LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕನಿಷ್ಠ ವೇತನ ಜಾರಿಗೊಳಿಸಲು ಒತ್ತಾಯಿಸಿ ಸಿಐಟಿಯು ಹೋರಾಟ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕನಿಷ್ಠ ವೇತನವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೋರಾಡಿಸಿರುವ ಅಧಿಸೂಚನೆ ಮತ್ತು ಸಮಿತಿ ರಚನೆ ಕ್ರಮವನ್ನು ವಾಪಾಸ್ ಪಡೆದು 22 ಮೇ 2026 ರಂದು ಪ್ರಕಟಿಸಿರುವ ಪರಿಷ್ಕೃತ ಕನಿಷ್ಟ ವೇತನ ಜಾರಿಗೊಳಿಸಬೇಕು ಇದನ್ನು ಒತ್ತಾಯಸಿ ರಾಜ್ಯಾದ್ಯಾಂತ ಆಗಸ್ಟ್ 18ರಿಂದ 21ರ ವರೆಗೆ ಸಿಐಟಿಯು ಹೋರಾಟಗಳಿಗೆ ಕರೆ ನೀಡಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು ) ಬೆಂಗಳೂರು ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಪಿ ಎ ವೆಂಕಟೇಶ್ ತಿಳಿಸಿದರು.

ನಗರದ  ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು ) ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಸ್ತುತ ಅಧಿಸೂಚನೆ ಅಡಿ ಲಕ್ಷಾಂತರ ಮಹಿಳೆಯರು ಕೆಲಸ ಮಾಡುವ ಬೀಡಿ, ಪ್ಲಾಂಟೇಶನ್, ಕೈಮಗ್ಗ ಮತ್ತು ಗಾರ್ಮೆಂಟ್ಸ್, ಕೃಷಿ ವ್ಯವಸಾಯ ಉತ್ಪನ್ನ ಮಾರುಕಟ್ಟೆ (APMC ) ಗಳಲ್ಲಿ ಕೆಲಸ ಮಾಡುವ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರನ್ನೊಳಗೊಂಡ ಒಟ್ಟು 19 ಕೈಗಾರಿಕೆಗಳಿಗೆ ಅನ್ವಯವಾಗುವುದಿಲ್ಲ. ಅದು ಮಾತ್ರವಲ್ಲದೆ ವೇತನ ಹೆಚ್ಚಳವನ್ನು 2022 ರಿಂದ ಅನ್ವಯಿಸುವ ಬದಲಿಗೆ 2026 ಮೇ 22 ರಿಂದ ಅನ್ವಯಿಸಿರುವುದರಿಂದ ರಾಜ್ಯದ 1 ಕೋಟಿ 77 ಲಕ್ಷಕಾರ್ಮಿಕರು 4 ವರ್ಷಗಳು ವೇತನ ಹೆಚ್ಚಳದಿಂದ ವಂಚಿತರಾಗಿದ್ದಾರೆ.ರಾಜ್ಯಸರ್ಕಾರದ ಈ ಕ್ರಮವನ್ನು ಸಿಐಟಿಯು ರಾಜ್ಯ ಸಮಿತಿಯು ಖಂಡಿಸುತ್ತದೆ. ಮತ್ತು ಸಮಿತಿ ರಚನೆ ಕ್ರಮ ವಾಪಾಸ್ಸು ಪಡೆದು 22 ಮೇ 2026 ರಂದು ಪ್ರಕಟಿಸಿರುವ ಪರಿಷ್ಕೃತ ಕನಿಷ್ಟ ವೇತನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಾಂತ ಈ ಮುಂದಿನ ಹೋರಾಟಗಳಿಗೆ ಕರೆ ನೀಡಿದೆ ಎಂದರು.

60% ವೇತನ ಹೆಚ್ಚಳವು ಬಂಡವಾಳಕ್ಕೆ ದೊಡ್ಡ ಹೊರೆಯಾಗುವುದಿಲ್ಲ-
22 ಮೇ 2026 ರಂದುರಾಜ್ಯ ಸರ್ಕಾರವು ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. 84 ಉದ್ಯಮಗಳಿಗೆ ಏಕರೂಪ/ಸಾಮಾನ್ಯ ಅಧಿಸೂಚನೆ ಬಂದಿದೆ ಮತ್ತು 4 ವಲಯ (
Zone) ಗಳಿಗೆ ಬದಲಿಗೆ 3 ವಲಯಗಳನ್ನಾಗಿ ಮಾರ್ಪಡಿಸಲಾಗಿದೆ. ಕಾರ್ಮಿಕ ಚಳುವಳಿಯ ದಶಕಗಳ ಬೇಡಿಕೆ ಇದಾಗಿತ್ತು. ಇದು ಕಾರ್ಮಿಕ ಚಳುವಳಿಯ ನಿರಂತರ ಹೋರಾಟದ ಪ್ರತಿಫಲವಾಗಿತ್ತು. ಆದರೆ 2017ರ ನಂತರದ ಸುಮಾರು 9 ವರ್ಷಗಳ ನಂತರ ಆಗಿರುವ ಸುಮಾರು 60% ವೇತನ ಹೆಚ್ಚಳವು ಬಂಡವಾಳಕ್ಕೆ ದೊಡ್ಡ ಹೊರೆಯಾಗುವುದಿಲ್ಲ. ಬದಲಾಗಿ ಸುಮಾರು ಒಂದು ದಶಕದ ಬೆಲೆ ಏರಿಕೆಗೆ ಸೂಕ್ತವಾದ ಹೆಚ್ಚಳವಲ್ಲ ಎಂಬುದೇ ಸತ್ಯ ಎಂದು ಮುಖಂಡರು ಅಭಿಪ್ರಾಯವ್ಯಕ್ತಪಡಿಸಿದರು.

