ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಿಂದ ಸಾಲ ಪಡೆದ ರೈತರು ಕಾಲ ಕಾಲಕ್ಕೆ ಸೂಕ್ತ ರೀತಿಯಲ್ಲಿ ಮರುಪಾವತಿಸಿದರೆ ಸಂಘ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಸಹಕಾರ ಸಂಘದ ಅಧ್ಯಕ್ಷ ವಾಸುದೇವ್ ಹೇಳಿದರು.
ತೂಬಗೆರೆ ಸಮುದಾಯ ಭವನದಲ್ಲಿ ಇಂದು ತೂಬಗೆರೆ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಸಂಘದಲ್ಲಿ ಅವರು ಮಾತನಾಡಿ 360 ರೈತರಿಗೆ ಸಾಲವನ್ನು ಕೊಟ್ಟಿದ್ದೇವೆ. ಇನ್ನು 45 ರೈತರಿಗೆ ಮುಂದಿನ ತಿಂಗಳಲ್ಲಿ ಸಾಲವನ್ನು ಕೊಡುತ್ತೇವೆ. ಹಾಗೂ ಮಳೆ ಇಲ್ಲದೆ ರೈತರು ಸಂಕಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ದೊಡ್ಡಬಳ್ಳಾಪುರ ತಾಲೂಕನ್ನು ಬರಗಾಲ ಮಾಡಿದ್ದಾರೆ.ಸರ್ಕಾರ ರೈತರಿಗೆ ಸಾಲ ಮನ್ನಾ ಮಾಡುತ್ತಾರೆ ಎಂಬುದು ನಮ್ಮ ಭರವಸೆಯಾಗಿದೆ. ರೈತರಿಗೆ ಗೊಬ್ಬರ ಕೊಡಲು ಹಳೆಯ ಕಟ್ಟಡ ವಾಗುವುದರಿಂದ ಅದನ್ನು ಕೆಡವಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್ ಅರವಿಂದ್ ಮಾತನಾಡಿ. ಸಂಘದಲ್ಲಿ ಲಾಭಾಂಶ ಕಡಿಮೆಯಾಗಿದೆ ಅದಕ್ಕಾಗಿ ನೂತನವಾಗಿ ಆಗಿರುವ ಕಮಿಟಿಯವರು ರಸಗೊಬ್ಬರ ಹಾಗು ರೈತರಿಗೆ ಬೇಕಾಗಿರುವ ಪರಿಕರಗಳನ್ನು ತರಿಸಿ ರೈತರಿಗೆ ಅತಿ ಕಡಿಮೆ ಬೆಳೆಯಲ್ಲಿ ಮಾರಿದರೆ ಒಳ್ಳೆಯ ಲಾಭಾಂಶ ಬರುತ್ತದೆ. ಇದರಿಂದ ಸಂಘವು ಇನ್ನಷ್ಟು ಬಲಿಷ್ಠಗೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಸ್ವಾಮಿ, ತೂಬಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ವಿ. ವೆಂಕಟೇಶ್, ಸದಸ್ಯರಾದ ಮುನಿಕೃಷ್ಣಪ್ಪ, ಸಂಘದ ನಿರ್ದೇಶಕರಾದ ಗಂಗರಾಜು, ರಾಜಕುಮಾರ್, ಸುಬ್ರಮಣಿ, ಸತೀಶ್, ವಿನೋದಮ್ಮ, ಆನಂದಮ್ಮ, ನಾರಾಯಣಪ್ಪ, ಅಶ್ವಥ್ ನಾರಾಯಣ, ಸಂಘದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಜಗದೀಶ್, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಎನ್.ಟಿ. ರಾಘವೇಂದ್ರ ಹಾಗೂ ಎಲ್ಲಾ ರೈತ ಬಾಂಧವರು ಹಾಜರಿದ್ದರು.




