Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಕಾಶವಾಣಿ ಕೇಂದ್ರದ ಹಿರಿಯ ತಾಂತ್ರಿಕ ತಜ್ಞ ಎನ್.ಪಿ. ಶಿವಮೂರ್ತಿ ಅವರಿಗೆ ಬಿಳ್ಕೊಡುಗೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಸುದೀರ್ಘ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಹಿರಿಯ ತಾಂತ್ರಿಕ ತಜ್ಞ ಎನ್.ಪಿ. ಶಿವಮೂರ್ತಿ ಅವರಿಗೆ ಆಕಾಶವಾಣಿ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ಬಿಳ್ಕೊಡುಗೆ ನೀಡಲಾಯಿತು.

ಈ ವೇಳೆ ಮಾತನಾಡಿದ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಹಣಾಧಿಕಾರಿ ಶಿವಪ್ರಕಾಶ್, ಒಂದು ಸಂಸ್ಥೆಯ ಯಶಸ್ಸಿನ ಹಿಂದೆ ತಾಂತ್ರಿಕ ವಿಭಾಗದ ಪಾತ್ರ ದೊಡ್ಡದಾಗಿರುತ್ತದೆ. ಎನ್.ಪಿ. ಶಿವಮೂರ್ತಿ ಅವರು ತಮ್ಮ ಸೇವಾವಧಿಯಲ್ಲಿ ಅತ್ಯಂತ ನಿಷ್ಠೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಾರೆ. ಕಾರ್ಯಕ್ರಮಗಳು ಯಾವುದೇ ಅಡಚಣೆಯಿಲ್ಲದೆ ಕೇಳುಗರ ತಲುಪುವಲ್ಲಿ ಅವರ ತಾಂತ್ರಿಕ ನೈಪುಣ್ಯತೆ ಮತ್ತು ಶ್ರಮ ಅಪಾರವಾದದು ಎಂದು ಶ್ಘಾಘಿಸಿದರು.

ಕೆ.ಎಸ್.ಎಫ್.ಸಿ ನಿವೃತ್ತ ಸಹಾಯಕ ನಿರ್ದೇಶಕ ಆರ್. ಬಾಬು ಮಾತನಾಡಿ, ಶಿವಮೂರ್ತಿ ಅವರ ಸುದೀರ್ಘ ಹಾಗೂ ಕರ್ತವ್ಯನಿಷ್ಠ ಸೇವೆ ಶ್ಲಾಘಿಸಿ, ತಾಂತ್ರಿಕ ವಿಭಾಗದಲ್ಲಿ ಎದುರಾಗುತ್ತಿದ್ದ ಸವಾಲುಗಳನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸುತ್ತಾ, ಸಂಸ್ಥೆಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಅಪಾರ ಎಂದು ನೆನೆದರು.

ಸಾಹಿತಿ ಹೆಚ್. ಆನಂದ್ ಕುಮಾರ್ ಮಾತನಾಡಿ, ವಯೋನಿವೃತ್ತಿ ಎಂಬುದು ಪ್ರತಿಯೊಬ್ಬ ಸರ್ಕಾರಿ ನೌಕರನ ಜೀವನದಲ್ಲೂ ಎದುರಾಗುವ ಅನಿವಾರ್ಯ ಘಟ್ಟ. ಇದೊಂದು ತೆರೆದಿಟ್ಟ ಪುಸ್ತಕವಿದ್ದಂತೆ. ನೌಕರಿಯ ನಂತರದ ಜೀವನವು ಮತ್ತೊಂದು ಹೊಸ ಬಾಳಿಗೆ ಸಾಕ್ಷಿ ಎಂದರು.

ಮೂಲತಃ ಚಿತ್ರದುರ್ಗದ ಕುರುಬರಹಟ್ಟಿಯವರಾದ ಶಿವಮೂರ್ತಿ ಅವರು ಐಟಿಐ ಮುಗಿಸಿ, ಮೊದಲು ಮಿಲಿಟರಿ ಇಂಜಿನಿಯರಿಂಗ್ ಸರ್ವಿಸ್‍ನಲ್ಲಿ ಕಾರ್ಯನಿರ್ವಹಿಸಿದರು. ನಂತರ 1989ರಲ್ಲಿ ದೂರದರ್ಶನ ಕೇಂದ್ರ ಸೇರಿದರು. ಅಲ್ಲಿಂದ 2010ರಲ್ಲಿ ಬೆಂಗಳೂರು ಆಕಾಶವಾಣಿಗೆ ಹಾಗೂ 2023ರಲ್ಲಿ ಚಿತ್ರದುರ್ಗ ಆಕಾಶವಾಣಿ ಕೇಂದ್ರಕ್ಕೆ ವರ್ಗಾವಣೆಗೊಂಡು, ಇದೀಗ ವಯೋನಿವೃತ್ತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರದುರ್ಗ ಆಕಾಶವಾಣಿ ಕೇಂದ್ರದ ನಿವೃತ್ತ  ಅಸಿಸ್ಟೆಂಟ್ ಡೈರೆಕ್ಟ ಇಂಜಿನಿಯರ್ ಕೆ.ಕೆ.ಮಣಿ,  ಭದ್ರಾವತಿ ಆಕಾಶವಾಣಿ ಕೇಂದ್ರದ ಅಸಿಸ್ಟೆಂಟ್ ಡೈರೆಕ್ಟ್ ಇಂಜಿನಿಯರ್ ಕೃಷ್ಣಪ್ಪ ಸೇರಿದಂತೆ ಮತ್ತಿತರರು ಇದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಂಧ್ರ ಗಡಿಭಾಗದ ಹೊಸಕೆರೆ ಪಾಳ್ಯದಲ್ಲಿ ಹನಿ ನೀರಿಗೂ ಹಾಹಾಕಾರ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಾನುವಾರು, ಗ್ರಾಮಸ್ಥರು ಕಂಗಾಲು!ಮಾಧ್ಯಮ ಅಕಾಡೆಮಿ ವತಿಯಿಂದ ಜುಲೈ 1 ರಂದು ಪತ್ರಿಕಾ ದಿನಾಚರಣೆ ಹಾಗೂ ವಿಚಾರ ಸಂಕಿರಣವಿದ್ಯಾರ್ಥಿ ಬಸ್‍ಪಾಸ್ ಶುಲ್ಕ ಮರು ಪಾವತಿ: ಅರ್ಜಿ ಆಹ್ವಾನಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ಉಚಿತ ಹೃದಯ ತಪಾಸಣೆವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲಕ್ಕೆ ಅರ್ಜಿ ಆಹ್ವಾನಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ಜುಲೈ 31 ಕೊನೆಯ ದಿನಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಕಾಂಗ್ರೆಸ್ ಸರ್ಕಾರಆಕಾಶವಾಣಿ ಕೇಂದ್ರದ ಹಿರಿಯ ತಾಂತ್ರಿಕ ತಜ್ಞ ಎನ್.ಪಿ. ಶಿವಮೂರ್ತಿ ಅವರಿಗೆ ಬಿಳ್ಕೊಡುಗೆಬ್ಯಾಟರಿ ಸ್ಪಾರ್ಕ್ ನಿಂದ ಹೊತ್ತಿ ಉರಿದ ಟಾಟಾ ಸುಮೋಕೆಂಪೇಗೌಡ ಪುತ್ತಳಿ ನಿರ್ಮಾಣ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ- ಪ್ರೇಮ್ ಕುಮಾರ್