Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಡದಿ ಟೌನ್‌ಶಿಪ್‌: ಕಾಂಗ್ರೆಸ್‌ಸರ್ಕಾರದ "ಸುಳ್ಳಿನ" ಮುಖವಾಡ ಕಳಚಿದೆ- ಜೆಡಿಎಸ್ ಕಿಡಿಕಾರಿಕೆ!

Advertisement
Advertisement

​ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಗ್ರೇಟರ್‌ಬೆಂಗಳೂರು ಟೌನ್‌ಶಿಪ್ ಯೋಜನೆಯ ವಿಚಾರದಲ್ಲಿ ಕಾಂಗ್ರೆಸ್‌ಸರ್ಕಾರವು ಹಸಿಸುಳ್ಳುಗಳನ್ನು ಪ್ರಚಾರ ಮಾಡುತ್ತಿದ್ದು
, ಬಿಡದಿಯ ನೈಜ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

​ರಿಯಲ್‌ಎಸ್ಟೇಟ್‌ಮಾಫಿಯಾ ಮತ್ತು ಸ್ವಾರ್ಥ ರಾಜಕೀಯದ ಲಾಭಕ್ಕಾಗಿ ಅನ್ನದಾತರ ಭೂಮಿಯನ್ನು ವಾಮಮಾರ್ಗದಲ್ಲಿ ಕಸಿಯಲು ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್, ಯೋಜನೆಯ ಕುರಿತು ಹೆಣೆದಿರುವ ಸುಳ್ಳು ಹಾಗೂ ಅದರ ಹಿಂದಿನ ಅಸಲಿ ಸತ್ಯವನ್ನು ಬಹಿರಂಗಪಡಿಸಿದೆ.

​ಕಾಂಗ್ರೆಸ್‌ನ ಸುಳ್ಳು ಪ್ರಚಾರ vs ಅಸಲಿ ಸತ್ಯ:
​ಕಾಂಗ್ರೆಸ್‌ಸುಳ್ಳು ಪ್ರಚಾರ: ಬಿಡದಿ ಟೌನ್‌ಶಿಪ್‌ವಿರುದ್ಧದ ರೈತರ ಹೋರಾಟಕ್ಕೆ ನ್ಯಾಯಾಲಯದಲ್ಲಿ ಸೋಲಾಗಿದೆ.

​ಅಸಲಿ ಸತ್ಯ: ಹೈಕೋರ್ಟ್ ವಜಾಗೊಳಿಸಿರುವುದು ಮೈಸೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅನ್ನು ಮಾತ್ರ. ಈ ಅರ್ಜಿಗೂ, ಭೂಮಿ ಕಳೆದುಕೊಳ್ಳುತ್ತಿರುವ ಬಿಡದಿಯ ನೈಜ ರೈತರಿಗೂ ಮತ್ತು ಅವರ ರೈತ ಸಂಘಟನೆಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ!

​ರೈತರ ಸಮಾಧಿ ಮೇಲೆ ಟೌನ್‌ಶಿಪ್ ನಿರ್ಮಾಣಕ್ಕೆ ಬಿಡೆವು!

​ರೈತರಲ್ಲಿ ಗೊಂದಲ ಸೃಷ್ಟಿಸಿ, ಅಪಪ್ರಚಾರದ ಮೂಲಕ ಅವರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಯತ್ನಿಸುತ್ತಿದೆ. ಆದರೆ, ಸಂತ್ರಸ್ತ ರೈತರ ಜಾಗೃತಿ ಮಾತುಗಳು ಕಾಂಗ್ರೆಸ್‌ಸರ್ಕಾರದ ಎಲ್ಲ ಸುಳ್ಳುಗಳನ್ನು ಬಟಾಬಯಲು ಮಾಡಿವೆ ಎಂದು ಪಕ್ಷ ಹೇಳಿದೆ.

​"ರಿಯಲ್‌ಎಸ್ಟೇಟ್‌ದಂಧೆಗಾಗಿ ಅನ್ನದಾತರ ಹೊಟ್ಟೆಗೆ ಹೊಡೆಯುವುದನ್ನು ಕಾಂಗ್ರೆಸ್ ಸರ್ಕಾರ ತಕ್ಷಣ ನಿಲ್ಲಿಸಬೇಕು. ರೈತರ ಸಮಾಧಿ ಮೇಲೆ ಟೌನ್‌ಶಿಪ್‌ನಿರ್ಮಾಣ ಮಾಡಲು ಹೊರಟಿರುವ ಸರ್ಕಾರದ ನಡೆಯನ್ನು ಜೆಡಿಎಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ ಮತ್ತು ಇದಕ್ಕೆ ಅವಕಾಶ ಕೊಡುವುದಿಲ್ಲ."
ಜೆಡಿಎಸ್.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.