ಚಂದ್ರವಳ್ಳಿ ನ್ಯೂಸ್, ಮೈಸೂರು: . ಸ್ವರವಾಗಿ ಮೂಡಿದ ಸುವರ್ಣ ಗೀತೆ
ಸುರಲೋಕ ತಲುಪಿದ ಅಮೃತ ಗೀತೆ
ಮನಗಳ ಮೆಲುಕು ಮೂಡಿಸಿದ ಗೀತೆ
ಜನಮನ ಗೆದ್ದ ನಿನ್ನದೇ ಗೀತೆ.
ನಿಮ್ಮ ಕಂಠದ ನಾದವು ನಿತ್ಯ ಬೆಳಕು
ನಿಮ್ಮ ಗಾನದ ಮಧುರಿಮೆಯೇ ಬಾಳ ಬೆಳಕು
ಕಾಲ ಕಳೆದರೂ ಕಳೆಯದ ಬೆಳಕು
ಕನ್ನಡದ ಹೆಮ್ಮೆಯ ಅಮರ ಬೆಳಕು.
ನೀವು ಹಾಡಿದ ರಾಗದಲಿ ಭಾವ ಅರಳಿತು
ನೀವು ನುಡಿದ ಪದದಲಿ ಪ್ರೀತಿ ಹರಡಿತು
ನೀವು ನೀಡಿದ ಗಾನದಲಿ ಲೋಕ ಬೆಳೆದಿತು
ನಿಮ್ಮ ನೆನಪಿನಿಂದ ಹೃದಯ ತೇವವಾಯಿತು.
ಮೌನವಾಯಿತು ಇಂದು ಮಧುರ ಕಂಠ
ಮುಗಿಲು ಮುಟ್ಟಿತು ನಿನ್ನ ಕೀರ್ತಿಯ ಪಂಥ
ಕಣ್ಣೀರಾಯಿತು ಅಭಿಮಾನಿಗಳ ಅಂತರಂಗ
ಅಳಿಯದು ಎಂದೆಂದಿಗೂ ನಿನ್ನ ಸಂಗ.
ಸ್ವರ ನಿಂತಿಲ್ಲ ನೆನಪು ನಿಂತಿಲ್ಲ
ಸಂಗೀತದ ಪಯಣವು ಎಂದೂ ಮುಗಿದಿಲ್ಲ
ನಿಮ್ಮ ಅಮೃತಗಾನ ಮರೆಯಾಗಲಿಲ್ಲ
ಕಾಲದ ಪುಟಗಳಲಿ ಅಳಿಯಲಿಲ್ಲ.
ನಮನಗಳ ಅರ್ಪಣೆ ನಮ್ಮ ಹೃದಯದಿಂದ
ಕೃತಜ್ಞತೆಗಳ ಹರಿವು ಪ್ರೀತಿಯ ನದಿಯಿಂದ
ಸ್ವರಸಾಮ್ರಾಜ್ಞಿ ನೀ ಶಾಶ್ವತ ನೆನಪಿನಿಂದ
ಅಮರಳಾಗಿರುವೆ ಕೋಟಿ ಜನರ ಮನದಿಂದ. ಕವಿತೆ: ಕೆ. ಎಸ್ ಪ್ರಮೋದ್ ಕುಮಾರ್,
(ಕಾಶಿಪಿಕೆ)
ಶಿವಶಕ್ತಿ ನಿಲಯ ಜೆಎಂಸಿ ಲೇಔಟ್.
ಬೋಗಾದಿ ಗದ್ದಿಗೆ ರಸ್ತೆ ,ಮೈಸೂರು.



