Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಯಲು ಸೀಮೆಗೆ ಭಾಗ್ಯದೇವತೆಯಾಗಿ ಬಂದ ಭದ್ರೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆ ಕರ್ನಾಟಕದ ಬಯಲುಸೀಮೆಯ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದ್ದು ಮಳೆಯ ಅನಿಶ್ಚಿತತೆ, ಪದೇಪದೇ ಎದುರಾಗುವ ಬರಗಾಲ, ಅಂತರ್ಜಲದ ಕುಸಿತ ಇವೆಲ್ಲವೂ ಜಿಲ್ಲೆಯ ರೈತರ ಬದುಕಿನ ಮೇಲೆ ಪರಿಣಾಮ ಬೀರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗದ ಜನರ ಪಾಲಿಗೆ ಕೇವಲ ಒಂದು ನೀರಾವರಿ ಯೋಜನೆಯಲ್ಲ ಅದು ಹಲವು ವರ್ಷಗಳಿಂದ ನಿರೀಕ್ಷಿಸುತ್ತಿರುವ ಕೃಷಿಯ ಸ್ಥಿರತೆ ಮತ್ತು ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನದ ಕನಸಾಗಿದೆ.

ಚಿತ್ರದುರ್ಗ ಜಿಲ್ಲೆಯ ಬಹುಭಾಗ ಬಯಲು ಸೀಮೆಯಿಂದ ಕೂಡಿದ್ದು ಇಲ್ಲಿನ ಕೃಷಿಯು ಬಹುತೇಕ ಮಳೆ ಮತ್ತು ಅಂತರ್ಜಲದ ಮೇಲೆ ಅವಲಂಬಿತವಾಗಿದೆ. ಮಳೆ ಪ್ರಮಾಣ ಕಡಿಮೆಯಾದಾಗ ಬಿತ್ತನೆ ವಿಫಲವಾಗುತ್ತದೆ ಮಳೆ ಸಮಯಕ್ಕೆ ಬಾರದಿದ್ದರೆ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುತ್ತದೆ. ನಿರಂತರವಾಗಿ ಕೊಳವೆಬಾವಿಗಳ ಮೇಲೆ ಅವಲಂಬಿತವಾಗುವುದರಿಂದ ಅಂತರ್ಜಲದ ಮೇಲೆಯೂ ಒತ್ತಡ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಜಿಲ್ಲೆಯ ನೀರಿನ ಸಮಸ್ಯೆಗೆ ಬಹುದೊಡ್ಡ ಪರಿಹಾರ ಸಿಗುವುದರ ಜೊತೆಗೆ ಕೃಷಿ ವ್ಯವಸ್ಥೆಯಲ್ಲೇ ದೊಡ್ಡ ಬದಲಾವಣೆ ಕಾಣಬಹುದಾಗಿದೆ.

Advertisement

ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯಲ್ಲಿ ಗಮನ ಸೆಳೆಯುತ್ತಿರುವ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಚಿತ್ರದುರ್ಗ ನಗರದ ಸಮೀಪ ಇರುವ ಗೋನೂರು ಎಂಬ ಹಳ್ಳಿಯಲ್ಲಿ ಕರ್ನಾಟಕದ ಅತ್ಯಂತ ಎತ್ತರದ ನೀರಾವರಿ ಅಕ್ವೆಡಕ್ಟ್‌ನಿರ್ಮಾಣವಾಗಿರುವುದು. ಎತ್ತರ ಸುಮಾರು 120 ಅಡಿಗಳು ಹಾಗೂ ಉದ್ದ ಸುಮಾರು 1.94 ಕಿಲೋಮೀಟರ್ಗಳು.

ಮಧ್ಯ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರಿನ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆಯು ತುಂಗಾ ನದಿಯಿಂದ 17.40 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಎತ್ತಿ ಅಲ್ಲಿಂದ 29.90 ಟಿಎಂಸಿ ನೀರನ್ನು ಅಜ್ಜಂಪುರದ ಸುರಂಗದ ಮೂಲಕ ವಿವಿಧ ಶಾಖಾ ಕಾಲುವೆಗಳ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮತ್ತು ತುಮಕೂರು ಜಿಲ್ಲೆಗಳ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ಸರ್ಕಾರದ ಆರ್ಥಿಕ ಸಮೀಕ್ಷೆಯ ಪ್ರಕಾರ, ಯೋಜನೆಯಡಿ ಒಟ್ಟು 2,25,515 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಒದಗಿಸುವ ಮತ್ತು 367 ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50 ರಷ್ಟು ತುಂಬಿಸುವ ಉದ್ದೇಶವನ್ನು ಹೊಂದಿದೆ. ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ತಾಲೂಕುಗಳಿಗೆ ಶಾಖಾ ಕಾಲುವೆಗಳ ಮೂಲಕ ಸುಮಾರು 90 ಕೆರೆಗಳನ್ನು ಅವುಗಳ ಸಾಮರ್ಥ್ಯದ ಸುಮಾರು 50% ಮಟ್ಟಕ್ಕೆ ತುಂಬಿಸುವ ಯೋಜನೆಯಾಗಿದ್ದು. ಈ ಪಟ್ಟಿಯಲ್ಲಿ ಕಡೂರು 22, ಹೊಸದುರ್ಗ 32, ಹೊಳಲ್ಕೆರೆ 30, ಹಿರಿಯೂರು 3 ಮತ್ತು ಚಿತ್ರದುರ್ಗ 3 ಕೆರೆಗಳು ಸೇರಿವೆ.

