ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೊಕಿನ ತೂಬಗೆರೆ ಹೋಬಳಿ ಶಿರವಾರ ಗ್ರಾಮದಲ್ಲಿ ಕೃಷಿ ವ್ಯವಹಾರ ನಿರ್ವಹಣೆ ಸಂಸ್ಥೆ ( ಜಿ ಕೆ ವಿ ಕೆ) ಬೆಂಗಳೂರು ವತಿಯಿಂದ ಗ್ರಾಮೀಣ ಕೃಷಿ ಕೆಲಸದ ಅನುಭವ ಕಾರ್ಯಕ್ರಮದ ಅಂಗವಾಗಿ ಶಿರವಾರ ಗ್ರಾಮದಲ್ಲಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ( ಕಿಸಾನ್ ಕ್ರೆಡಿಟ್ ಕಾರ್ಡ್) ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 07ರಂದು ಶಿರವಾರ ಗ್ರಾಮದ ಡೈರಿ ಸಮೀಪದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ 4ನೇ ವರ್ಷದ ಐ ಎ ಬಿ ಎಂ ವಿದ್ಯಾರ್ಥಿ ಕು. ಲಕ್ಕೇಶ್ ಅವರು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹಸಿ ಕುರಿತು ಸಮಗ್ರ ಮಾಹಿತಿಯನ್ನು ಸರಳವಾಗಿ ವಿವರಿಸಿದರು.ಕೆಸಿಸಿ ಎಂದರೇನು, ಯಾರು ಕೆ ಸಿ ಸಿ ಪಡೆಯಬಹುದು, ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಹೇಗೆ ಅರ್ಜಿ ಸಲ್ಲಿಸಬೇಕು, ಸಾಲದ ಬಡ್ಡಿದರ, ಅರ್ಜಿ ಸಲ್ಲಿಸುವ ವಿಧಾನ, ರೈತರಿಗೆ ದೊರೆಯುವ ಸಾಲದ ಮೊತ್ತ, ಡೆಬಿಟ್ ಕಾರ್ಡ್ ಸೌಲಭ್ಯ ಹಾಗೂ ಸಾಲ ಮರುಪಾವತಿ ಅವಧಿ ಕುರಿತು ವಿವರವಾಗಿ ಮಾಹಿತಿ ನೀಡಲಾಯಿತು.
ಕೆ ಸಿ ಸಿ. ಮೂಲಕ ರೈತರಿಗೆ ದೊರೆಯುವ ವಿವಿಧ ಪ್ರಯೋಜನಗಳು, ಸಾಲವನ್ನು ಯಾವ ಸಂದರ್ಭದಲ್ಲಿ ಬಳಸಬಹುದು ಮತ್ತು ಯಾವ ಯಾವ ಬ್ಯಾಂಕ್‌ಗಳಲ್ಲಿ ಸೌಲಭ್ಯ ಲಭ್ಯವಿದೆ ಎಂಬುದರ ಬಗ್ಗೆಯೂ ತಿಳಿಸಲಾಯಿತು. ರೈತರು ಕೇಳಿದ ವಿವಿಧ ಪ್ರಶ್ನೆಗಳಿಗೆ ಲಕ್ಕೇಶ್ ಅವರು ಸಮರ್ಪಕವಾಗಿ ಉತ್ತರ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು 48 ರೈತರು ಭಾಗವಹಿಸಿ ಕೆಸಿಸಿ ಕುರಿತು ಮಾಹಿತಿ ಪಡೆದುಕೊಂಡರು. ರೈತರು ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ನೀಡುವುದರ ಜೊತೆಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಸಹಕಾರ ನೀಡಿದರು.
ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅಗತ್ಯವಿರುವ ಬ್ಯಾಂಕಿಂಗ್ ಮತ್ತು ಸಾಲ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ರೈತರಿಗೆ ಬಹಳ ಉಪಯುಕ್ತವಾಗಿವೆ ಎಂದು ತಿಳಿಸಲಾಯಿತು.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ ಜಿಕೆವಿಕೆ ವಿಶ್ವವಿದ್ಯಾಲಯ, ಗ್ರಾಮೀಣ ಕೃಷಿ ಕೆಲಸದ ಅನುಭವ ಪ್ರಾಧ್ಯಾಪಕರಾದ ಡಾll ಸವಿತಾ ಹಾಗೂ ಶಿರವಾರ ಗ್ರಾಮದ ಎಲ್ಲಾ ರೈತರಿಗೆ ಐ ಎ ಬಿ ಎಂ & ಜಿಕೆವಿಕೆ ವಿದ್ಯಾರ್ಥಿಗಳ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಯಿತು.
ಈ ಕಾರ್ಯ ಕ್ರಮದಲ್ಲಿ ಜಿಕೆವಿಕೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಶಿರವಾರ ಗ್ರಾಮದ ರೈತರು ಹಾಜರಿದ್ದರು.




