Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಛಲವಾದಿ ನಾರಾಯಣಸ್ವಾಮಿಗೆ ಬೆದರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಸತಿ ಗೃಹಕ್ಕೆ ಆನ್‌ಲೈನ್ ಮೂಲಕ ಮಾರಕಾಸ್ತ್ರಗಳನ್ನು ರವಾನಿಸಿ ಬೆದರಿಕೆ ಒಡ್ಡಿರುವುದನ್ನು ಖಂಡಿಸಿ
, ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ಅಂಬೇಡ್ಕರ್ ವೃತ್ತದಿಂದ ಒನಕೆ ಓಬವ್ವ ವೃತ್ತದವರೆಗೆ ಕೃತಕ ಚೂರಿ ಹಾಗೂ ಮಚ್ಚುಗಳ ಮಾದರಿ ಪ್ರದರ್ಶಿಸುತ್ತ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ಕಚೇರಿ ಎದುರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಹಾಗೂ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಲಿತ ಹಾಗೂ ಬಡವರ ವಿರೋಧಿ ಸರ್ಕಾರವು ಗೂಂಡಾ ಸಂಸ್ಕೃತಿಗೆ ಇಳಿದಿದೆ," ಎಂದು ಆರೋಪಿಸಿದರು.

ಅಲ್ಲದೆ, ಎಸ್ಸಿಪಿ-ಟಿಎಸ್ಪಿ ಯೋಜನೆಯ ೫೬ ಸಾವಿರ ಕೋಟಿ ಹಣ ದುರ್ಬಳಕೆ ಹಾಗೂ ಬೆಲೆ ಏರಿಕೆಯನ್ನು ಖಂಡಿಸಿ, ಮಾರಕಾಸ್ತ್ರ ಕಳುಹಿಸಿದ ಪ್ರಕರಣವನ್ನು ತಕ್ಷಣವೇ ಸಿಬಿಐ ತನಿಖೆಗೆ ವಹಿಸಿ ತಪ್ಪಿತಸ್ಥರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ವೆಂಕಟೇಶ್‌ಯಾದವ್, ಡಾ.ಸಿದ್ದಾರ್ಥ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪರಶುರಾಮ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಾವಳಿ ಸಂಭ್ರಮದ ನಡುವೆ ದುರಂತ: ಚಿತ್ರದುರ್ಗದಲ್ಲಿ ಹೊತ್ತಿ ಉರಿದ ಮೂರು ಲಾರಿಗಳು!ದೀಪಾವಳಿ ದುರಂತ: ರಾಕೆಟ್ ಪಟಾಕಿ ಸ್ಫೋಟಗೊಂಡು 10 ವರ್ಷದ ಬಾಲಕ ಸಾವುಹೈಕೋರ್ಟ್ ಕಳವಳ: ಉಚಿತ ಯೋಜನೆಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಾಮಾನ್ಯ ಜನರ ಬದುಕು ಅಯೋಮಯ4 ಪಥದ ಎಲಿವೇಟೆಡ್‌ಕಾರಿಡಾರ್‌ನಿರ್ಮಾಣ: ಸಂಚಾರ ಮಾರ್ಗ ಬದಲಾವಣೆಅರಮನೆ ವಶಕ್ಕೆ ಕಾರ್ಯಾಂಗದ ದುರ್ಬಳಕೆ: ಸಂಸದ ಯದುವೀರ್ ವಾಗ್ದಾಳಿಮಾಟಮಂತ್ರ, ಪೂಜೆ ಹೆಸರಲ್ಲಿ ಕೋಟ್ಯಂತರ ವಂಚನೆ: ಹೈಕೋರ್ಟ್ ಕಳವಳ, ಆರೋಪಿಗಳ ಅರ್ಜಿ ವಜಾಸಿನಿಮೀಯ ಚೇಸಿಂಗ್‌ನಡೆಸಿ 'ಹಿಟ್‌ಆ್ಯಂಡ್‌ರನ್‌' ಖದೀಮನ ಬಂಧಿಸಿದ ಪೊಲೀಸರು; ಕಾರು ಡಿಕ್ಕಿಯಾಗಿ ಇಬ್ಬರು ದಾರುಣ ಸಾವುಹಾಸನ ಲಂಚದ ಆರೋಪ ಪ್ರಕರಣ: ಡಿಸಿ ಆಪ್ತ ಸಹಾಯಕನಿಂದ ದೂರು ದಾಖಲು, 'ಚಾಟ್‌ಗಳು ನಕಲಿ' ಎಂದ ಶಶಿಕಿರಣ್ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಲಿಸ್ ತನಿಖೆ, ತಪಾಸಣೆ ಚುರುಕುಎಥೆನಾಲ್ ಮಿಶ್ರಣ: ತೈಲ ಕಂಪನಿಗಳ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