ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಅಬಕಾರಿ ಇಲಾಖೆಯ ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅರ್ಜಿದಾರರಿಗೆ ಜುಲೈ ೧೩ ರಂದು ಬೆಳಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಜಿ.ಪಂ. ಮಿನಿ ಸಭಾಂಗಣದಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತ ಅರ್ಜಿದಾರರು ತರಬೇತಿಯಲ್ಲಿ ಭಾಗವಹಿಸಬಹುದು.
ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ಇದೇ ಜುಲೈ೧ರ ಅನ್ವಯ (ಸಂಖ್ಯೆ:ಎಫ್ಡಿ/೫೨/ಇಎಫ್‌ಎಲ್/೨೦೨೫,) ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು ಹನ್ನೆರಡು ಸಿಎಲ್-೨ಎ (ಚಿಕ್ಕಮಗಳೂರು, ಕಡೂರು, ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ ಹಾಗೂ ತರೀಕೆರೆಗೆ ತಲಾ ೨) ಸನ್ನದುಗಳನ್ನು hಣಣಠಿs://ತಿತಿತಿ.msಣಛಿeಛಿommeಡಿಛಿe.ಛಿom ಪೋರ್ಟಲ್‌ನಲ್ಲಿ ಇ-ಹರಾಜು ಮಾಡಲಾಗುವುದು. ಈ ಬಗ್ಗೆ ಹೆಚ್ಚಿನ ವಿವರವು ಸರ್ಕಾರದ ದಿನಾಂಕ:೦೧-೦೭-೨೦೨೬ರ ಅಧಿಸೂಚನೆ ಸಂಖ್ಯೆ: ಎಫ್ಡಿ/೫೨/ಇಎಫ್‌ಎಲ್/೨೦೨೫ರಲ್ಲಿ ಲಭ್ಯವಿದ್ದು, ಇಲಾಖೆಯ ವೆಬ್‌ಸೈಟ್: hಣಣಠಿs://sಣಚಿಣeexಛಿise.ಞಚಿಡಿಟಿಚಿಣಚಿಞಚಿ.gov.iಟಿ/eಟಿ ರಲ್ಲಿ ಈ ಅಧಿಸೂಚನೆಯನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗೆ ಅಬಕಾರಿ ನಿರೀಕ್ಷಕರಾದ ಚಿಕ್ಕಮಗಳೂರು: ಮಮತಾ ಎನ್.ಎ (೯೪೪೮೨೩೩೦೬೬), ಕಡೂರು: ಸಂದೀಪ್ ಎಲ್.ಸಿ. (೭೦೨೨೨೬೦೭೩೦), ತರೀಕೆರೆ ಶ್ರೀಕಾಂತ್ ಪಿ.(೯೯೬೪೦೦೫೫೩೬), ಮೂಡಿಗೆರೆ: ನಾರಾಯಣ್ ಎಂ.(೯೬೨೦೫೫೦೯೨೦), ಕೊಪ್ಪ: ದಿಲೀಪ್ ಕುಮಾರ್ (೯೭೩೧೨೬೫೦೦೨) ಹಾಗೂ ಎನ್.ಆರ್.ಪುರ: ಶೇಖರ್ ಎಂ.ಆರ್ (೯೪೪೮೩೦೯೪೯೯) ಅವರನ್ನು ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ಹಾಗೂ ನೋಡಲ್ ಅಧಿಕಾರಿಗಳಾದ ರೂಪ ಎಂ (೯೪೪೯೫೯೭೨೦೨) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