  ಬೆಂಗಳೂರು ಗ್ರಾಮಾಂತರ  ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು )  ಜಿಲ್ಲಾಧ್ಯಕ್ಷ ಸಿ ನರಸಿಂಹಮೂರ್ತಿ ಮಾತನಾಡಿ  ಪರಿಷ್ಕೃತ ಕನಿಷ್ಟ ವೇತನದ ಹೆಚ್ಚಳದಿಂದ ಹಣಕಾಸಿನ ಹೊರೆಬರುವುದರಿಂದ ಈ ಆದೇಶವನ್ನು ತಡೆ ಹಿಡಿಯಬೇಕು ಎಂಬ ಅಭಿಪ್ರಾಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ರವರ ನೇತೃತ್ವದಲ್ಲಿ ಸಮಿತಿ ರಚಿಸಿ ಕನಿಷ್ಟ ವೇತನ ಜಾರಿಯ ಅಧಿಕೃತ ಅಧಿಸೂಚನೆಯನ್ನು ತಡೆಹಿಡಿದಿದ್ದಾರೆ ಕಾರ್ಮಿಕ ವಿರೋಧಿ ನೀತಿ ಸರ್ಕಾರಕ್ಕೆ ಸಲ್ಲದು ಎಂದರು.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಕರೆ ನೀಡಿರುವ ಹೋರಾಟ ಕುರಿತು ಮಾಹಿತಿ, 2026 ಆಗಸ್ಟ್ 18 ರಂದು ಗ್ರಾಮ ಪಂಚಾಯಿತಿ ನೌಕರರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ್ದೇವೆ.

ಆ.19 ರಂದು ಕಾಯಂಮೇತರ ನೌಕರರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದು ಆ.20 ರಂದು ಕರ್ನಾಟಕ ವಿದ್ಯುತ್ ಶಕ್ತಿ ಕಾರ್ಮಿಕರು ಎಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.ಆ.21ರಂದು ಹಾಸ್ಟೆಲ್ ನೌಕರರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹೋರಾಟ ನಡೆಸಲಿದ್ದಾರೆ ಎಂದರು.

ಮಾಲೀಕರ ವಾದದಲ್ಲಿ ಸತ್ಯವಿಲ್ಲ-
ರಾಜ್ಯದಲ್ಲಿ ಸಣ್ಣ
, ಅತಿ ಸಣ್ಣ ಮತ್ತು ಮಧ್ಯಮಕೈಗಾರಿಕಾ ಉದ್ದಿಮೆಗಳು ತಮ್ಮದೇಆದ ಸ್ವಂತ ಉತ್ಪನ್ನಗಳನ್ನು ಮಾಡುವುದಿಲ್ಲ. ದೊಡ್ಡ ಬಂಡವಾಳಗಾರರಿಗೆ ಅಗತ್ಯವಾದ ಮೂಲ ಹಾಗು ಬಿಡಿಭಾಗಗಳನ್ನು ಉತ್ಪಾದನೆ ಮಾಡುತ್ತಾರೆ ಅಷ್ಟೆ. ಅವರಿಗೆ ಉತ್ಪಾದನಾ ವೆಚ್ಚವನ್ನು ಕೊಡಬೇಕಾದವರು ದೊಡ್ಡಮಾಲಿಕರೇ ಆಗಿರುತ್ತಾರೆ. ವೇತನದ ಹೆಚ್ಚಳದಿಂದ ಆಗುವ ಉತ್ಪಾದನಾ ವೆಚ್ಚವನ್ನು ದೊಡ್ಡ ಬಂಡವಾಳಗಾರರು ಬರಿಸಿದಲ್ಲಿ ಸಣ್ಣ ಬಂಡವಾಳಿಗರಿಗೆ ಸೂಚಿತ ವೇತನವನ್ನು ಕಾರ್ಮಿಕರಿಗೆ ನೀಡುವುದು ಹೊರೆಯಾಗುವುದಿಲ್ಲ. ಆದರೆ ಬಹುರಾಷ್ಟ್ರೀಯ ಹಾಗು ದೇಶೀಯ ಕಾರ್ಪೊರೇಟ್ ಕಂಪನಿಗಳು ಈ ಸಣ್ಣ ಮಾಲಿಕರನ್ನು ಬಳಸಿಕೊಂಡು ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು  ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿಐಟಿಯು ರಾಜ್ಯ ಸಮಿತಿಯ ಕರೆ ನೀಡಿರುವ ಈ ಹೋರಾಟಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ನಡೆಸುತ್ತಿದ್ದೇವೆ ಕಾರ್ಮಿಕರ ಹಿತ ಕಾಯುವ ನಿಟ್ಟಿನಲ್ಲಿ ಎಲ್ಲಾ ವರ್ಗಗಳ ಕಾರ್ಮಿಕರು ಒಟ್ಟಾಗಿ ಹೋರಾಟದಲ್ಲಿ ಪಾಲ್ಗೊಂಡು ಕಾರ್ಮಿಕರ ಧ್ವನಿಯಾಗಬೇಕೆಂದು ಮನವಿ ಮಾಡಿದರು ಎಂದರು.

