Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Traveling Tips

ಬೆಂಗಳೂರು – ಜ್ಯೂರಿಚ್ ನೇರ ವಿಮಾನ ಸೇವೆ ಆರಂಭ: ಕರ್ನಾಟಕ ಮತ್ತು ಸ್ವಿಟ್ಜರ್‌ಲ್ಯಾಂಡ್ ಬಾಂಧವ್ಯಕ್ಕೆ ಹೊಸ ಮೆರಗು

ಚಂದ್ರವಳ್ಳಿ ನ್ಯೂಸ್, ​ಬೆಂಗಳೂರು:
ಕರ್ನಾಟಕ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವಿನ ವ್ಯಾಪಾರ
, ಹೂಡಿಕೆ ಹಾಗೂ ಪ್ರವಾಸೋದ್ಯಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸ್ಮಿಸ್ ಇಂಟರ್ನ್ಯಾಷನಲ್ ಏರ್ ಲೈನ್ಸ್ ಜ್ಯೂರಿಚ್ ಹಾಗೂ ಬೆಂಗಳೂರು ನಡುವೆ ಪ್ರಥಮ ನೇರ ವಿಮಾನ ಸೇವೆಯನ್ನು ಕಲ್ಪಿಸಿದೆ.

​ಈ ಐತಿಹಾಸಿಕ ಸಂದರ್ಭವನ್ನು ಗುರುತಿಸಲು ಆಯೋಜಿಸಲಾಗಿದ್ದ ಮಧ್ಯಾಹ್ನದ ಭೋಜನಕೂಟದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು ಭಾರತ ಮತ್ತು ಭೂತಾನ್ ದೇಶಗಳಿಗಾಗಿರುವ ಸ್ವಿಟ್ಜರ್‌ಲ್ಯಾಂಡ್ ರಾಯಭಾರಿ ಹೆಚ್.ಇ. ಮಾಯಾ ತಿಸ್ಸಾಫಿ ಅವರೊಂದಿಗೆ ಭಾಗವಹಿಸಿ ಚರ್ಚಿಸಿದರು.

​​ಜಾಗತಿಕ ಸಂಪರ್ಕ ಹೆಚ್ಚಳ: ಜ್ಯೂರಿಚ್ ಮತ್ತು ಬೆಂಗಳೂರು ನಡುವಿನ ಈ ಹೊಸ ನೇರ ವಿಮಾನ ಸಂಪರ್ಕವು ಕರ್ನಾಟಕದ ಜಾಗತಿಕ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸಲಿದ್ದು, ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ ಹಾಗೂ ತಂತ್ರಜ್ಞಾನ ವಲಯಗಳ ಸಹಯೋಗಕ್ಕೆ ಹೊಸ ಬಾಗಿಲುಗಳನ್ನು ತೆರೆಯಲಿದೆ.

​ಸುಧಾರಿತ ವಲಯಗಳಲ್ಲಿ ಹೂಡಿಕೆಗೆ ಆಹ್ವಾನ: ಹೈ-ಪ್ರಿಸಿಷನ್ ಮಷಿನ್ ಟೂಲ್ಸ್ (ಉನ್ನತ ನಿಖರತೆಯ ಯಂತ್ರೋಪಕರಣಗಳು), ಕೃತಕ ಬುದ್ಧಿಮತ್ತೆ ಹಾಗೂ ಇತರ ಅತ್ಯಾಧುನಿಕ ತಂತ್ರಜ್ಞಾನ ವಲಯಗಳಲ್ಲಿ ಕರ್ನಾಟಕ ಹೊಂದಿರುವ ಅಗಾಧ ಅವಕಾಶಗಳನ್ನು ಸಚಿವರು ರಾಯಭಾರಿಯವರ ಮುಂದೆ ಪ್ರಸ್ತಾಪಿಸಿದರು.

