Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಜಶ್ರಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರ ಜನ್ಮದಿನ ಆಚರಣೆ  

 ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಾಜ್ಯದ ಯಾವ ಮುಖ್ಯಮಂತ್ರಿಗಳು ಇದುವರೆವಿಗೂ ಮಾಡದಂತ ಅಪರೂಪದ ಚರಿತ್ರಾರ್ಹ ಕೆಲಸವನ್ನು ರಾಜಶ್ರಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮಾಡಿರುವುದರಿಂದ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕ ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಗುಣಗಾನ ಮಾಡಿದರು.

ಪ್ರವಾಸಿ ಮಂದಿರದಲ್ಲಿ ನಡೆದ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರ ೧೪೨ ನೇ ಜನ್ಮದಿನದ ಅಂಗವಾಗಿ ಅವರ ಫೋಟೋಗೆ ಪುಷ್ಪರ್ಚಾನೆ ಸಲ್ಲಿಸಿ ಮಾತನಾಡಿದರು.

Advertisement

ಶೇ.೭೨ ಪರ್ಸೆಂಟ್ ಮೀಸಲಾತಿಯನ್ನು ಮೊಟ್ಟ ಮೊದಲು ಕೊಟ್ಟವರು ಮೈಸೂರು ಮಹಾರಾಜರು. ಸಾಮಾಜಿಕ ಸಮಸ್ಯೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದ ಮಿಲ್ಲರ್ ಆಯೋಗ ರಚಿಸಿದರು. ಇದರಿಂದ ಭಾರತದಲ್ಲಿ ಸಂಚಲನ ಮೂಡಿಸಿತು. ಎಲ್ಲಾ ಜಾತಿಯವರು ಒಟ್ಟಿಗೆ ಕುಳಿತು ಪಾಠ ಕೇಳುವ ವ್ಯವಸ್ಥೆ ಜಾರಿಗೆ ತಂದರು. ಚಾತುರ್ವಣವನ್ನು ಬುಡ ಸಮೇತ ಕಿತ್ತು ಹಾಕುವ ಸಾಹಸ ಮಾಡಿದವರು ಮೈಸೂರು ಮಹಾರಾಜರು ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರು ಮೀಸಲಾತಿಯನ್ನು ಜಾರಿಗೆ ತಂದ ಪರಿಣಾಮ ಹಿಂದುಳಿದವರು ಸೇರಿದಂತೆ ಎಲ್ಲಾ ಜಾತಿಯವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವಾಯಿತು. ಹಿರಿಯೂರಿನಲ್ಲಿರುವ ವಾಣಿವಿಲಾಸಸಾಗರವನ್ನು ಕಟ್ಟಿಸಿದವರು ಮೈಸೂರು ಮಹಾರಾಜರು, ವಿಶ್ವವಿದ್ಯಾನಿಲಯಗಳು, ಮೈಸೂರು ಲ್ಯಾಂಪ್ಸ್, ಡ್ಯಾಂಗಳು ಆಗಿದ್ದು, ಇವರ ಕಾಲದಲ್ಲಿ. ಇಂತಹ ಜನೋಪಕಾರಿ ಕೆಲಸಗಳನ್ನು ಮಾಡಿರುವ ಮೈಸೂರು ಮಹಾರಾಜರನ್ನು ಪ್ರತಿಯೊಬ್ಬರು ನೆನಪು ಮಾಡಿಕೊಳ್ಳಲೇಬೇಕು. ಅವರ ಕಾಲದಲ್ಲಿದ್ದ ಹದಿಮೂರು ಜಿಲ್ಲೆಗಳಲ್ಲಿ ಅನೇಕ ಅಭಿವೃದ್ದಿಯಾಗಿವೆ. ಈಗಿನ ಮುಖ್ಯಮಂತ್ರಿಗಳು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರನ್ನು ಅನುಕರಣೆ ಮಾಡಬೇಕೆಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೈಸೂರು ಮಹಾರಾಜರು ನಾಡಿಗೆ ನೀಡಿರುವ ಕೊಡುಗೆಯನ್ನು ಪರಿಚಯಿಸಬೇಕು. ಸೌಲಭ್ಯಗಳಿಂದ ವಂಚಿತರಾದವರಿಗೆ ಮೊಟ್ಟ ಮೊದಲು ಮೀಸಲಾತಿ ಕೊಡಬೇಕೆಂದು ಆಲೋಚನೆ ಮಾಡಿದವರು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಎನ್ನುವುದನ್ನು ಮರೆಯುವಂತಿಲ್ಲ. ಮಿಲ್ಲರ್ ಆಯೋಗವನ್ನು ವಿಶ್ವೇಶ್ವರಯ್ಯ ವಿರೋಧಿಸಿದಾಗ ಲೆಕ್ಕಿಸದೆ ಜಾರಿಗೆ ತಂದರು. ಚಿತ್ರದುರ್ಗದ ಸರ್‌ಖಾಜಿರವರು ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಸಲಹಾ ಸಮಿತಿಯಲ್ಲಿದ್ದರು ಎನ್ನುವುದನ್ನು ನೆನಪಿಸಿಕೊಂಡರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಾಯಕ ಮಾತನಾಡಿ ಸಮಾಜ ಸುಧಾರಣೆ ಬಗ್ಗೆ ಅಪಾರವಾದ ಕಳಕಳಿ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರಲ್ಲಿದ್ದ ಕಾರಣಕ್ಕಾಗಿ ಸರ್ವರಿಗೂ ಸಮಪಾಲು, ಸಮಬಾಳು ಸಿಕ್ಕಿದೆ. ಮೂಢನಂಬಿಕೆ, ಅನಿಷ್ಟ ಪದ್ದತಿಗಳ ನಿರ್ಮೂಲನೆಗಾಗಿ ಧೃಢ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಮಹಿಳೆಯರಿಗೂ ಮೊದಲು ಸಮಾನತೆ ಕೊಟ್ಟವರು ಮೈಸೂರು ಮಹಾರಾಜರು ಎನ್ನುವುದನ್ನು ಸ್ಮರಿಸಿದರು.