ಈ ವೇಳೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು ) ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ನರಸಿಂಹಮೂರ್ತಿ ಸಿ, ಪ್ರಧಾನ ಕಾರ್ಯದರ್ಶಿ ಪಿ ಎ ವೆಂಕಟೇಶ್ ಖಜಾಂಚಿ ಮೋಹನ್ ಬಾಬು ಎಚ್ ಏನ್, ಉಪಾಧ್ಯಕ್ಷರಾದ ಎಲ್ ಆರ್ ನಳಿನಾಕ್ಷಿ, ಶಾಂಬಣ್ಣ ( ಎ ಎಸ್ ಏನ್ ) ವಿಷಕಂಠ, ಕಾರ್ಯದರ್ಶಿ ಅಂಜುಮ್ ಖಾನ್, ಎಲ್ ಸಿ ಸುಮಾ, ಅನಿಲ್ ಗುಪ್ತ, ಮುಖಂಡರಾದ ಮಣೀಶ್ ಶರ್ಮ, ಬೀರೇಶ್ ಗುಪ್ತ ಸೇರಿದಂತೆ ಹಲವರು ಹಾಜರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಪಟ್ಟು, ಪರಿಷತ್‌ನಲ್ಲಿ, ಬಳ್ಳಾರಿಯಲ್ಲಿ ಅಹೋರಾತ್ರಿ ಧರಣಿ!ಪ್ರಿಯಕರನ ಜೊತೆ ಸೇರಿ ಪುತ್ರ, ಪತಿಯನ್ನೇ ಕೊಂದ ಪತ್ನಿ ಬಂಧನ!"ನೀವು ವೇದಾಂತಿ ಆಗಿ, ಸಿಎಂ ಸ್ಥಾನ ಸೆಟ್ ಆಗ್ತಿಲ್ಲ": ಡಿಕೆಶಿಗೆ ಸುನೀಲ್ ಕುಮಾರ್ ಸಲಹೆ, ಸದನದಲ್ಲಿ ನಗೆಯ ಅಲೆ!ಕಾಂಗ್ರೆಸ್‌ಶಾಸಕರ ಅಸಮಾಧಾನ ಶಮನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್KPSC ನೇಮಕಾತಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮನೆ, ಕಚೇರಿ ಸೇರಿ 21 ಕಡೆ ಇಡಿ ದಾಳಿ‘ನಮ್ಮ ರಾಜ್ಯ ರಕ್ಷಣೆ ನಮಗೆ ಗೊತ್ತು, ಹಸ್ತಕ್ಷೇಪ ಬೇಡ’: ತಮಿಳುನಾಡು ನಾಯಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆವಿದ್ಯಾರ್ಥಿ ಪ್ರತಿಭಟನೆ ಮೇಲಿನ ಪೊಲೀಸ್ ದೌರ್ಜನ್ಯ: ಉನ್ನತಾಧಿಕಾರ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ನಿರ್ಧಾರ‘ವಂದೇ ಮಾತರಂ’ ವಿವಾದ: ಸೋನಿಯಾ-ರಾಹುಲ್ ವಿರುದ್ಧ ದೂರು, ಖರ್ಗೆ ವಾಗ್ದಾಳಿKPSC ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅಮಾನತು ಆದೇಶ ವಜಾ: ಮರುನೇಮಕಕ್ಕೆ ಹೈಕೋರ್ಟ್ ನಿರ್ದೇಶನ ‘ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ’: ಕಾಂಗ್ರೆಸ್‌ನಾಯಕರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನೇರ ಸವಾಲು!