಂದಿಗೆ ಜಿಎಸ್‌ಟಿ ಸಭೆ: ರಾಜ್ಯದ ಬಾಕಿ ಹಣದ ಕುರಿತು 'ಸಿಹಿ ಸುದ್ದಿ' ನೀಡಿದ ಸಿಎಂ ಡಿ.ಕೆ ಶಿವಕುಮಾರ್ ಸುಳಿವು!ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಹಿಂಡಲಗಾ ಜೈಲಿಗೆ ಸ್ಥಳಾಂತರಪ್ರತಿಭಟನೆ ಹೆಸರಲ್ಲಿ ಎಲ್ಲವನ್ನೂ ಬಂದ್ ಮಾಡಲು ಆಗದು: ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ದಾವಣಗೆರೆಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಪಟ್ಟು: ಮಧ್ಯಕರ್ನಾಟಕದಲ್ಲಿ ತೀವ್ರಗೊಂಡ ಹೋರಾಟ