ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸಮೀಪದ ಬಳ್ಳಾರಿ ರಸ್ತೆಯ ಯುಎಎಸ್‌ಬಸ್‌ನಿಲ್ದಾಣದಿಂದ ಮೇಖ್ರಿ ವೃತ್ತದವರೆಗೆ 4 ಪಥದ ಎಲಿವೇಟೆಡ್‌ಕಾರಿಡಾರ್‌ನಿರ್ಮಾಣ ಕಾಮಗಾರಿ ಶುಕ್ರವಾರದಿಂದ ಆರಂಭವಾಗುತ್ತಿದೆ.
ಮುಂದಿನ 18 ತಿಂಗಳುಗಳ ಕಾಲ ಈ ಮಾರ್ಗದಲ್ಲಿ ಸೀಮಿತ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ನಗರ ಸಂಚಾರ ಪೊಲೀಸರು ಪರ್ಯಾಯ ರಸ್ತೆ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಯಾವ ವಾಹನಗಳಿಗೆ ಅವಕಾಶ?: ಕಾರುಗಳು, ದ್ವಿಚಕ್ರ ವಾಹನಗಳು ಹಾಗೂ ಶಾಲಾ ಬಸ್‌ಗಳಿಗೆ ಸಂಚಾರಕ್ಕೆ ಅವಕಾಶ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಸೀಮಿತ ಲೇನ್‌ಗಳಲ್ಲಿ ಅವಕಾಶ. ಎಲ್ಲಾ ಮಾದರಿಯ ಖಾಸಗಿ ಸರಕು ಸಾಗಣೆ ವಾಹನಗಳ ಪ್ರವೇಶ ಸಂಪೂರ್ಣ ನಿರ್ಬಂಧ.
ಪರ್ಯಾಯ ರಸ್ತೆ ಮಾರ್ಗಗಳು: ಹೆಬ್ಬಾಳದಿಂದ ಏರ್‌ಪೋರ್ಟ್‌ಕಡೆಗೆ: ಹೈಗ್ರೌಂಡ್‌ಜಂಕ್ಷನ್- ಕಲ್ಪನಾ ಜಂಕ್ಷನ್- ಓಲ್ಡ್‌ಉದಯ ಟಿವಿ ಜಂಕ್ಷನ್- ಕಂಟೋನ್ಮೆಂಟ್‌ರೈಲ್ವೆ ಸ್ಟೇಷನ್- ಟ್ಯಾನರಿ ರಸ್ತೆ- ನಾಗಾವರ ರಸ್ತೆ ಮೂಲಕ ತಲುಪಬಹುದು.
ಯಶವಂತಪುರದಿಂದ ಏರ್‌ಪೋರ್ಟ್‌ಗೆ: ಮತ್ತಿಕೆರೆ ರಸ್ತೆ - ಬಿ.ಇ.ಎಲ್‌ವೃತ್ತದಲ್ಲಿ ಬಲತಿರುವು - ರಿಂಗ್‌ರೋಡ್‌ಮೂಲಕ ಪ್ರಯಾಣಿಸಬಹುದು.
ಏರ್‌ಪೋರ್ಟ್‌ನಿಂದ ನಗರದ ಕೇಂದ್ರ ಭಾಗಕ್ಕೆ: ಮಾರ್ಗ 1: ಹೆಬ್ಬಾಳದಲ್ಲಿ ಎಡತಿರುವು - ನಾಗಾವರ ಜಂಕ್ಷನ್‌ಬಳಿ ಬಲತಿರುವು - ಬ್ಯಾಂಬೂ ಬಜಾರ್‌ಕ್ವೀನ್ಸ್‌ರಸ್ತೆ ಮುಖಾಂತರ ನಗರ ಸೇರಬಹುದು.
ಮಾರ್ಗ 2: ಹೆಬ್ಬಾಳದಲ್ಲಿ ಬಲತಿರುವು- ಹೆಬ್ಬಾಳ ರಿಂಗ್‌ರಸ್ತೆ - ಕುವೆಂಪು ಸರ್ಕಲ್- ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಎಡತಿರುವು - ಡಾ. ರಾಜ್‌ಕುಮಾರ್‌ರಸ್ತೆ.
ನಗರದ ಒಳಭಾಗದ ಸ್ಥಳೀಯ ಸಂಚಾರಕ್ಕೆ: ಯಶವಂತಪುರದಿಂದ ನಗರದ ಕಡೆಗೆ: ಬಿಎಚ್‌ಇಎಲ್‌ಜಂಕ್ಷನ್- ಮಾರಮ್ಮ ಸರ್ಕಲ್‌ಬಲತಿರುವು - ಮಾರ್ಗೋಸಾ ರಸ್ತೆ.
ಆರ್‌ಟಿ ನಗರ/ಆನಂದನಗರಕ್ಕೆ: ಹೆಬ್ಬಾಳ ಮೇಲ್ಸೇತುವೆ ಇಳಿದ ನಂತರ ಬ್ಯಾಪ್ಟಿಸ್ಟ್‌ಆಸ್ಪತ್ರೆ ಮುಂಭಾಗ ಸರ್ವಿಸ್‌ರಸ್ತೆ ಸೇರಿ ಸಿಬಿಐ/ಆನಂದನಗರ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಜಯಮಹಲ್‌ರಸ್ತೆ ತಲುಪಬಹುದು.
ವಾಹನ ಸವಾರರು ಸಂಚಾರ ದಟ್ಟಣೆ ತಪ್ಪಿಸಲು ನಿಗದಿತ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.




