Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಬಿಟ್ಟುಕೊಡುವ ತಾಯ್ತನ: ಡಾ.ಶಿವಪ್ಪ ಅರಿವು

ಚಂದ್ರವಳ್ಳಿ ನ್ಯೂಸ್, ಕೋಲಾರ:
ಅಮ್ಮ ಎಂಬ ಮಮತೆ ನಮ್ಮ ನೂರು ಸಮಸ್ಯೆಗಳಿಗೆ ಪರಿಹಾರವಾಗವಲ್ಲದು. ಆಕೆ ತನ್ನಲ್ಲಿರುವುದನ್ನು ಎಲ್ಲ ಮಕ್ಕಳಿಗೂ ಸಮವಾಗಿ ಕೊಟ್ಟು ಪೋಷಿಸುತ್ತಾಳೆ. ಮಕ್ಕಳೆಲ್ಲರಿಗೂ ಘನತೆಯ ಬದುಕು ದೊರೆಯಬೇಕೆಂದು ಆಶಿಸುತ್ತಾಳೆ.

 ಸಮಾಜದಲ್ಲಿ ಎಲ್ಲರೂ ತಾಯಿಯಾಗಲು ಅವಕಾಶವಿದೆ, ಮನೋಧರ್ಮದಲ್ಲಿ. ಬುದ್ಧ, ಬಸವಣ್ಣ, ಅಂಬೇಡ್ಕರ್,  ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು…… ಭಾರತೀಯ ಸಮಾಜದಲ್ಲಿ ಹರಡಿಕೊಂಡಿರುವ ಮತ್ತು ಇಂದಿಗೂ ಉಳಿದಿರುವ ಅಸ್ಪೃಶ್ಯತೆ ಬಗ್ಗೆ ಚಿಂತಿಸುವಾಗ ಎದ್ದು ಕಾಣುವ ಗುಣ ಸ್ವಾರ್ಥವೇ ಆಗಿದೆ. ಚಾರಿತ್ರಿಕ ತಪ್ಪುಗಳನ್ನು ಸ್ವಯಂ ಸರಿತಿದ್ದುಕೊಳ್ಳುವ ಗುಣ ಇಲ್ಲದಿರುವುದರಿಂದಲೇ ಇನ್ನೂ ಆ ಅಮಾನವೀಯ ನಡೆ ಮುಂದುವರೆದಿದೆ. ತಿಕ್  ನ್ಹಾಟ್ ಹನ್ (Thick Nhat Hanh) ಎಂಬು ಗುರು ಒಂದು ಅದ್ಭುತ ಮಾತನ್ನು ಹೇಳುತ್ತಾರೆ, “ Understanding is love’s other name” ಎಂದು. ನಾವು ನಮ್ಮ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವುಗಳಿಗೆ ಅಂಟಿಕೊಂಡಿರುವ ಅಹಂ, ಸ್ವಾರ್ಥ, ಲಾಭಗಳನ್ನು ಬಿಟ್ಟುಕೊಟ್ಟರೆ ನಾವು ಒಳ್ಳೆಯವರಾಗಿಬಿಡುತ್ತೇವೆ.

 ಮಾರ್ಟಿನ್ ಲೂಥರ್ ಹೇಳಿದ ಮಾತು ಇಲ್ಲಿ ನೆನೆಸಿಕೊಳ್ಳಬಹುದು, - I have decided to stick with love. Hate is too great a burden to bear. ದಲಿತರನ್ನು ದ್ವೇಷಿಸುವ ಭಾರವನ್ನು ಇನ್ನೆಷ್ಟು ದಿನ ಹೊರುವಿರಿ. ಆ ಭಾರವನ್ನು ವಿಸರ್ಜಿಸಿ ಪ್ರೀತಿಯ ಸಮಸಮಾಜಕ್ಕೆ ಜಾಗಮಾಡಿಕೊಡಬೇಕು. ದೇಶವನ್ನು ಕಟ್ಟುವ ದೊಡ್ಡ ಕೆಲಸಗಳಲ್ಲಿ ಇದೂ ಒಂದು.

