Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

'ನಥಿಂಗ್ ನೈಸ್' ಅಭಿಯಾನಕ್ಕೆ ಚಾಲನೆ: ಸರ್ಕಾರವೇ ರಸ್ತೆ ಸ್ವಾಧೀನಪಡಿಸಿಕೊಳ್ಳಲಿ - ನಿಖಿಲ್ ಕುಮಾರಸ್ವಾಮಿ ಆಗ್ರಹ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈಸ್ ಯೋಜನೆಯ ಹೆಸರಿನಲ್ಲಿ ಕಳೆದ
26 ವರ್ಷಗಳಿಂದ ಬೃಹತ್ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ, ಯೋಜನೆಯ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಜೆ.ಪಿ ಭವನದಲ್ಲಿ 'ನಥಿಂಗ್ ನೈಸ್' ಎಂಬ ಜನಪರ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ ವೆಬ್‌ಸೈಟ್ ಬಿಡುಗಡೆಗೊಳಿಸಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನೈಸ್ ಸಂಸ್ಥೆಯು ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿಗೊಟ್ಟು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದೆ. ಯೋಜನೆಯ ಫ್ರೇಮ್‌ವರ್ಕ್ ಒಪ್ಪಂದದಂತೆ 5 ಟೌನ್‌ಶಿಪ್ ಹಾಗೂ 111 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಿಸಬೇಕಿತ್ತು. ಆದರೆ, ಡಾಂಬರು ರಸ್ತೆ ನಿರ್ಮಿಸಿ ಉಲ್ಲಂಘನೆ ಎಸಗಲಾಗಿದೆ. ಅಲ್ಲದೆ ಪೆರಿಫೆರಲ್ ರಸ್ತೆಗೆ 2,193 ಎಕರೆ ಅಗತ್ಯವಿದ್ದರೂ, 554 ಎಕರೆ ಹೆಚ್ಚುವರಿ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಿಖಿಲ್ ಆರೋಪಿಸಿದರು.

Advertisement

ಪ್ರಮುಖ ಆಗ್ರಹಗಳು ಹಾಗೂ ಆರೋಪಗಳು:
ಟೋಲ್ ಸಂಗ್ರಹ ತಕ್ಷಣ ಬಂದ್ ಆಗಲಿ: "ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರಿಂದ ಟೋಲ್ ವಸೂಲಿ ಮಾಡುತ್ತಿರುವುದು ಎಷ್ಟು ಸರಿ
? ತಕ್ಷಣವೇ ನೈಸ್ ರಸ್ತೆಯ ಟೋಲ್ ಸಂಗ್ರಹ ರದ್ದುಗೊಳಿಸಬೇಕು" ಎಂದು ಒತ್ತಾಯಿಸಿದರು.

ರೈತರಿಗೆ ಅನ್ಯಾಯ: ಭೂಮಿ ಕಳೆದುಕೊಂಡ ಶೇ.65-70 ರಷ್ಟು ರೈತರಿಗೆ 23 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ. ಮಾಜಿ ಸಚಿವ ಟಿ.ಬಿ ಜಯಚಂದ್ರ ಜಂಟಿ ಸದನ ಸಮಿತಿ ವರದಿ ಹಾಗೂ ಹೈಕೋರ್ಟ್ ಆದೇಶದಂತೆ ಸರ್ಕಾರ ಮಧ್ಯಪ್ರವೇಶಿಸಿ, ರೈತರಿಗೆ ಜಮೀನು ವಾಪಸ್ ನೀಡಬೇಕು ಅಥವಾ ಬಡ್ಡಿ ಸಮೇತ ಸೂಕ್ತ ಪರಿಹಾರ ಒದಗಿಸಬೇಕು ಎಂದು ನಿಖಿಲ್ ಆಗ್ರಹಿಸಿದರು.

ವೆಬ್‌ಸೈಟ್ ಬಿಡುಗಡೆ: ನೈಸ್ ಯೋಜನೆಯ ಅಕ್ರಮಗಳ ಸಂಪೂರ್ಣ ದಾಖಲೆಗಳು ಹಾಗೂ ಹೈಕೋರ್ಟ್ ಆದೇಶದ ಪ್ರತಿಗಳನ್ನು ಒಳಗೊಂಡ nothingnice.net ವೆಬ್‌ಸೈಟ್ ಅನ್ನು ಈ ವೇಳೆ ಲೋಕಾರ್ಪಣೆಗೊಳಿಸಲಾಯಿತು.

