Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೋಟಿ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿ ತೆರವು –ಬೃಹತ್ ಕಾರ್ಯಾಚರಣೆ!

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ನಗರದಲ್ಲಿ ಸರ್ಕಾರಿ ಜಮೀನು ಒತ್ತುವರಿದಾರರ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದ್ದು, ಸೋಮವಾರ ಬೆಳ್ಳಂಬೆಳಗ್ಗೆ ಜೆಸಿಬಿಗಳ ಮೂಲಕ ಬೃಹತ್ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಒತ್ತುವರಿದಾರರಿಗೆ ಸಿಂಹಸ್ವಪ್ನವಾಗಿದೆ.

ನಗರದ ಸರ್ವೆ ನಂಬರ್ 607/1ಎ 1ಎ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆ ಹಾಗೂ ಸರ್ಕಾರಿ ಜಮೀನು ಆಕ್ರಮಿಸಿಕೊಂಡು ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆಯನ್ನು ಜಿಲ್ಲಾಡಳಿತದ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಮಾಜಿ ಪ್ರಭಾವಿ ಸಚಿವರಿಗೆ ಸೇರಿದ ಜಮೀನು ಎನ್ನಲಾದ ಈ ಪ್ರದೇಶದಲ್ಲಿ ಸುಮಾರು 1 ಎಕರೆ 23 ಸೆಂಟ್ಸ್ ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲಾಗಿತ್ತು. ಸಾರ್ವಜನಿಕ ರಸ್ತೆ ಬಂದ್ ಆಗಿರುವ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ, ಬಿಗಿ ಪೊಲೀಸ್ ಭದ್ರತೆಯೊಂದಿಗೆ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಾಂಪೌಂಡ್ ಕೆಡವಿದ್ದಾರೆ.

ಸರ್ಕಾರಕ್ಕೆ ಮರಳಿದ 4 ಎಕರೆ ಆಸ್ತಿ: ಇದೇ ಸರ್ವೆ ನಂಬರ್‌ನಲ್ಲಿ ಸುಮಾರು 14 ವರ್ಷಗಳ ಹಿಂದೆ ಹಿಂದುಳಿದ ಹಾಗೂ ಬೌದ್ಧಿಕ ಅಸ್ವಸ್ಥತೆ ಹೊಂದಿರುವ ಮಕ್ಕಳ ಕಲ್ಯಾಣಕ್ಕಾಗಿ 'ಆರೋಗ್ಯ ನಿಕೇತನ ಟ್ರಸ್ಟ್‌'ಗೆ 2 ಎಕರೆ 77 ಸೆಂಟ್ಸ್ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ನಿಯಮಾವಳಿಯಂತೆ ಮಂಜೂರಾದ 2 ವರ್ಷಗಳೊಳಗೆ ಜಮೀನನ್ನು ನಿಗದಿತ ಉದ್ದೇಶಕ್ಕೆ ಬಳಸಿಕೊಳ್ಳದ ಕಾರಣ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆ ಜಮೀನನ್ನು ಸರ್ಕಾರಿ ವಶಕ್ಕೆ ಹಿಂಪಡೆಯಲಾಗಿದೆ. ಈ ಮೂಲಕ ಒಂದೇ ಸರ್ವೆ ನಂಬರ್‌ನಲ್ಲಿ ಒಟ್ಟು ಸುಮಾರು 4 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 700 ಎಕರೆ ತೆರವು: ಈ ಕುರಿತು ಪ್ರತಿಕ್ರಿಯಿಸಿರುವ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, "ಜಿಲ್ಲೆಯಲ್ಲಿ ಸರ್ಕಾರಿ ಆಸ್ತಿಗಳ ಸಂರಕ್ಷಣೆಗಾಗಿ ಟಾಸ್ಕ್‌ಫೋರ್ಸ್ ರಚನೆಯಾದ ಬಳಿಕ ಈವರೆಗೆ ಸುಮಾರು 150 ಎಕರೆ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಇದುವರೆಗೆ 700 ಎಕರೆಗೂ ಅಧಿಕ ಪ್ರದೇಶದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

ಸರ್ಕಾರಿ ಆಸ್ತಿ ಹಾಗೂ ಸಾರ್ವಜನಿಕ ರಸ್ತೆಗಳನ್ನು ಅತಿಕ್ರಮಿಸಿಕೊಂಡಿರುವ ಪ್ರಭಾವಿಗಳ ವಿರುದ್ಧ ಮುಲಾಜಿಲ್ಲದೆ ಮುಂದಿನ ದಿನಗಳಲ್ಲಿಯೂ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಜಿಲ್ಲಾಡಳಿತ ರವಾನಿಸಿದೆ.

 

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಾವಳಿ ಸಂಭ್ರಮದ ನಡುವೆ ದುರಂತ: ಚಿತ್ರದುರ್ಗದಲ್ಲಿ ಹೊತ್ತಿ ಉರಿದ ಮೂರು ಲಾರಿಗಳು!ದೀಪಾವಳಿ ದುರಂತ: ರಾಕೆಟ್ ಪಟಾಕಿ ಸ್ಫೋಟಗೊಂಡು 10 ವರ್ಷದ ಬಾಲಕ ಸಾವುಹೈಕೋರ್ಟ್ ಕಳವಳ: ಉಚಿತ ಯೋಜನೆಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ, ಸಾಮಾನ್ಯ ಜನರ ಬದುಕು ಅಯೋಮಯ4 ಪಥದ ಎಲಿವೇಟೆಡ್‌ಕಾರಿಡಾರ್‌ನಿರ್ಮಾಣ: ಸಂಚಾರ ಮಾರ್ಗ ಬದಲಾವಣೆಅರಮನೆ ವಶಕ್ಕೆ ಕಾರ್ಯಾಂಗದ ದುರ್ಬಳಕೆ: ಸಂಸದ ಯದುವೀರ್ ವಾಗ್ದಾಳಿಮಾಟಮಂತ್ರ, ಪೂಜೆ ಹೆಸರಲ್ಲಿ ಕೋಟ್ಯಂತರ ವಂಚನೆ: ಹೈಕೋರ್ಟ್ ಕಳವಳ, ಆರೋಪಿಗಳ ಅರ್ಜಿ ವಜಾಸಿನಿಮೀಯ ಚೇಸಿಂಗ್‌ನಡೆಸಿ 'ಹಿಟ್‌ಆ್ಯಂಡ್‌ರನ್‌' ಖದೀಮನ ಬಂಧಿಸಿದ ಪೊಲೀಸರು; ಕಾರು ಡಿಕ್ಕಿಯಾಗಿ ಇಬ್ಬರು ದಾರುಣ ಸಾವುಹಾಸನ ಲಂಚದ ಆರೋಪ ಪ್ರಕರಣ: ಡಿಸಿ ಆಪ್ತ ಸಹಾಯಕನಿಂದ ದೂರು ದಾಖಲು, 'ಚಾಟ್‌ಗಳು ನಕಲಿ' ಎಂದ ಶಶಿಕಿರಣ್ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಲಿಸ್ ತನಿಖೆ, ತಪಾಸಣೆ ಚುರುಕುಎಥೆನಾಲ್ ಮಿಶ್ರಣ: ತೈಲ ಕಂಪನಿಗಳ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