 ಹಿಂದೊಮ್ಮೆ ಎಲ್ಲೋ ಒಂದು ಉಪನ್ಯಾಸದಲ್ಲಿ ಕೇಳಿದ್ದೆ. ಆಂಧ್ರದಲ್ಲೆಲ್ಲೊ ಜಮೀನ್ದಾರ ಅಪ್ಪನು ಹೊಲಗದ್ದೆಯಲ್ಲಿ ದುಡಿಯುವವರಿಗೆ ನ್ಯಾಯಯುತವಾಗಿ ಪಗಾರ ಕೊಡುತ್ತಿಲ್ಲವೆಂದು ಕೂಲಿ ಕಾರ್ಮಿಕರೊಂದಿಗೆ ಸೇರಿ ತಂದೆಯ ವಿರುದ್ದವೇ ಮಗ ಪ್ರತಿಭಟನೆ ನಡೆಸಿದನಂತೆ. ಇದು ತಾಯ್ತನ. ಜಮೀನ್ದಾರ ಮಕ್ಕಳಿಗೆ ಸಿಗುತ್ತಿದ್ದ ಊಟ, ಬಟ್ಟೆ, ಸವಲತ್ತುಗಳು ಅವನ ಹೊಲಗದ್ದೆಗಳಲ್ಲಿ ದುಡಿಯುವವರಿಗೂ ಸಿಗಬೇಕು ಎನ್ನುವ ಮಗನ ಇಂಗಿತವು ಮಹಾ ಆದರ್ಶವಾಗಿದೆ.

 ಪ್ರೀತಿ ಇರುವಲ್ಲಿಯೇ ಒಳ್ಳೆಯ ಜೀವನ ಇರುಲು ಸಾಧ್ಯ. ದ್ವೇಷ ಸ್ವಾರ್ಥಗಳಿರುವಲ್ಲಿ ಶಾಂತಿ, ಸಮುದ್ಧಿ ಇರುವುದಿಲ್ಲ. ಒಬ್ಬಿಬ್ಬರು ಸುಖವಾಗಿದ್ದರೆ ಸಾಲದು. ಸುತ್ತಮುತ್ತಲಿನವರೂ ಸಂತೋಷದಿಂದರಬೇಕು. ಹಂಚಿಕೊಂಡು ತಿನ್ನುವ ಧೋರಣೆ ನಮ್ಮಲ್ಲಿ ಇನ್ನೂ ಬೆಳೆಯಬೇಕು.

 ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಸಿಗುತ್ತಿದ್ದ ಉನ್ನತ ಸ್ಥಾನಮಾನ, ಗೌರವಗಳನ್ನು ಬಸವಣ್ಣನವರು ನಯವಾಗಿಯೇ ತಿರಸ್ಕರಿಸಿದ್ದರು. ಹುಟ್ಟಿನಿಂದ ಯಾರೂ ದೊಡ್ಡವರಲ್ಲ ಎಂದು ಅವರು ನಂಬಿದ್ದರು. ಜಾತಿಯಲ್ಲಿ ದಲಿತರಾಗಿ ಹುಟ್ಟಿದ್ದ ಮಾದಾರ ಚೆನ್ನಯ್ಯನ ಮನೆಯ ದಾಸಿಯ ಮಗ ನಾನು ಎನ್ನುವ ಬಸವಣ್ಣನವರು ಜಾತಿಯ ಶ್ರೇಷ್ಠತೆಯನ್ನು ನಿರಾಕರಿಸಿದ್ದರು. ಅವರ ಈ ವಚನವನ್ನು ಗಮನಿಸಿ:

 ಚೆನ್ನಯ್ಯನ ಮನೆಯ ದಾಸನ ಮಗನು,
 ಕಕ್ಕಯ್ಯನ ಮನೆಯ ದಾಸಿಯ ಮಗಳು,
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು
,
ಕೂಡಲಸಂಗಮದೇವ ಸಾಕ್ಷಿಯಾಗಿ.

 ಇರುವುದನ್ನು ಬಿಟ್ಟುಕೊಡುವ ಪರಂಪರೆ ನಮ್ಮಲ್ಲಿದೆ. ಅದನ್ನು ಪದೇ ಪದೇ ನೆನಪಿಸಿಕೊಳ್ಳಬೇಕು. ಸಾಮಾನ್ಯ ಜನರಿಗೆ ಈ ಪರಂಪರೆಯನ್ನು ಪರಿಚಯಿಸಬೇಕು.

 ಶುದ್ಧತೆಯ ಮನೋರೋಗ ಎಷ್ಟರಮಟ್ಟಿಗೆ ಇದೆ ಎಂದರೆ ಅಸ್ಪೃಶ್ಯತೆ ಹುಟ್ಟಿದ್ದೇ ಅಶುದ್ಧತೆ ಕಾರಣಕ್ಕೆ ಎನ್ನುವಷ್ಟು. ಆದರೆ ಜಾತಿಯ ತಾರತಮ್ಯದ ಕಾರಣದಿಂದಲೇ ಅಸ್ಪೃಶ್ಯತೆ ಹುಟ್ಟಿತು ಎನ್ನುವ ಸತ್ಯವನ್ನು ನಾವು ನೋಡುವುದಿಲ್ಲ. ಅಂತ್ಯಜರು (ಈಗಿನ ದಲಿತರು) ಭೂಮಿಯ ಹಕ್ಕನ್ನು ಕಳೆದುಕೊಂಡ ಕಾರಣ ಬಡವರಾದರು. ಕಡುಕಷ್ಟಗಳಿಗೆ ದೂಡಲ್ಪಟ್ಟ ಸಮುದಾಯಕ್ಕೆ ಬದುಕುವುದೇ ದೊಡ್ಡ ಸವಾಲು ಆಗಿದ್ದ ಕಾಲದಲ್ಲಿ,  ಮೇಲ್ವರ್ಗಕ್ಕೆ ಸಮವಾದ ಅಚ್ಚುಕಟ್ಟುತನ ಬಯಸುವುದು ಅಜ್ಞಾನವೇ ಆಗಿಬಿಡುತ್ತದೆ. 

 ಆಧುನಿಕ ಸಂವಿಧಾನ ಜಾರಿಯಾಗಿ, ಒಂದಷ್ಟು ಅನುಕೂಲಗಳು, ಅಲ್ಪಸ್ವಲ್ಪ ಭೂಮಿ, ಉದ್ಯೋಗ ದೊರೆತ ಮೇಲೆ ದಲಿತರಲ್ಲಿ ಚೇತರಿಕೆ ಕಾಣುತ್ತಿದೆ. ಸರಿಸಮಾನವಾದ ಅಭಿವೃದ್ಧಿಗೆ ಇನ್ನೂ ಒಂದಷ್ಟು ಕಾಲ ಬೇಕು. ಶತಮಾನಗಳ ಕಾಲ ಸವಲತ್ತು ಅನುಭವಿಸಿದವರು ತಾಳ್ಮೆಯಿಂದ ವರ್ತಿಸಿಬೇಕು. ಸಮಕಟ್ಟುವ ಸಹಜ ನ್ಯಾಯ ಇದು. ಇದನ್ನೇ ತಾಯ್ತನ ಎನ್ನುವುದು.
ಲೇಖನ
:ಡಾ.ಶಿವಪ್ಪ ಅರಿವು, ಚಿಂತಕರು, ಕೋಲಾರ.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಯುಡಬ್ಲ್ಯೂಜೆ ವತಿಯಿಂದ ಅಗಲಿದ ಪತ್ರಕರ್ತರಿಗೆ ನುಡಿ ನಮನಸ್ಯಾಚುರೇಷನ್ ಅಭಿಯಾನದ ವಿಶೇಷ ಕಾರ್ಯಕ್ರಮ-ಡಾ.ವಾಸಂತಿ ಅಮರ್ಹಿರಿಯ ವಕೀಲ ಸಣ್ಣಕ್ಕಿ ವೆಂಕಟರಮಣಪ್ಪ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆಡಾ. ಪುನೀತ್ ರಾಜಕುಮಾರ್ 5 ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ : ಅಭಿಮಾನಿಗಳಿಂದ ಬಿರಿಯಾನಿ ವಿತರಣೆಬಿಟ್ಟುಕೊಡುವ ತಾಯ್ತನ: ಡಾ.ಶಿವಪ್ಪ ಅರಿವುಧಮ್ಮಪದ ಎಂಬ ದಾರಿ:ಡಾ.ಶಿವಪ್ಪ ಅರಿವುಕಲ್ವಳ್ಳಿ ಭಾಗದ ನೀರಾವರಿ ಸೌಲಭ್ಯ ವಂಚಿತ ನಿರ್ಲಕ್ಷಿತ ಗಡಿ ಗ್ರಾಮಗಳ ಅಳಲು ಮತ್ತು ಹಕ್ಕೊತ್ತಾಯ?ಬೆಂಗಳೂರು – ಜ್ಯೂರಿಚ್ ನೇರ ವಿಮಾನ ಸೇವೆ ಆರಂಭ: ಕರ್ನಾಟಕ ಮತ್ತು ಸ್ವಿಟ್ಜರ್‌ಲ್ಯಾಂಡ್ ಬಾಂಧವ್ಯಕ್ಕೆ ಹೊಸ ಮೆರಗುಅಡ್ಡಕಸಬಿಗಳ ಆತ್ಮಾವಲೋಕನಕ್ಕೆ ಸಕಾಲ– ಹೆಚ್.ಡಿ. ಕುಮಾರಸ್ವಾಮಿ ಚಾಟಿ​ ರಾಹುಲ್ ಗಾಂಧಿ ಪ್ರಧಾನಿ ಕನಸು ನನಸಾಗದೆ 'ಹಣ್ಣು ಹುಳಿ' ಎನ್ನುತ್ತಿದ್ದಾರೆ: ಬಿ. ವೈ. ವಿಜಯೇಂದ್ರ