ಸರ್ಕಾರಕ್ಕೆ ಆಗ್ರಹ: ಸರ್ಕಾರ ತಕ್ಷಣವೇ ನೈಸ್ ಯೋಜನೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಇಲ್ಲವಾದರೆ ಜೆಡಿಎಸ್ ಶೀಘ್ರದಲ್ಲೇ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಇದೇ ವೇಳೆ ಸ್ಪಷ್ಟನೆ ನೀಡಿದ ನಿಖಿಲ್, "ನೈಸ್ ಯೋಜನೆಯನ್ನು ತಂದವರು ಹೆಚ್.ಡಿ. ದೇವೇಗೌಡರಾದರೂ, ಫ್ರೇಮ್‌ವರ್ಕ್ ಒಪ್ಪಂದ ಆಗಿದ್ದು ಜೆ.ಎಚ್. ಪಟೇಲ್ ಅವರ ಅವಧಿಯಲ್ಲಿ" ಎಂದು ಹೇಳಿದರು.

ಪ್ರಧಾನಿ ಮೋದಿ ಭೇಟಿಯ ಕುರಿತು ಮಾತನಾಡಿ, "ಅದು ಸೌಹಾರ್ದಯುತ ಭೇಟಿಯಾಗಿದ್ದು, ಎನ್ ಡಿಎ ಒಗ್ಗಟ್ಟು ಹಾಗೂ 2028ರ ಚುನಾವಣೆ ಕುರಿತು ಚರ್ಚಿಸಲಾಗಿದೆ" ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಹೆಚ್.ಎಂ. ರಮೇಶ್ ಗೌಡ, ತೂಪಲ್ಲಿ ಚೌಡರೆಡ್ಡಿ, ವಕ್ತಾರರಾದ ಗಂಗಾಧರ್ ಮೂರ್ತಿ ಹಾಗೂ ದೇವರಾಜು ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೃತ್ಯ ಭಾರತೀಯ ಸಂಸ್ಕೃತಿಯ ಜೀವಂತ ಅಭಿವ್ಯಕ್ತಿ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿನೇಪಾಳ ಪ್ರವಾಹ: ನೆರವು ನಿರಾಕರಿಸಿದ ನೇಪಾಳ; ಭಾರತದಿಂದ ಬೃಹತ್ ಮಾನವೀಯ ಸಹಾಯ'ನಥಿಂಗ್ ನೈಸ್' ಅಭಿಯಾನಕ್ಕೆ ಚಾಲನೆ: ಸರ್ಕಾರವೇ ರಸ್ತೆ ಸ್ವಾಧೀನಪಡಿಸಿಕೊಳ್ಳಲಿ - ನಿಖಿಲ್ ಕುಮಾರಸ್ವಾಮಿ ಆಗ್ರಹಎಇಇ ನೇಮಕಾತಿ ಹಗರಣ: ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ, ದಾಖಲೆ ಬಿಡುಗಡೆಮಧ್ಯರಾತ್ರಿ ಪೊಲೀಸರ ಫೈರಿಂಗ್: ರೌಡಿಶೀಟರ್ ಜಿಶಾನ್ ಕಾಲಿಗೆ ಗುಂಡುಮುಡಾ ಹಗರಣ: 50:50 ಅನುಪಾತದ 1,100ಕ್ಕೂ ಹೆಚ್ಚಿನ ಸೈಟುಗಳು ರದ್ದು –ಸಚಿವ ಯತೀಂದ್ರನೇಪಾಳದ ದಿಢೀರ್ ಪ್ರವಾಹ: ಬಲಿ ಸಂಖ್ಯೆ 538ಕ್ಕೆ ಏರಿಕೆ, 320ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ನಾಪತ್ತೆಭದ್ರತೆಗೆ ಮಹತ್ವದ ಹೆಜ್ಜೆ: ಪೋಲಿಸರಿಗೆ ಎನ್‌ಎಸ್‌ಜಿ ತರಬೇತಿರೈಲ್ವೇ ಚತುಷ್ಪಥ ಯೋಜನೆ: ಕರ್ನಾಟಕಕ್ಕೆ ಕೇಂದ್ರದ ಮಲತಾಯಿ ಧೋರಣೆ - ಸಚಿವ ಎಂ.ಬಿ. ಪಾಟೀಲ್ ಆಕ್ರೋಶಪೊಲೀಸರಿಗೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್; ಕಾಲಿಗೆ ಗುಂಡು