Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಕ್ಕಳು ಪೂರ್ವಾಗ್ರಹ ಪೀಡಿತ ಭಾವನೆಗಳನ್ನು ಇಟ್ಟುಕೊಳ್ಳಬಾರದು: ಡಾ.ಭೂಮಿಕ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಮಕ್ಕಳು ಬೇರೆಯವರ ಬಗ್ಗೆ ಪೂರ್ವಾಗ್ರಹ ಪೀಡಿತ ಮನೋಭಾವನೆಗಳನ್ನು ಬೆಳೆಸಿಕೊಳ್ಳದೇ ಸಕಾರಾತ್ಮಕ ದೃಷ್ಟಿಕೋನವನ್ನು  ಹೊಂದಿರಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕಿ ಡಾ.ಭೂಮಿಕ ಅಭಿಪ್ರಾಯಪಟ್ಟರು.

 

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ "ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ" ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ನೀತಿಕಥೆ  ಹೇಳುತ್ತಾ  ಮಾತನಾಡಿದರು.

 

ಶಿಬಿರದ ನಿಮಿತ್ತ  ಯತೀಶ್ ಎಂ ಸಿದ್ದಾಪುರ ನೇತೃತ್ವದಲ್ಲಿ ಮಕ್ಕಳಿಂದ ಧ್ಯಾನ, ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ , ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಗಳ ಪಠಣ,ಭಜನೆ ನಡೆದರೆ ಸಂತೋಷ್ ಅವರು ವಿವಿಧ ಆಟಗಳನ್ನು ಆಡಿಸಿದರು.

 

ಅಮ್ಮಾ ಶಾರದಾಮಾತೆ ಹೇಳುವಿಕೆ, ಜೈಕಾರ, ಪ್ರಸಾದ ವಿನಿಯೋಗ ನಡೆಯಿತು. ತರಗತಿಯಲ್ಲಿ ಮಾತಾಜೀ ತ್ಯಾಗಮಯೀ, ಹರ್ಷಿತಾ, ಚರಣ್ಯ, ಸಹನಾ, ವಿವಿಕ್ತ, ಯಶಸ್, ವೈಷ್ಣವಿ, ಚಿರಣ್ಯ,ಭಾವನಾ, ವರ್ಷ ಪಾಲ್ಗೊಂಡಿದ್ದರು.

 

 

 

 

 

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಗೃಹಲಕ್ಷ್ಮಿ’ ಯೋಜನೆಯಲ್ಲಿ 100 ಕೋಟಿ ದುರುಪಯೋಗ-ಡಿಸಿಎಂಜಿಂಕೆಯನ್ನು ಜೀವಂತವಾಗಿ ನುಂಗಿದ್ದ ಬೃಹತ್ ಗಾತ್ರದ ಹೆಬ್ಬಾವು ಸೆರೆವೃದ್ಧೆಯನ್ನು ಡಿಜಿಟಲ್​ ಅರೆಸ್ಟ್ ಮಾಡಿ 24 ಕೋಟಿ ರೂ ವಂಚಿಸಿದ್ದ 6 ಆರೋಪಿಗಳ ಬಂಧನಮೇ 29 ರಿಂದಲೇ ರಾಜ್ಯಾದ್ಯಂತ ಶಾಲೆಗಳು ಆರಂಭಸಿಎಂ ಪಟ್ಟದ ಜಿದ್ದಾಜಿದ್ದಿನ ಆಟಕ್ಕೆ ಇತಿಶ್ರೀ ಹಾಡಲು ಅಖಾಡಕ್ಕಿಳಿದ ಎಐಸಿಸಿ ವರಿಷ್ಠರುನೀಟ್ ಪತ್ರಿಕೆ ಸೋರಿಕೆಯಿಂದ ಪಾಠ ಕಲಿಯದಿರುವುದು ಬೇಸರದ ಸಂಗತಿ- ಸುಪ್ರೀಂಖಾಸಗಿ ಆಸ್ಪತ್ರೆ ಶೌಚಾಲಯದಲ್ಲಿ ಗರ್ಭಿಣಿ ಮಹಿಳೆ ಫೋಟೋ/ವಿಡಿಯೋ ಚಿತ್ರೀಕರಣಭಾರೀ ಮಳೆ ಸಾಧ್ಯತೆ, ಚಿತ್ರದುರ್ಗ ಸೇರಿ 7 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ- ಡಿಸಿಎಂ ಡಿ.ಕೆ ಶಿವಕುಮಾರ್ಭಾರಿ ಪೈಪೋಟಿ ಮತ್ತು ಕುತೂಹಲ ಸೃಷ್ಠಿಸಿದ ರಾಜ್ಯಸಭಾ ಚುನಾವಣೆ