​ಕ್ವಿನ್ ಸಿಟಿ ಯೋಜನೆ ಪ್ರದರ್ಶನ: ರಾಜ್ಯದ ಪ್ರತಿಷ್ಠಿತ 'ಕ್ವಿನ್ ಸಿಟಿ' ಯೋಜನೆಯ ದೃಷ್ಟಿಕೋನವನ್ನು ಹಂಚಿಕೊಂಡ ಸಚಿವರು, 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಭಾಗವಹಿಸುವಂತೆ ಸ್ವಿಟ್ಜರ್‌ಲ್ಯಾಂಡ್ ಸಂಸ್ಥೆಗಳಿಗೆ ಅಧಿಕೃತ ಆಹ್ವಾನ ನೀಡಿದರು.

​ಕರ್ನಾಟಕ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವಿನ ಸುದೀರ್ಘ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿ, ಈ ಸಹಭಾಗಿತ್ವವನ್ನು ರಾಜ್ಯಕ್ಕೆ ಬರುವ ಗುಣಮಟ್ಟದ ಹೂಡಿಕೆಗಳು ಹಾಗೂ ಉನ್ನತ ಮಟ್ಟದ ಉದ್ಯೋಗಾವಕಾಶಗಳಾಗಿ ಪರಿವರ್ತಿಸುವ ಭರವಸೆಯನ್ನು ಸಚಿವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಯುಡಬ್ಲ್ಯೂಜೆ ವತಿಯಿಂದ ಅಗಲಿದ ಪತ್ರಕರ್ತರಿಗೆ ನುಡಿ ನಮನಸ್ಯಾಚುರೇಷನ್ ಅಭಿಯಾನದ ವಿಶೇಷ ಕಾರ್ಯಕ್ರಮ-ಡಾ.ವಾಸಂತಿ ಅಮರ್ಹಿರಿಯ ವಕೀಲ ಸಣ್ಣಕ್ಕಿ ವೆಂಕಟರಮಣಪ್ಪ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆಡಾ. ಪುನೀತ್ ರಾಜಕುಮಾರ್ 5 ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ : ಅಭಿಮಾನಿಗಳಿಂದ ಬಿರಿಯಾನಿ ವಿತರಣೆಬಿಟ್ಟುಕೊಡುವ ತಾಯ್ತನ: ಡಾ.ಶಿವಪ್ಪ ಅರಿವುಧಮ್ಮಪದ ಎಂಬ ದಾರಿ:ಡಾ.ಶಿವಪ್ಪ ಅರಿವುಕಲ್ವಳ್ಳಿ ಭಾಗದ ನೀರಾವರಿ ಸೌಲಭ್ಯ ವಂಚಿತ ನಿರ್ಲಕ್ಷಿತ ಗಡಿ ಗ್ರಾಮಗಳ ಅಳಲು ಮತ್ತು ಹಕ್ಕೊತ್ತಾಯ?ಬೆಂಗಳೂರು – ಜ್ಯೂರಿಚ್ ನೇರ ವಿಮಾನ ಸೇವೆ ಆರಂಭ: ಕರ್ನಾಟಕ ಮತ್ತು ಸ್ವಿಟ್ಜರ್‌ಲ್ಯಾಂಡ್ ಬಾಂಧವ್ಯಕ್ಕೆ ಹೊಸ ಮೆರಗುಅಡ್ಡಕಸಬಿಗಳ ಆತ್ಮಾವಲೋಕನಕ್ಕೆ ಸಕಾಲ– ಹೆಚ್.ಡಿ. ಕುಮಾರಸ್ವಾಮಿ ಚಾಟಿ​ ರಾಹುಲ್ ಗಾಂಧಿ ಪ್ರಧಾನಿ ಕನಸು ನನಸಾಗದೆ 'ಹಣ್ಣು ಹುಳಿ' ಎನ್ನುತ್ತಿದ್ದಾರೆ: ಬಿ. ವೈ. ವಿಜಯೇಂದ್ರ