ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ವಿದ್ಯಾಸಂಸ್ಥೆಯಲ್ಲಿ ಕಾಲೇಜು ವಾರ್ಷಿಕೋತ್ಸವ ಕನ್ನಡ ರಾಜ್ಯೋತ್ಸವ ಹಾಗು ದಾಸಶ್ರೇಷ್ಟ ಕನಕದಾಸರ 539 ಜಯಂತೋತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ಬಾಗವಹಿಸಿ ದ್ವಜಾರೋಹಣ ನೆರವೇರಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಪ್ರದಾನ ಸಿವಿಲ್ ನ್ಯಾಯಾದೀಶ ಸದಸ್ಯ ಕಾರ್ಯದರ್ಶಿ ತಾಲ್ಲೂಕು ಕಾನೂನು ಸೇವಾಸಮಿತಿಯ ಗೌರವಾನ್ವಿತ ದಾಸರಿ ಕ್ರಾಂತಿ ಕಿರಣ್ ಸಾರ್ ರವರು ಯುವ ಜನಾಂಗದವರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ತಿಳುವಳಿಕೆ ಬಹಳ ಮುಖ್ಯ ಇಂದು ಕಾನೂನಿನ ಅರಿವಿನ ಕೊರತೆಯಿಂದಾಗಿ ಅನೇಕ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ಕಾನೂನಿನ ಬಗ್ಗೆ ತಿಳಿದುಕೊಂಡರೆ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಯೂರಲು ಸಾದ್ಯವಾಗುತ್ತದೆ. ಅದುದರಿಂದ ಪ್ರತಿಯೊಬ್ಬ ಪ್ರಜೆಯು ಕಾನೂನು ಸಂವಿಧಾನದ ಬಗ್ಗೆ ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಪೋಷಕರಿಗೆ ಕಿವಿ ಮಾತು ಹೇಳಿದರು.
ಅದ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಟಿಎಪಿಎಂಸಿಎಸ್ ನಿರ್ದೇಶಕ ವಿಶ್ವಾಸ್ ಹನಮಂತೇಗೌಡ ಇಂದು ನಮ್ಮ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಕನಕದಾಸರ ಜಯಂತೋತ್ಸವ ಆಚರಣೆ ಮಾಡುತ್ತಿರುವುದು ತುಂಬಾ ಸಂತಸದ ವಿಷಯ ಕನಕದಾಸರು ಹೇಳಿದಂತೆ "ಕುಲಕುಲ ಎಂದು ಒಡೆದಾಡದಿರಿ ನಿಮ್ಮ ಕುಲದ ನೆಲೆಯನ್ನು ಏನಾದರು ಬಲ್ಲಿರಾ " ಎಂದು ನಾವೆಲ್ಲರೂ ಒಂದೆ ಕುಲ ಒಂದೆ ಜಾತಿ ಎಂದು ಎಲ್ಲರನ್ನು ಸಮಾನವಾಗಿ ಕಾಣಬೇಕು.ದೇಶದಲ್ಲಿ ಜಾತಿ ವ್ಯವಸ್ಥೆ ವರ್ಣ ವ್ಯವಸ್ಥೆ ದೂರವಾದರೆ ಮಾತ್ರ ದೇಶ ಉದ್ದಾರವಾಗಲು ಸಾದ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅದ್ಯಕ್ಷರಾದ ಯಶೋದಮ್ಮ ಹನುಮಂತೇಗೌಡ ಮಾತನಾಡಿದರು ಬಿಇಡಿ ಪ್ರಾಂಶುಪಾಲರಾದ ಪ್ರೋ ಜಿ ಕೃಷ್ಣಮೂರ್ತಿ, ಪದವಿ ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಎಂ. ಸಿ. ಮಂಜುನಾಥ್, ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಎಂ.ಅರುಣ್ ಕುಮಾರ್, ಲಾವಣ್ಯ ವಿದ್ಯಾಸಂಸ್ಥೆಯ ನಿರ್ದೇಶಕರಾದ ಶ್ರೀ ಮತಿ ಶೃತಿ ಮಂಜುನಾಥ್,
ನಟರಾಜ್, ಶ್ರಿಮತಿ ಮೇಘನಾ,ಜೀವಿತ ಸೇರಿದಂತೆ ಎಲ್ಲಾ ವಿಬಾಗಗಳ ಉಪನ್ಯಾಸಕರು ಶಿಕ್ಷಕರು ಬಾಗವಹಿಸಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.




