Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವ ಡಿ.ಸುಧಾಕರ್ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಎಲೆಕ್ಟ್ರಾನಿಕ್ ಸಿಟಿಯ ಕೃಷ್ಣ ಆರೋಗ್ಯ ವಿಜ್ಞಾನ ಸಂಸ್ಥೆಗೆ (
KIMS) ಭೇಟಿ ನೀಡಿ, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರ ಆರೋಗ್ಯ ವಿಚಾರಿಸಿದರು.

ಆಸ್ಪತ್ರೆಯಲ್ಲಿ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ವೈದ್ಯರಿಂದ ವಿವರವಾದ ಮಾಹಿತಿ ಪಡೆದರು. ಬಳಿಕ ಸುಧಾಕರ್ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಧೈರ್ಯ ತುಂಬಿದರು. ಸಚಿವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಸಿಎಂ ಇದೇ ಸಂದರ್ಭದಲ್ಲಿ ಹಾರೈಸಿದರು.

ಗಣ್ಯರ ಭೇಟಿ:
ಮುಖ್ಯಮಂತ್ರಿಗಳ ಜೊತೆಯಲ್ಲಿ ಸಚಿವರಾದ ಜಮೀರ್ ಅಹ್ಮದ್ ಖಾನ್
, ಬೈರತಿ ಸುರೇಶ್, ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹಾಗೂ ಮಾಯಕೊಂಡ ಶಾಸಕ ಬಸವಂತಪ್ಪ ಅವರು ಉಪಸ್ಥಿತರಿದ್ದು, ಸಚಿವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.

news_1777123291_1_845.webp

 

news_1777123291_2_280.webp

 

ಸದ್ಯ ಸಚಿವ ಸುಧಾಕರ್ ಅವರು ವೈದ್ಯರ ನಿಗಾದಲ್ಲಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿರಿಯೂರು ಉಪಚುನಾವಣೆ: ಶೋಕಿ ನಾಯಕರಿಗೆ ‘ತಕ್ಕ ಪಾಠ’ ಕಲಿಸಲು ಹಿರಿಯೂರು ಮತದಾರ ಸಜ್ಜು!ಲೋಹಿತ್‌ ಕುಮಾರ್ ಪಿ ಅವರಿಗೆ ಪಿಎಚ್.ಡಿ. ಪದವಿ ಪ್ರದಾನ: ಅಭಿನಂದನೆಗಳ ಮಹಾಪೂರಫ್ಯಾಕ್ಟರಿಯಿಂದ ಹೊರಬರುತ್ತಿರುವ ದುರ್ವಾಸನೆ: ದೊಡ್ಡಬಳ್ಳಾಪುರದ ವರದನಹಳ್ಳಿ ಗ್ರಾಮಸ್ಥರು ಹೈರಾಣು!ಗ್ರಾಮ ಪಂಚಾಯಿತಿಯಲ್ಲಿ ರಾತ್ರಿ ವೇಳೆ ರಹಸ್ಯ ಕೆಲಸ: ಗ್ರಾಮಸ್ಥರಲ್ಲಿ ಹೆಚ್ಚಿದ ಕಳ್ಳ ವ್ಯವಹಾರದ ಸಂಶಯ!ಚಿತ್ರದುರ್ಗ ಸಖಿ ಒನ್ ಸ್ಟಾಪ್ ಸೆಂಟರ್: ಸೋಶಿಯಲ್ ವರ್ಕರ್ ಹುದ್ದೆಗೆ ಅರ್ಜಿ ಆಹ್ವಾನಹಿರಿಯೂರು ನಗರಸಭೆ: ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನಮೇ 17ರಂದು ಪೊಲೀಸ್ ಅಧಿಕಾರಿಗಳ ಸ್ನೇಹ ಸಮ್ಮೀಲನಹೊಸ ರೈಲ್ವೆ ಕಾಮಗಾರಿಗಳ ಪರಾಮರ್ಶೆ- ಸಚಿವ ವಿ. ಸೋಮಣ್ಣಇ-ಬಸ್, ಇ-ಟ್ರಾಕ್ ಮತ್ತು ಹಸಿರು ಸಾರಿಗೆ, ಸುಸ್ಥಿರ ಕೈಗಾರಿಕಾ ಭವಿಷ್ಯಕ್ಕೆ ಒತ್ತು:  ಕುಮಾರಸ್ವಾಮಿದೇಶದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಮತ್ತಷ್ಟು ವೇಗ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