ಧಮನಿತರು ಕೂಡ ಸ್ವಾವಲಂಭಿಯಾಗಿ ಬದುಕಲು ಭೂಮಿಯನ್ನು ಹಂಚಿಕೆ ಮಾಡಿದರು. ಕೆರೆ ಕಟ್ಟೆ ಡ್ಯಾಂಗಳನ್ನು ಕಟ್ಟಿ ಸಕಲ ಜೀವರಾಶಿಗಳಿಗೂ ನೀರಿನ ದಾಹ ಇಂಗಿಸಿದರು. ಮೈಸೂರು ದಸರಾದಲ್ಲಿ ಮಹಾರಾಜರ ಸತ್ಕಾರ್ಯಗಳನ್ನು ನೋಡಬಹುದು ಎಂದರು.

ದಲಿತ ಮುಖಂಡ ಬಿ.ರಾಜಣ್ಣ ಮಾತನಾಡಿ ಮೈಸೂರು ಮಹಾರಾಜರು ಒಡವೆಗಳನ್ನು ಮಾರಿ ಡ್ಯಾಂಗಳನ್ನು ಕಟ್ಟಿಸಿ ಜನರಿಗೆ ಕುಡಿಯಲು ನೀರು ಕೊಟ್ಟಿದ್ದಾರೆ. ಮೇಲ್ಜಾತಿಯಿಂದ ಹಿಡಿದು ಕೆಳಸ್ಥರದ ಎಲ್ಲಾ ಜಾತಿಯವರಿಗೆ ಸಮಾನತೆ ಕೊಡಬೇಕೆಂಬ ದೂರದೃಷ್ಟಿ ಮೈಸೂರು ಮಹಾರಾಜರವರಲ್ಲಿತ್ತು ಎಂದು ಹೇಳಿದರು.

ಲೇಖಕ ಹೆಚ್.ಆನಂದ್‌ಕುಮಾರ್, ಎಸ್.ಲಕ್ಷ್ಮಿಕಾಂತ್, ಗ್ರಂಥಾಲಯಾಧಿಕಾರಿ ಬಸವರಾಜ್‌ಕೊಳ್ಳಿ ಇವರುಗಳು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ರವರ ಸಮಾಜಮುಖಿ ಕಾರ್ಯಗಳ ಕುರಿತು ಮಾತನಾಡಿದರು.

ಆಕಾಶವಾಣಿಯ ನವೀನ್ ಮಸ್ಕಲ್, ಹನುಮಂತಪ್ಪ ಗೋನೂರು, ಪಾಂಡುರಂಗಪ್ಪ, ರಘು, ರಾಮಣ್ಣ, ರಾಜೇಂದ್ರಪ್ರಸಾದ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು