Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿರಾಶ್ರಿತರಿಗೆ ಆಹಾರ ವಿತರಣೆ ಮಾಡುವ ಮೂಲಕ ಶ್ರೀನಾಥ್ ಹುಟ್ಟುಹಬ್ಬ ಆಚರಣೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಆಹಾರ ವಿತರಣೆ ಮಾಡುವ ಮೂಲಕ ಇದು ನನ್ನ ಹುಟ್ಟುಹಬ್ಬವನ್ನು ಗೆಳೆಯರು  ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಸಾರ್ವಜನಿಕರು ತಮ್ಮ ವಿಶೇಷ ದಿನಗಳನ್ನು ದರ್ಗಾಜೋಗಿಹಳ್ಳಿಯಲ್ಲಿ ನಡೆಯುವ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿರಾಶ್ರಿತರಿಗೆ ಆಹಾರ ವಿತರಣೆ ಮಾಡುವ ಮೂಲಕ ಸಂಭ್ರಮಿಸಿ ಎಂದು ಸಮಾಜ ಸೇವಕ ಹಾಗೂ ಯುವ ಬಲಿಜ ಸಂಘದ ಅಧ್ಯಕ್ಷ  ಶ್ರೀನಾಥ್ ತಿಳಿಸಿದರು.

ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 2115 ನೇ ದಿನದ ನಿರಂತರ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಸಿದವರಿಗೆ ಆಹಾರ ವಿತರಣೆ, ಶಾಲಾ ಮಕ್ಕಳಿಗೆ ಅಗತ್ಯ ಪರಿಕರ ಹಾಗೂ ವಯೋವೃದ್ಧರಿಗೆ ಬಟ್ಟೆ ವಿತರಣೆ ಮಾಡುವ ಮೂಲಕ ನಮ್ಮ ಕೈಲಾದ ಸೇವೆಯನ್ನು ಮಾಡುವ ಮೂಲಕ ವಿಶೇಷ ದಿನವನ್ನು ಸಂಭ್ರಮಿಸಿದ್ದೇವೆ. ಇಂದಿನ ಈ ಕಾರ್ಯಕ್ರಮ ಅತ್ಯಂತ ಸಂತೋಷ ತಂದಿದೆ ಎಂದರು. 

 ಕರ್ನಾಟಕ ರಾಜ್ಯ ಛಾಯಾಗ್ರಾಹಕ ಸಂಘದ ನಿರ್ದೇಶಕ ರವಿ ವಡ್ಡರಹಳ್ಳಿ ಮಾತನಾಡಿ ಇಂದು ನಮ್ಮ ಆತ್ಮೀಯ ಗೆಳೆಯರಾದ ಶ್ರೀನಾಥ್ ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಅನ್ನದಾನ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತೇವೆ , ಕಳೆದ 2115 ದಿನಗಳಿಂದ ನಿತ್ಯ ನಿರಂತರ ಅನ್ನದಾನ ಮಾಡಿಕೊಂಡು ಬರುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ  ಶುಭವಾಗಲಿ. ನಿರಂತರ ಅನ್ನದಾಸೋಹ ಸಮಿತಿಗೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು. 

 ಸಮಾಜ ಸೇವಕರಾದ ಚೆನ್ನಕೃಷ್ಣ ಮಾತನಾಡಿ ಆತ್ಮೀಯ ಗೆಳೆಯರು ಸಮಾಜಸೇವಕರು ಆದ ಶ್ರೀನಾಥ್  ರವರ ಹುಟ್ಟುಹಬ್ಬವನ್ನು ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ನಿರ್ಗತಿಕ ಕಡುಬದವರಿಗೆ ಆಹಾರ, ವಯೋವೃದ್ದರಿಗೆ ಹಾಗೂ ಶಾಲಾ ಮಕ್ಕಳಿಗೆ ಅಗತ್ಯ ಪರಿಕರ ವಿತರಣೆ ಮಾಡುವ ಮೂಲಕ ಆಚರಿಸಿದ್ದೇವೆ. ಇಂತಹ ಅರ್ಥಪೂರ್ಣ ಆಚರಣೆ ಸದಾ ನೆಡೆಯಲಿ ಇಂತಹ ಮಹತ್ಕಾರ್ಯವನ್ನು  ಮಾಡಿಕೊಂಡು ಬರುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದರು.

ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ  ದಾನಿಗಳ ನೆರವಿನಿಂದ  ಕಳೆದ 2115 ದಿನಗಳಿಂದ  ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಇಂದು ಯುವ ಬಲಿಜ ಸಂಘದ ಅಧ್ಯಕ್ಷರು, ಸಮಾಜಸೇವಕರು ಆದ ಶ್ರೀನಾಥ್ ರವರ ಹುಟ್ಟುಹಬ್ಬದ ಸಂಭ್ರಮವನ್ನು ವಿಶೇಷವಾಗಿ  ಆಚರಿಸಲಾಗಿದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ  ಎಲ್ಲಾ ದಾನಿಗಳಿಗೆ  ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

ಈ ವೇಳೆ ಸ್ಥಳೀಯ ಪ್ರಮುಖರು, ನಿರಂತರ ಅನ್ನದಾಸೋಹ ಸಮಿತಿ ಸದಸ್ಯರು ಹಾಜರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಟ್ರಬಲ್ ಶೂಟರ್’ ಡಿ.ಕೆ. ಶಿವಕುಮಾರ್: ಮುಖ್ಯಮಂತ್ರಿ ಹುದ್ದೆಯ ಹಾದಿ ಮತ್ತು ಮಹತ್ವದ ವಿಶ್ಲೇಷಣೆ‘ಕನಕಪುರ ಬಂಡೆ’ ಡಿ.ಕೆ. ಶಿವಕುಮಾರ್ ರಾಜಕೀಯ ಜೀವನದ ರೋಚಕ ಹಾದಿಅಧಿಕಾರದ ಗದ್ದುಗೆಗೆ ತಾಳ್ಮೆ ಮತ್ತು ಹೋರಾಟದ ಪರ್ಯಾಯ ಹೆಸರು: ‘ಕನಕಪುರ ಬಂಡೆ’ ಡಿ.ಕೆ. ಶಿವಕುಮಾರ್ಎನ್.ವೈ.ಜಿ ಅವರಿಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ನಾಯಕರಾದ ಜಿ.ಒ ನಾಗರಾಜ್, ಕೆ.ಟಿ ರುದ್ರಮುನಿ ಒತ್ತಾಯಬತ್ತಿದ ನೆಲದ ಒಡಲಲ್ಲಿ ಚಿಗುರಿದ ಆಶಾಕಿರಣ: ಹಿರಿಯೂರಿನ ‘ಮುಕ್ತ ವಿಚಾರ ವೇದಿಕೆ’ ತಂದ ದೀಪದ ಕುಡಿಹಿರಿಯ ಮುತ್ಸದ್ದಿ ಎನ್.ವೈ. ಗೋಪಾಲಕೃಷ್ಣಗೆ ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ನಾಯಕರ ಒತ್ತಾಯಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯಯುತ ಪ್ರಾತಿನಿಧ್ಯಕ್ಕೆ ಆಗ್ರಹ:ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಷರತ್ತುಗಳನ್ನು ಸರಳೀಕರಣ ಮಾಡಿ ಆದೇಶ: ಕೆಯುಡಬ್ಲ್ಯೂಜೆ ಸ್ವಾಗತಜೆಡಿಎಸ್ ಬೂತ್ ಮಟ್ಟದ ಏಜೆಂಟ್‌ಗಳ ಕಾರ್ಯಾಗಾರ ಯಶಸ್ವಿ; ನಿಖಿಲ್ ಅಭಿನಂದನೆಜೋಧಪುರದಲ್ಲಿ ಕ್ರಾಂತಿ: ಸ್ವದೇಶಿ ನಿರ್ಮಿತ ‘ದಿವ್ಯಾಸ್ತ್ರ ಎಂಕೆ-1’ ಯುಎವಿ ಯಶಸ್ವಿ ಪರೀಕ್ಷೆ!