Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್‌ರವರ ಹುಟ್ಟು ಹಬ್ಬ ಆಚರಣೆ

Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಉಪ ಮುಖ್ಯಮಂತ್ರಿ
, ಕರ್ನಾಟ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರ ಹುಟ್ಟುಹಬ್ಬವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಜನ್ಮದಿನದಲ್ಲಿ ಭಾಗವಹಿಸಿ ಮಾತನಾಡುತ್ತ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ನಡುವೆ ಸಮನ್ವಯತೆಯಿರುವುದರಿಂದ ರಾಜ್ಯ ಸರ್ಕಾರ ಮೂರು ವರ್ಷಗಳ ಅಧಿಕಾರವಧಿಯನ್ನು ಯಶಸ್ವಿಯಾಗಿ ಪೂರೈಸಿದೆ. ಏಪ್ರಿಲ್‌ನಲ್ಲಿ ನಡೆದ ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಐದು ಪಂಚ ಗ್ಯಾರೆಂಟಿ ಯೋಜನೆಗಳು ಹಾಗೂ ಕಾರ್ಯಕರ್ತರ, ಮುಖಂಡರುಗಳ ಪರಿಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ರಾಜಕೀಯ ಜೀವನದಲ್ಲಿ ಡಿ.ಕೆ.ಶಿವಕುಮಾರ್‌ರವರಿಗೆ ಉನ್ನತ ಸ್ಥಾನಮಾನಗಳು ಸಿಗಲಿ ಎಂದು ಆಶಿಸಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ಜೋಡೆತ್ತಿನಂತೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ವಿರೋಧ ಪಕ್ಷಗಳ ಟೀಕೆ, ಅಪವಾದಗಳಿಗೆ ಎದೆಗುಂದದೆ ವಿಧಾನಸಭೆ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಉಚಿತ ಗ್ಯಾರೆಂಟಿಗಳನ್ನು ಜನತೆಗೆ ನೀಡಿದ್ದಾರೆ. ರಾಜಕೀಯದಲ್ಲಿ ಡಿಕೆಶಿ. ಉತ್ತುಂಗ ಸ್ಥಾನಕ್ಕೇರಲಿ ಎಂದು ಹಾರೈಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಹಿಂದುಳಿದ ವರ್ಗಗಳ ಅಧ್ಯಕ್ಷ ಎನ್.ಡಿ.ಕುಮಾರ್, ಪರಿಶಿಷ್ಟ ವರ್ಗಗಳ ಅಧ್ಯಕ್ಷ ಮಂಜುನಾಥ್, ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಅಬ್ದುಲ್ಲಾ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂಆಲಿ, ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್‌ರವರ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಜೆ.ಮಂಜುನಾಥ, ಸೈಯದ್ ಸೈಫುಲ್ಲಾ, ಇಂದಿರಾ, ಜಿ.ವಿ.ಮಧುಗೌಡ ಗಂಜಿಗಟ್ಟೆ, ದಲಿತ ಮುಖಂಡ ಜಿ.ರಾಜಪ್ಪ, ಕಾಂಗ್ರೆಸ್ ಕಾರ್ಯದರ್ಶಿ ರಮೇಶ್, ನ್ಯಾಯವಾದಿ ಸುದರ್ಶನ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎಸ್.ಎನ್.ಸುರೇಶ್, ಸೈಯದ್ ಅಫಾಖ್‌ಅಹಮದ್ ಇನ್ನು ಅನೇಕರು ಜನ್ಮದಿನದಲ್ಲಿ ಪಾಲ್ಗೊಂಡಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಕೆಶಿ ಹುಟ್ಟುಹಬ್ಬಕ್ಕೆ ‘ದುಗ್ಗಮ್ಮ’ಗೆ 101 ತೆಂಗಿನಕಾಯಿ ಹರಕೆ; ‘ಸಿಎಂ’ ಆಗಲೆಂದು ಅಭಿಮಾನಿಗಳ ವಿಶೇಷ ಪ್ರಾರ್ಥನೆ!‘ನೀಟ್’ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ: ಪ್ರಮುಖ ಆರೋಪಿ ಧನಂಜಯ್ ಲೋಖಂಡೆ ೬ ದಿನ ಸಿಬಿಐ ಕಸ್ಟಡಿಗೆ!ನಟ ದರ್ಶನ್‌ಗೆ ಬಿಗ್ ಶಾಕ್: ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್! ’ದಿನಂಪ್ರತಿ ವಿಚಾರಣೆ’ಗೆ ಆದೇಶಜೂನ್ ೨೧ ಕ್ಕೆ ‘ನೀಟ್’ ಮರು ಪರೀಕ್ಷೆ; ಅಧಿಕೃತ ಘೋಷಣೆ!ಮೇ 26ಕ್ಕೆ ಕೇರಳಕ್ಕೆ ಮಾನ್ಸೂನ್ ಎಂಟ್ರಿ! ಆದರೆ ‘ಎಲ್ ನಿನೋ’ ಭೀತಿಭೀಕರ ಅಪಘಾತ: ಸೇತುವೆಯಿಂದ ಕೆಳಕ್ಕೆ ಬಿದ್ದ ಟ್ರ್ಯಾಕ್ಟರ್, ಒಂದೇ ಕುಟುಂಬದ 7 ಸಾವು!ಕೈಮಗ್ಗ ನೇಯ್ಗೆ ಉತ್ತೇಜನಕ್ಕೆ ಸರ್ಕಾರದ ವಿಶೇಷ ಸಹಾಯಧನ: ಸಂಸದೆ ಡಾ. ಪ್ರಭಾಕೈ-ದಳ ನಾಯಕರ ನಡುವಿನ ವಾಕ್ಸಮರಕ್ಕೆ ಹೊಸ ಕಿಡಿ ಹೊತ್ತಿಸಿದ ಡಿಸಿಎಂ ಹೇಳಿಕೆಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಎಲ್ಲದ್ದಕ್ಕೂ ಸಹಿ ಹಾಕುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿಆಂಧ್ರ-ತಮಿಳುನಾಡಿಗೆ ಹರಿದುಹೋದ ಲಕ್ಷ ಕೋಟಿ ಹೂಡಿಕೆ: ಜೆಡಿಎಸ್‌ವಾಗ್ದಾಳಿ