ಭದ್ರಾ ಮೇಲ್ದಂಡೆ ಯೋಜನೆ ಕೇವಲ ಒಂದು ನೀರಾವರಿ ಯೋಜನೆಯಲ್ಲ ಮಧ್ಯ ಕರ್ನಾಟಕದ ಜಲಭದ್ರತೆಯ ಪ್ರಮುಖ ಯೋಜನೆಯಾಗಿದೆ. 2008–09ರಲ್ಲಿ ಸುಮಾರು 5,900 ಕೋಟಿಯ ಯೋಜನೆಯಾಗಿ ಆರಂಭವಾದ ಇದರ ವೆಚ್ಚ ಎರಡು ದಶಕಗಳೊಳಗೆ 21,000 ಕೋಟಿಗೂ ಅಧಿಕ ಮಟ್ಟಕ್ಕೆ ಏರಿದೆ. 2023 ರಲ್ಲಿ ಕೇಂದ್ರ ಸರ್ಕಾರದಿಂದ 5,300 ಕೋಟಿಯ ನೆರವು ಘೋಷಿಸಲಾಯಿತು. 

2026 ರ ಸಪ್ಟೆಂಬರ್ 6 ರಂದು ಪ್ರಾಯೋಗಿಕವಾಗಿ ನೀರುಹರಿಸುತ್ತಿರುವುದು ಚಿತ್ರದುರ್ಗ ಜನತೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಈ ಒಂದು ಯೋಜನೆಗೆ ಕಾರಣಿಭೂತರಾದ ಸಮಸ್ತರಿಗೂ ಚಿತ್ರದುರ್ಗ ಜನತೆ ಎಂದಿಗೂ ಚಿರಋಣಿಗಳಾಗಿರುತ್ತಾರೆ ಧನ್ಯವಾದಗಳು.
ಲೇಖನ: ಡಾ. ಎಂ ವಸಂತ್ ಆಚಾರ್, ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಚಿತ್ರದುರ್ಗ ನಗರ ಯುವ ಮೋರ್ಚಾ.

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜನರ ಮನೆ ಬಾಗಿಲಿಗೆ ಸರ್ಕಾರ, ಪ್ರಜಾಸೇವಾ ಆಂದೋಲನಕ್ಕೆ ಸಚಿವ ರಘುಮೂರ್ತಿ ಚಾಲನೆಹಿರಿಯೂರು ನಗರಸಭೆಯಲ್ಲಿ ‘ಪ್ರಜಾಸೇವಾ ಆಂದೋಲನ’: ಸಚಿವರ ಸಮ್ಮುಖದಲ್ಲಿ ವಿವಿಧ ಸೌಲಭ್ಯಗಳ ವಿತರಣೆ!ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ನಿಶ್ಚಿತ್ ಪದಗ್ರಹಣ ಸಮಾರಂಭ ಹಿರಿಯೂರು ಭೋವಿ ಸಮಾಜದ ಅಧ್ಯಕ್ಷರಾಗಿ ತಿಮ್ಮರಾಜು ಆಯ್ಕೆ!ಹುಚ್ಚವ್ವನಹಳ್ಳಿ ಗ್ರಾಮಸ್ಥರ ಆರೋಗ್ಯದ ಜತೆ ಪಿಡಿಒ ಚೆಲ್ಲಾಟ – ಹೆಜ್ಜೆ ಹೆಜ್ಜೆಗೂ ಜನಾಕ್ರೋಶ!ಕೋಟೆನಾಡಿನತ್ತ ಮುಖ ಮಾಡಿದ ಭದ್ರೆ: ಸರ್ಕಾರ ಹಾಗೂ ಹೋರಾಟಗಾರರಿಗೆ ‘ಒಂದೇ ಮಾತರಂ ಜಾಗೃತಿ ವೇದಿಕೆ’ ಧನ್ಯವಾದ!ಸಾರ್ವಜನಿಕರು ಶಿಕ್ಷಕರ ದಿನಾಚರಣೆ ಆಚರಿಸುವಂತಾಗಬೇಕು: ಡಾ ನೆಲ್ಲಿಕಟ್ಟೆ ಸಿದ್ದೇಶ್ಪೌರಕಾರ್ಮಿಕರಿಗೆ ಅವಮಾನ: ಸಚಿವ ಕೃಷ್ಣ ಬೈರೇಗೌಡರು ಬಹಿರಂಗ ಕ್ಷಮೆಯಾಚಿಸಲು ಒತ್ತಾಯರೈತರ ಜನಾಕ್ರೋಶಕ್ಕೆ ಬೆದರಿದ ಸರ್ಕಾರ: ಪಾದಯಾತ್ರೆ ಧಕ್ಕೆಗೆ 'ಡ್ಯಾಮೇಜ್ ಕಂಟ್ರೋಲ್' ತಂತ್ರ ಎಂದ ವಿಪಕ್ಷ!  ಸಾಧಕ ಶಿಕ್ಷಕರ ಶ್ರಮಕ್ಕೆ ಗೌರವ ಸಲ್ಲಿಸಿದ ಆರ್. ಅಶೋಕ್ ಮತ್ತು ತೇಜಸ್ವಿ ಸೂರ್ಯ