Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Bangalore Rural

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 8.04 ಲಕ್ಷ ಮತದಾರರು: ಡಿಸಿ ಡಾ. ಕೆ.ಎನ್. ಅನುರಾಧ ಸ್ಪಷ್ಟನೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 8,04,534 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ತಿಳಿಸಿದ್ದಾರೆ. ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರನ್ನು ಕೈಬಿಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಿಮ ಪಟ್ಟಿಯ ವಿವರಗಳನ್ನು ಹಂಚಿಕೊಂಡರು.

ಮತದಾರರ ವಿವರ: 3,95,473 ಪುರುಷರು, 4,09,001 ಮಹಿಳೆಯರು ಹಾಗೂ 60 ಇತರೆ ಮತದಾರರಿದ್ದಾರೆ.

ಹೆಚ್ಚಿದ ಮಹಿಳಾ ಲಿಂಗಾನುಪಾತ: ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದು, ಲಿಂಗಾನುಪಾತ 1,034 ರಷ್ಟಿದೆ.

ಕ್ಷೇತ್ರವಾರು ಮತದಾರರ ಸಂಖ್ಯೆ: ಹೊಸಕೋಟೆ: 2,20,191, ದೇವನಹಳ್ಳಿ: 1,96,977, ದೊಡ್ಡಬಳ್ಳಾಪುರ: 1,94,330, ನೆಲಮಂಗಲ: 1,93,036.

3,814 ಹೆಸರುಗಳ ವಿಲೇವಾರಿ (ಡಿಲಿಟ್): ಮರಣ ಹೊಂದಿದವರು, ಶಾಶ್ವತವಾಗಿ ವಲಸೆ ಹೋದವರು ಹಾಗೂ ಇತರೆಡೆ ಹೆಸರು ಹೊಂದಿದ್ದ ಒಟ್ಟು 3,814 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ವಿಶೇಷ ಮತದಾರರ ವಿವರ:
18-19 ವರ್ಷದ ಯುವ ಮತದಾರರು: 14,568
85
ವರ್ಷಕ್ಕೂ ಮೇಲ್ಪಟ್ಟ ಹಿರಿಯರು: 8,604
ವಿಶೇಷಚೇತನ ಮತದಾರರು: 12,151
ಸೇವಾ ಮತದಾರರು: 108 | ಎನ್‌ಆರ್‌ಐ ಮತದಾರರು: 06

ಪರಿಶೀಲನೆ ಮತ್ತು ಹೊಸ ಸೇರ್ಪಡೆಗೆ ಅವಕಾಶ:
ಸಾರ್ವಜನಿಕರು ಮತ್ತು ಮತದಾರರು ತಮ್ಮ ಹೆಸರು ಪರಿಶೀಲಿಸಲು ಚುನಾವಣಾ ಆಯೋಗದ ವೆಬ್‌ಸೈಟ್ (voters.eci.gov.in) ಅಥವಾ ಜಿಲ್ಲಾ ವೆಬ್‌ಸೈಟ್ (bangalorerural.nic.in) ಗೆ ಭೇಟಿ ನೀಡಬಹುದು. ಒಂದು ವೇಳೆ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗಿದ್ದರೆ, ನಮೂನೆ-6 (Form-6) ಸಲ್ಲಿಸಿ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ವಾಸಂತಿ ಅಮರ್, ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೊಡ್ಡ ತಿಮ್ಮನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆಸಾಮಾಜಿಕ ಅನಿಷ್ಟ ತಡೆಗಟ್ಟಲು ಕಾನೂನಿನ ಅರಿವು ಅತ್ಯಗತ್ಯ:ದಾಸರಿ ಕ್ರಾಂತಿ ಕಿರಣ್ಹಿರಿಯ ರಂಗಭೂಮಿ ಕಲಾವಿದ ಜಿ.ಡಿ. ತಿಮ್ಮಯ್ಯ ಅವರ ಸಾಧನೆ ಮತ್ತು ಪರಿಚಯಹಿರಿಯ ಪತ್ರಕರ್ತ ಚಿತ್ರದುರ್ಗದ  ಉಮಾಪತಿ ಅವರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಗೌರವಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುಖಭಂಗ: ಬೆಂಬಲವಿದ್ದರೂ ಎಡವಿದ್ದೆಲ್ಲಿ?ರಾಹುಲ್ ಗಾಂಧಿ ನೇತೃತ್ವದ ಒಕ್ಕೂಟದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನ: ಶೋಭಾ ಕರಂದ್ಲಾಜೆಬದರಿನಾಥದಿಂದ ಹೊರಟ ಹೆಲಿಕಾಪ್ಟರ್ ಜೋಶಿಮಠ ಬಳಿ ಪತನ: ಆರು ಮಂದಿ ಪ್ರಯಾಣಿಕರ ಸಾವುನ್ಯಾಯಾಂಗದ ವಿರುದ್ಧ ಹೇಳಿಕೆ: CJP ನಾಯಕ ಸೌರವ್ ದಾಸ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ಯುವಕನಿಗೆ ಚಾಕು ತೋರಿಸಿ 20 ಲಕ್ಷ ಮೌಲ್ಯದ ಚಿನ್ನ ದೋಚಿದ ಡೇಟಿಂಗ್ ಬಂದಿದ್ದ ಯುವತಿಮುಖ್ಯ ಚುನಾವಣಾ ಆಯುಕ್ತರ ವಿರುದ್ಧ 'ಸಾರ್ವಜನಿಕ ದೋಷಾರೋಪಣೆ' ಮುಂದೂಡಿದ 'ಇಂಡಿಯಾ' ಒಕ್ಕೂಟ